Saturday, 12th October 2024

ಸಿ.ವಿ.ಶಿವಶಂಕರ್ ಹೃದಯಾಘಾತದಿಂದ ನಿಧನ

ಬೆಂಗಳೂರು: ಸ್ಯಾಂಡಲ್‌ವುಡ್ಡಿನ ಗೀತರಚನೆಕಾರ, ನಿರ್ಮಾಪಕ ಮತ್ತು ಹಿರಿಯ ನಿರ್ದೇ ಶಕ ಸಿ.ವಿ .ಶಿವಶಂಕರ್ (90) ಹೃದಯ ಘಾತದಿಂದ ನಿಧನರಾಗಿದ್ದಾರೆ.

ಸಿ ವಿ ಶಿವಶಂಕರ್(ಚಿಟ್ಟನಹಳ್ಳಿ ವೆಂಕಟಕೃಷ್ಣಭಟ್ಟ ಶಿವಶಂಕರ್)ಅವರು 1933 ಮಾರ್ಚ್ 23ರಂದು ತಿಪಟೂರಿನಲ್ಲಿ ಜನಿಸಿದರು.
ಪ್ರೌಢಶಿಕ್ಷಣವನ್ನೂ ಅರ್ಧದಲ್ಲೇ ಬಿಟ್ಟು ಗುಬ್ಬಿವೀರಣ್ಣ ನಾಟಕಮಂಡಲಿ, ಅಲ್ಲಿಂದ ಸುಬ್ಬಯ್ಯನಾಯ್ಡುರವರ ಕರ್ನಾಟಕ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಲಿ ಸೇರಿದರು. ಹಲವಾರು ನಾಟಕಗಳನ್ನು ಬರೆದು, ಪ್ರಕಟಿಸಿ, ನಟಿಸಿ, ಭೇಷೆನಿಸಿಕೊಂಡರು.
ನಾಟಕರಂಗದಲ್ಲಿನ ದಿಗ್ಗಜರ ಒಡನಾಟ, ಡಾ||ರಾಜ್ ರಂತಹ ನಟರ ಸಹಯೋಗದಲ್ಲಿ ಚಲನಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ತದನಂತರ, ಹಲವಾರು ಚಿತ್ರಗಳಲ್ಲಿ ಅಭಿನಯಿಸುತ್ತಾ, ಸಂಭಾಷಣೆ-ಗೀತಸಾಹಿತ್ಯದತ್ತ ಒಲವು ಬೆಳೆಸಿಕೊಂಡರು.
ಮಂಜುಳಾ, ದ್ವಾರಕೀಶ್, ತೂಗುದೀಪ ಶ್ರೀನಿವಾಸ್, ಕಲ್ಪನಾ, ಧೀರೇಂದ್ರ ಗೋಪಾಲ್ ರಂಥ ಹಲವು ಪ್ರತಿಭಾವಂತರನ್ನು ಮೊಟ್ಟ ಮೊದಲು, ಬಾಲನಟರನ್ನಾಗಿಯೋ, ಪ್ರಥಮವಾಗಿಯೋ, ಪೂರ್ಣಪ್ರಮಾಣದ ನಾಯಕ/ನಾಯಕಿಯರಾಗಿಯೋ ತೆರೆಗೆ ತಂದ ಕೀರ್ತಿ ಇವರದು.