Thursday, 12th December 2024

ಟಿ-ಶರ್ಟ್‌’ಗೆ ಸುಶಾಂತ್‌ ಫೋಟೋ: ಫ್ಲಿಪ್‌ಕಾರ್ಟ್‌ ವಿರುದ್ಧ ಆಕ್ರೋಶ

ಮುಂಬೈ: ದಿವಂಗತ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಫೋಟೋ ಇರುವ ಟಿ-ಶರ್ಟ್‌ಗಳನ್ನು ಮಾರಾಟ ಮಾಡಲು ಮುಂದಾದ ಫ್ಲಿಪ್‌ಕಾರ್ಟ್‌ ವಿರುದ್ಧ ಜನರು ಆಕ್ರೋಶ ಹೊರಹಾಕಲಾರಂಭಿಸಿದ್ದಾರೆ.

ಅದಕ್ಕೆ “ಡಿಪ್ರಶನ್‌ ಈಸ್‌ ಡ್ರೋನಿಂಗ್‌’ (ಮಾನಸಿಕ ಖಿನ್ನತೆಯು ಮುಳುಗಿಸಿದಂತೆ) ಎಂದು ಕೋಟ್‌ ಬರೆಯಲಾಗಿದೆ. ಈ ರೀತಿಯ ಟಿ-ಶರ್ಟ್‌ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟಕ್ಕೆ ಲಭ್ಯವಿದೆ. ಇದನ್ನು ಕಂಡೊಡನೆ ಸಿಟ್ಟಿಗೆದ್ದಿರುವ ನೆಟ್ಟಿಗರು, ಫ್ಲಿಪ್‌ಕಾರ್ಟ್‌ ನಿಷೇಧಿಸಿ ಎಂದು ಅಭಿಯಾನ ಆರಂಭಿಸಿದ್ದಾರೆ.

ಮೃತ ವ್ಯಕ್ತಿಯ ಫೋಟೋವನ್ನೇ ಮಾರುಕಟ್ಟೆ ಪ್ರಚಾರಕ್ಕೆ ಬಳಸಿಕೊಂಡಿರುವುದಕ್ಕೆ ಕಾನೂನಾತ್ಮಕವಾಗಿ ನೋಟಿಸ್‌ ಜಾರಿ ಗೊಳಿಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.