ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಎರಡನೇ ವಾರ ನಡೆಯುತ್ತಿದ್ದು, ಈ ವಾರ ಎಲ್ಲ ಸ್ಪರ್ಧಿಗಳು ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ. ಮನೆಯ ಮೂಲ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಬಿಗ್ ಬಾಸ್ ಇಡೀ ಮನೆ ಸದಸ್ಯರನ್ನು ನಾಮಿನೇಟ್ ಮಾಡಿದ್ದಾರೆ. ಆದರೀಗ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಮೂಲಗಳ ಪ್ರಕಾರ, ಬಿಗ್ ಬಾಸ್ ಮನೆಯಲ್ಲಿ ಮೂರು ಸ್ಪರ್ಧಿಗಳು ಸೇಫ್ ಆಗಿದ್ದಾರಂತೆ.
ನಿನ್ನೆ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ಗೆ ತಯಾರಿ ಮಾಡಿಕೊಳ್ಳಲು ಪರದೆಯನ್ನು ಇಳಿಸಲಾಗುತ್ತದೆ. ಆದರೆ, ಕೆಲ ಸ್ಪರ್ಧಿಗಳು ಕದ್ದು ಮುಚ್ಚಿ ಹೊರಗಡೆ ಏನು ಮಾಡುತ್ತಿದ್ದಾರೆ ಎಂಬುದನ್ನು ನೋಡಿದ್ದಾರೆ. ಮೊದಲಿಗೆ ಇಣುಕಿ ಬಂದ ಮಾನಸ ಅವರು, ಶಿಶಿರ್ ಬಳಿ ಬೆಲ್ಟ್ ಕಟ್ಟಿಕೊಂಡು ಓಡೋ ಥರ ಇದೆ ಎಂದಿದ್ದಾರೆ. ಇದು ಬಿಗ್ ಬಾಸ್ ಗಮನಕ್ಕೆ ಬಂದು, ‘ಲೈನ್ಸ್ ಡೌನ್ ಆಗಿದ್ದಾಗ, ಅದರಿಂದ ಆಚೆಗೆ ಇಣುಕಿ ನೋಡಬಾರದು ಎಂಬುದು ಈ ಮನೆಯ ತುಂಬ ಮುಖ್ಯವಾದ ನಿಯಮ. ಈಗಷ್ಟೇ ಈ ನಿಯಮ ಉಲ್ಲಂಘಿಸಿದ್ದಾರೆ. ಈ ಕ್ಷಣದಿಂದ ಮನೆಯ ಎಲ್ಲಾ ಸದಸ್ಯರನ್ನು ಬಿಗ್ ಬಾಸ್ ನಾಮಿನೇಟ್ ಮಾಡುತ್ತಿದ್ದಾರೆ’ ಎಂದು ಹೇಳಿದ್ದರು.
ಆದರೀಗ ಬಂದಿರುವ ಮಾಹಿತಿಯ ಪ್ರಕಾರ, ಇಂದಿನ ನಾಮಿನೇಷನ್ ಪ್ರಕ್ರಿಯೆಯಲ್ಲಿ ನರಕ ವಾಸಿಯಾದ ಚೈತ್ರಾ ಕುಂದಾಪುರ ಸೇಫ್ ಆಗಿದ್ದಾರಂತೆ. ಇವರ ಜೊತೆಗೆ ಶಿಶಿರ್ ಮತ್ತು ಗೋಲ್ಡ್ ಸುರೇಶ್ ಕೂಡ ಸೇವ್ ಆಗಿದ್ದಾರೆ ಎನ್ನಲಾಗಿದೆ. ಇಂದು ನರಕ ವಾಸಿಗಳು ಟೀಮ್ ಟಾಸ್ಕ್ ಗೆಲ್ಲುತ್ತದೆ. ಇದರಲ್ಲಿ ಮೋಕ್ಷಿತ ಅವರು ಶಿಶಿರ್, ಚೈತ್ರ ಕುಂದಾಪುರ ಮತ್ತು ಗೋಲ್ಡ್ ಸುರೇಶ್ ಅವರನ್ನು ಸೇವ್ ಮಾಡುತ್ತಾರೆ. ಹಾಗೆಯೆ ಐಶ್ವರ್ಯ ಅವರನ್ನು ನರಕಕ್ಕೆ ಹಾಕಲಾಗುತ್ತದೆ ಎಂಬ ಸುದ್ದಿ ಹೊರಬಿದ್ದಿದೆ.
ಹಂಸ ವಿರುದ್ಧ ತಿರುಗಿ ನಿಂತ ಮನೆ ಸದಸ್ಯರು:
ಟಾಸ್ಕ್ ಮಧ್ಯೆ ಕ್ಯಾಪ್ಟನ್ ಹಂಸ ಅವರು ತೆಗೆದುಕೊಂಡ ಕೆಲ ನಿರ್ಧಾರಗಳು ಮನೆಯಲ್ಲಿ ಭಾರೀ ಚರ್ಚೆ ಆಗುತ್ತಿವೆ. ಸ್ವರ್ಗ ಮತ್ತು ನರಕ ವಾಸಿಗಳು ಎರಡೂ ತಂಡದವರು ಕ್ಯಾಪ್ಟನ್ ಹಂಸ ವಿರುದ್ಧ ತಿರುಗಿ ನಿಂತಿದ್ದು, ಜೋರು ಗಲಾಟೆ ನಡೆದಿದೆ. ಟಾಸ್ಕ್ ಮಧ್ಯೆ ‘ಕಣ್ಣಿಲ್ವಾ ನಿಮಗೆ ನೋಡೋಕೆ’ ಎಂದು ಜಗದೀಶ್ ಅವರು ಕ್ಯಾಪ್ಟನ್ಗೆ ಬೈದಿದ್ದಾರೆ. ಯಾವ ಸೀಮೆ ಕ್ಯಾಪ್ಟನ್ ರೀ ನೀವು ಎಂದು ಚೈತ್ರಾ ಕುಂದಾಪುರ ಸಿಟ್ಟಾಗಿದ್ದಾರೆ. ಮಾನಸಾ, ಉಗ್ರಂ ಮಂಜು ಹಾಗೂ ತ್ರಿವಿಕ್ರಮ್ ಕೂಡ ಕ್ಯಾಪ್ಟನ್ ಬಗ್ಗೆಯೇ ಮಾತನಾಡಿದ್ದಾರೆ.
BBK 11: ಕ್ಯಾಪ್ಟನ್ ಹಂಸ ವಿರುದ್ಧ ತಿರುಗಿ ನಿಂತ ಬಿಗ್ ಬಾಸ್ ಮನೆ ಸದಸ್ಯರು: ಅಷ್ಟಕ್ಕು ಆಗಿದ್ದೇನು?