Wednesday, 11th December 2024

ಬಾಲಿವುಡ್ ಗಾಯಕ ಕುಮಾರ್ ಸಾನುಗೆ ಕೊರೊನಾ ಸೋಂಕು ದೃಢ

ಮುಂಬೈ : ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಅಬ್ಬರ ಮುಂದುವರೆದಿದ್ದು, ಬಾಲಿವುಡ್ ಹಿನ್ನೆಲೆ ಗಾಯಕ ಕುಮಾರ್ ಸಾನು ಅವರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ.

ಕುಮಾರ್ ಸಾನು ಅವರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿರುವ ಕುರಿತು ಸಾಮಾಜಿಕ ಜಾಲತಾಣ ತಂಡ ಸ್ಪಷ್ಟಪಡಿಸಿ ದ್ದು, ದುರಾದೃಷ್ಟವಶಾತ್ ಕುಮಾರ್ ಸಾನು ಅವರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಅವರು ಶೀಘ್ರದಲ್ಲೇ ಗುಣ ಮುಖರಾಗಲಿ ಎಂದು ಪ್ರಾರ್ಥಿಸೋಣ ಎಂದು ಪೋಸ್ಟ್ ಮಾಡಲಾಗಿದೆ.

ಕುಮಾರ್‌ ಸಾನು ಪುತ್ರ ಜಾನ್‌ ಬಿಗ್ ಬಾಸ್ 14ರಲ್ಲಿ ಸ್ಪರ್ಧಿಯಾಗಿದ್ದಾನೆ.