Thursday, 12th December 2024

ರಾಜ್ ಕುಂದ್ರಾ ವಿರುದ್ಧ ಚಾರ್ಜ್‍ಶೀಟ್‍ ಸಲ್ಲಿಕೆ

ಮುಂಬೈ : ನೀಲಿ ಸಿನಿಮಾ ನಿರ್ಮಾಣ ಪ್ರಕರಣದಡಿ ಬಂಧಿತರಾಗಿರುವ ಬಾಲಿವುಡ್ ನಟಿ ಶಿಲ್ಫಾ ಶೆಟ್ಟಿ ಪತಿ ಹಾಗೂ ಉದ್ಯಮಿ ರಾಜ್ ಕುಂದ್ರಾ ವಿರುದ್ಧ 1500 ಪುಟಗಳ ಚಾರ್ಜ್‍ಶೀಟ್‍ನ್ನು ಮುಂಬೈ ಪೊಲೀಸರು ಗುರುವಾರ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ನ್ಯಾಯಾಲಯಕ್ಕೆ ಇಂದು ಸಲ್ಲಿಸಲಾಗಿರುವ ಸುಮಾರು 1500 ಪುಟಗಳ ದೋಷಾರೋಪ ಪಟ್ಟಿಯಲ್ಲಿ ಕುಂದ್ರಾ ಪತ್ನಿ ಶಿಲ್ಪಾ ಶೆಟ್ಟಿ ಸೇರಿದಂತೆ ನಟಿ ಶರ್ಲಿನ್ ಚೋಪ್ರಾ, ಸೆಜಲ್ ಶಾ ಹಾಗೂ ಸಾಕಷ್ಟು ಮಾಡೆಲ್ ಗಳು ಮತ್ತು ಕುಂದ್ರಾ ಕಂಪನಿಯ ಉದ್ಯೋಗಿಗಳ ಹೇಳಿಕೆಗಳು ಚಾರ್ಜ್‍ ಶೀಟ್‍ನಲ್ಲಿ ದಾಖಲಾಗಿವೆ.

ನೀಲಿ ಸಿನಿಮಾ ನಿರ್ಮಾಣ ಹಾಗೂ ಆಯಪ್‍ ಗಳ ಮೂಲಕ ಅವುಗಳ ಬಿಡುಗಡೆ ಆರೋಪದಲ್ಲಿ ರಾಜ್ ಕುಂದ್ರಾ ಅವರನ್ನು ಮುಂಬೈನ ಕ್ರೈಂ ಬ್ರ್ಯಾಂಚ್‍ನ ಪೊಲೀಸರು ಜುಲೈ 19 ರಂದು ಬಂಧಿಸಿದ್ದಾರೆ. ಸದ್ಯಕ್ಕೆ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

ರಾಜ್ ಕುಂದ್ರಾ ಬಂಧನದ ಬಳಿಕ ಅವರ ಪತ್ನಿ ಶಿಲ್ಪಾ ಶೆಟ್ಟಿಯವರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿ ದರು. ಕುಂದ್ರಾ ವಿರುದ್ಧ ನಟಿ ಶರ್ಲಿನ್ ಚೋಪ್ರಾ ಅವರು ಬಹಿರಂಗ ಅರೋಪ ಮಾಡಿದರು.