Wednesday, 11th December 2024

20 ಕೋಟಿ ವೆಚ್ಚದ ಸಿನಿಮಾ ಸೆಟ್‌ ಬೆಂಕಿಗಾಹುತಿ

ಹೈದರಾಬಾದ್: ಸಾಕಷ್ಟು ಅದ್ದೂರಿ ಬಜೆಟ್ ನಲ್ಲಿ ನಿರ್ಮಾಣವಾದ ಆಚಾರ್ಯ ಸಿನಿಮಾಗಾಗಿ 20 ಕೋಟಿ ವೆಚ್ಚದ ಸೆಟ್‌ನ್ನ ನಿರ್ಮಾಣ ಮಾಡಲಾಗಿತ್ತು. ಆದರೆ ಇದೀಗ ಈ ಸೆಟ್ ಬೆಂಕಿಗಾಹುತಿ ಆಗಿದೆ.

ಮೆಗಾಸ್ಟಾರ್ ಚಿರಂಜೀವಿ ಹಾಗೂ ರಾಮ್ ಚರಣ್ ನಟನೆಯ `ಆಚಾರ್ಯ’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿತ್ತು.

ಕೊರಟಾಲ ಶಿವ ನಿರ್ದೇಶನದ `ಆಚಾರ್ಯ’ ಚಿತ್ರದಲ್ಲಿ ಚಿರಂಜೀವಿ, ರಾಮ್ ಚರಣ್ ಲೀಡ್ ರೋಲ್‌ನಲ್ಲಿ ನಟಿಸಿದ್ದರು. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದರು. ಚಿರಂಜೀವಿ ಅವರ ಖಾಸಗಿ ಜಾಗದಲ್ಲಿ 20 ಕೋಟಿ ರೂಪಾಯಿ ವೆಚ್ಚದ ದೇವಸ್ಥಾನದ ಪಟ್ಟಣದ ಅದ್ದೂರಿ ಸೆಟ್ ಕೂಡ ನಿರ್ಮಾಣ ಮಾಡಲಾಗಿತ್ತು. 20 ಎಕರೆ ಜಾಗದಲ್ಲಿ ನಿರ್ಮಾಣ ಮಾಡಲಾಗಿದ್ದು, ಇದೀಗ ಈ ಸೆಟ್‌ಗೆ ಬೆಂಕಿ ಬಿದ್ದಿದೆ.

ಮುಂದೆ ಬೇರೆ ಚಿತ್ರದ ಶೂಟಿಂಗ್‌ಗೂ ಕೊಡಬಹುದು ಎಂಬ ಕಾರಣಕ್ಕೆ ಈ ಸೆಟ್‌ನ್ನ ಹಾಗೆಯೇ ಇರಿಸಲಾಗಿತ್ತು. ಕೆಲವರು ಈ ಜಾಗದಲ್ಲಿ ಸಿಗರೇಟ್ ಸೇದಿದ್ದು, ಅವರು ಎದ್ದು ಹೋದ ಮೇಲೆ ಸೆಟ್‌ಗೆ ಬೆಂಕಿ ತಗುಲಿದೆ ಎನ್ನಲಾ ಗುತ್ತಿದೆ.