Friday, 22nd November 2024

ಮಾಧ್ಯಮದ ಪ್ರಶ್ನೆಗಳಿಗೆ ಕೂಲ್ ಆಗಿಯೇ ಉತ್ತರಿಸಿದ ಐಂದ್ರಿತಾ

ಬೆಂಗಳೂರು: ಸ್ಯಾಂಡಲ್‍‍ವುಡ್ ಡ್ರಗ್ಸ್ ಬಳಕೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಕನ್ನಡದ ದೂದ್ ಪೇಡ್ ನಟ ದಿಗಂತ್ ಪತ್ನಿ ನಟಿ ಐಂದ್ರಿತಾ ರೇ ಅವರು ಮಾಧ್ಯಮದ ಪ್ರಶ್ನೆಗಳಿಗೆ ಹೆಚ್ಚೇನೂ ಪ್ರತಿಕ್ರಿಯಿಸದಿದ್ದರೂ, ಎಂದಿನಂತೆ ತಣ್ಣನೆಯ ಮೂಡ್ ನಲ್ಲಿದ್ದರು.

ತಮ್ಮ ಬೆಂಗಳೂರಿನ ಆರ್.ಆರ್.ನಗರದ ನಿವಾಸದ ಬಳಿ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಅವರು, ನಾಳೆಯಿಂದ ದಿಗಂತ್ ಸಿನಿಮಾ ಶೂಟಿಂಗಿಗೆ ಹೋಗುತ್ತಾರೆ. ನಗರದಲ್ಲೇ ಮಾರಿಗೋಲ್ಡ್ ಶೂಟಿಂಗ್ ನಡೆಯಲಿದೆ ಎಂದು ಹೇಳಿದರು.

ವಿಚಾರಣೆ ಹಂತದಲ್ಲಿ ಬೆಂಗಳೂರು ತೊರೆಯುವಂತಿಲ್ಲ ಎಂಬ ಕಾರಣ, ನಾವು ಏನೂ ಮಾತನಾಡುವ ಹಾಗಿಲ್ಲ. ನಾವು ಯಾವುದೇ ಪ್ರತಿಕ್ರಿಯೆ ನೀಡುವಂತಿಲ್ಲ. ಆದರೆ, ಯಾವಾಗ ವಿಚಾರಣೆಗೆ ಕರೆಯುತ್ತಾರೋ ಗೊತ್ತಿಲ್ಲ ಮತ್ತೆ ವಿಚಾರಣೆಗೆ ಕರೆದರೆ ಹೋಗುತ್ತೇವೆ ಎಂಬುದಷ್ಟೇ ಹೇಳಿದರು.

ಸಿಸಿಬಿ ಕಚೇರಿಯಲ್ಲಿ ನಡೆದ ವಿಚಾರಣೆ ವೇಳೆ, ನಟ ದಿಗಂತ್ ತನಿಖಾಧಿಕಾರಿಗಳ ಎದುರು, ಖಿನ್ನತೆಯಿಂದ ಹೊರ ಬರಲು ಡ್ರಗ್ ಗೆ ಶರಣಾದೆ ಎಂದು ತಪ್ಪೊಪ್ಪಿಕೊಂಡಿದ್ದಾರೆನ್ನಾಗಿದೆ.