Friday, 22nd November 2024

ರ‍್ಯಾಪರ್‌ ಚಂದನ್‌ ಶೆಟ್ಟಿಯ ’ಸಲಿಗೆ’ ಹಾಡಿಗೆ ಕೆನಡಾದಲ್ಲಿ ಶೂಟಿಂಗ್

ಬೆಂಗಳೂರು: ಕನ್ನಡದ ರ‍್ಯಾಪರ್‌ ಹಾಗೂ ಗೀತರಚನೆಕಾರ ಚಂದನ್ ಶೆಟ್ಟಿ ಅವರ ಮುಂದಿನ ಪ್ರಾಜೆಕ್ಟ್‌ ‘ಸಲಿಗೆ’ ಗುರುವಾರ ಬಿಡುಗಡೆಯಾಗಲಿದ್ದು, ಕೆನಡಾದಲ್ಲಿ ದೊಡ್ಡ ಮಟ್ಟದಲ್ಲಿ ಶೂಟಿಂಗ್ ಮಾಡಲಾಗಿದೆ.

“2019ರಲ್ಲೇ ಕಾಂಪೋಸ್ ಮಾಡಲಾಗಿದ್ದ ಸಲಿಗೆ, ಕನ್ನಡದಲ್ಲಿ ಈ ಹಿಂದೆ ಇಂಥ ಪ್ರಯೋಗ ಎಂದೂ ಮಾಡಿಲ್ಲ. ಹೀಗಾಗಿ ಹಾಡನ್ನು ಬಿಡುಗಡೆ ಮಾಡಲು ಹಿಂದುಮುಂದು ನೋಡುತ್ತಿದ್ದೆ. 2019ರಲ್ಲಿ ಕೆನಡಾಗೆ ಟೂರ್‌ ಮಾಡಿದ ವೇಳೆ ಹಾಡನ್ನು ಟೊರಾಂಟೋ, ಮಾಂಟ್ರಿಯಲ್ ಹಾಗೂ ನಯಾಗರಾ ಜಲಪಾತದ ಬಳಿ ಶೂಟಿಂಗ್ ಮಾಡಲಾಗಿದ್ದು, ಆ ವೇಳೆ ಅಲ್ಲಿ ಚಳಿಗಾಲದ ಹಿಮಪಾತವಿತ್ತು.

ಈ ಹಾಡನ್ನು ಹೊರಗಡೆ ಶೂಟ್ ಮಾಡಲಾಗಿದೆ. ಇದು ಶೂನ್ಯ-ಬಜೆಟ್ ಹಾಡು ಎಂದು ಚಂದನ್ ಮಾಧ್ಯಮದೊಂದಿಗೆ ಹೇಳಿ ಕೊಂಡಿದ್ದಾರೆ.

ಕೋವಿಡ್-19 ಕಾರಣದಿಂದ ಕಲಾವಿದರು ಸಂಕಷ್ಟದಲ್ಲಿರುವ ಈ ಘಳಿಗೆಯಲ್ಲಿ ನಮಗೆ ಲೈವ್‌ ಕನ್ಸರ್ಟ್‌ಗಳನ್ನು ನಡೆಸಲು ಆಗು ತ್ತಿಲ್ಲ. ಪ್ರೇಕ್ಷಕರೊಂದಿಗೆ ಕನೆಕ್ಟ್ ಆಗಿರುವ ಅಗತ್ಯವಿರುವ ಕಾರಣ ಲಾಕ್‌ಡೌನ್ ಅವಧಿಯಲ್ಲಿ ಹಾಡನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ,” ಎಂದು ತಿಳಿಸಿದ್ದಾರೆ.