Saturday, 14th December 2024

ಕೊಲೆ ಪ್ರಕರಣ: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂಧನ

ಬೆಂಗಳೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂಧನವಾಗಿದ್ದು, ಚಿತ್ರದುರ್ಗದ ರೇಣುಸ್ವಾಮಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ನಟನ ಮೇಲಿದೆ.

ರೇಣುಕಾಸ್ವಾಮಿಯ ಕೊಲೆ ಮಾಡಲು ಕಾರಣವೆಂದರೆ, ಆತ ಪವಿತ್ರ ಗೌಡಗೆ ಅಶ್ಲೀಲ ಮೆಸೇಜ್ ಕಳಿಸುತ್ತಿದ್ದ ಮತ್ತು ಅಶ್ಲೀಲವಾದ ಫೋಟೋ ಕಳಿಸಿದ್ದ.

ಹಾಗಾಗಿ ದರ್ಶನ್ ಸೇರಿ ನಾಲ್ವರು ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆತಂದು, ರಾಜರಾಜೇಶ್ವರಿ ನಗರದಲ್ಲಿ ಕೊಲೆ ಮಾಡಿ, ಕಾಮಾಕ್ಷಿಪಾಳ್ಯದಲ್ಲಿ ಶವ ಬಿಸಾಕಿದ್ದರೆಂಬ ಆರೋಪವಿದೆ.

ರೇಣುಕಾ ಸ್ವಾಮಿಯ ಮೇಲೆ ಹಲ್ಲೆ ಮಾಡುವಾಗ, ದರ್ಶನ್ ಒದ್ದಿದ್ದು, ಅದು ರೇಣುಕಾಸ್ವಾಮಿಯ ಗುಪ್ತಾಂಗಕ್ಕೆ ತಾಗಿ, ರೇಣುಕಾಸ್ವಾಮಿ ಅಸ್ವಸ್ಥಗೊಂಡು ಸಾವನ್ನಪ್ಪಿದ್ದ. ಬಳಿಕ ಆತನ ಶವವನ್ನು ಕಾಮಾಕ್ಷಿ ಪಾಳ್ಯದಲ್ಲಿ ಬಿಸಾಕಲಾಗಿತ್ತು. ಈ ಘಟನೆ ನಡೆದು 2 ತಿಂಗಳಾಗಿತ್ತು. ಇದೀಗ ದರ್ಶನ್ ಈ ಕೊಲೆ ಆರೋಪಿ ಎಂದು ಗೊತ್ತಾಗಿದ್ದು, ಮೈಸೂರಿನ ಫಾರ್ಮ್ ಹೌಸ್‌ನಿಂದ, ಡಿಸಿಪಿ ಗಿರೀಶ್ ನೇತೃತ್ವದಲ್ಲಿ ದರ್ಶನ್ ಅವರನ್ನು ಅರೆಸ್ಟ್ ಮಾಡಲಾಗಿದೆ.

ನಟ ದರ್ಶನ್​ರನ್ನು ಕಾಮಾಕ್ಷಿ ಠಾಣಾ ಪೊಲೀಸರು ವಶಕ್ಕೆ ಪಡೆದ ಬೆನ್ನಲ್ಲೇ ದರ್ಶನ್​ ಗೆಳತಿ ನಟಿ ಪವಿತ್ರಾ ಗೌಡರನ್ನು ಸಹ ರಾಜ ರಾಜೇಶ್ವರಿ ನಗರ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ನಟಿ ಪವಿತ್ರಾ ಗೌಡ ಮತ್ತು ನಟ ದರ್ಶನ್​ ನಡುವಿನ ಸಂಬಂಧ ಏನೂ ಎಂಬುದು ಬಹುತೇಕರಿಗೆ ತಿಳಿದಿದೆ. ಇತ್ತಿಚೆಗಷ್ಟೇ ದರ್ಶನ್​ ಬರ್ತಡೇ ಸಮಯದಲ್ಲಿ ಪವಿತ್ರಾ ಗೌಡ ದರ್ಶನ್​ ಜತೆಗಿನ ತಮ್ಮ ಸಂಬಂಧವನ್ನು ಬಹಿರಂಗಪಡಿಸಿದ್ದರು.

ಪವಿತ್ರಾ ಗೌಡ ವಿಚಾರಕ್ಕೆ ನಟ ದರ್ಶನ್​ ಬಂಧನವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್​ನಲ್ಲಿ ನಟ ದರ್ಶನ್​ ಅವರನ್ನು ಬಂಧಿಸಲಾಗಿದೆ. ಕಾಮಾಕ್ಷಿಪಾಳ್ಯ ಶೆಡ್​ ಒಂದರಲ್ಲಿ ಜೂನ್​ 9ರಂದು ರೇಣುಕಾಸ್ವಾಮಿಯ ಕೊಲೆ ನಡೆದಿತ್ತು. ಈ ಪ್ರಕರಣದಲ್ಲಿ ಕೆಲ ಆರೋಪಿಗಳನ್ನು ಕಾಮಾಕ್ಷಿ ಪಾಳ್ಯ ಪೊಲೀಸರು ಬಂಧಿಸಿದ್ದರು. ಇದೀಗ ಆರೋಪಿಗಳು ದರ್ಶನ್​ ಹೆಸರನ್ನು ಬಹಿರಂಗಪಡಿಸಿದ್ದಾರೆ. ದರ್ಶನ್​ ಸೂಚನೆ ಕೊಟ್ಟಿದ್ದಕ್ಕೆ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ದರ್ಶನ್​ ಸೇರಿ 10 ಮಂದಿಯನ್ನು ಬಂಧಿಸಲಾಗಿದೆ. ದರ್ಶನ್​ ಸಹ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ನಟಿ ಪವಿತ್ರ ಗೌಡಗೆ ರೇಣುಕಸ್ವಾಮಿ ಕೆಟ್ಟದಾಗಿ ಮೆಸೇಜ್​ ಮಾಡಿದ್ದಕ್ಕೆ ಅಪಹರಿಸಿ ಕಿಡ್ನ್ಯಾಪ್ ಮಾಡಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು ಎಂಬ ಆರೋಪ ಕೇಳಿಬಂದಿದೆ.