ಹಾಸನ: ನಟ ಡಾಲಿ ಧನಂಜಯ ಅವರ ಪ್ರೀತಿಯ ಅಜ್ಜಿ ಮಲ್ಲಮ್ಮ (95) ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಹಾಸನದ ಅರಸೀಕೆರೆಯ ಕಾಳೇನಹಳ್ಳಿಯಲ್ಲಿರುವ ನಿವಾಸದಲ್ಲಿ ಮಲ್ಲಮ್ಮ ಮೃತಪಟ್ಟಿದ್ದಾರೆ. ಮಲ್ಲಮ್ಮ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ತೀವ್ರ ಅನಾರೋಗ್ಯ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.
ಮಲ್ಲಮ್ಮ ಅವರು ಪ್ರತಿ ಬಾರಿ ಚುನಾವಣಾ ಸಂದರ್ಭದಲ್ಲಿ ಮೊಮ್ಮಗ ಡಾಲಿ ಧನಂಜಯ ಜೊತೆ ತೆರಳಿ ತಪ್ಪದೇ ಮತದಾನ ಮಾಡುತ್ತಿದ್ದರು.
ಲಿಂಗದೇವರಾಜೇಗೌಡರ ಪತ್ನಿಯಾಗಿದ್ದ ಮಲ್ಲಮ್ಮ ಅವರಿಗೆ ಒಟ್ಟು ಐವರು ಮಕ್ಕಳು. ಇವರ ಎರಡನೇ ಪುತ್ರ ಅಡವಿಸ್ವಾಮಿ ಅವರ ಮಗನೇ ಡಾಲಿ ಧನಂಜಯ್. ವಿಕೇಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಡಾಲಿ ಧನಂಜಯ್ ಅವರು ತನ್ನ ಪ್ರೀತಿಯ ಅಜ್ಜಿ ಮಲ್ಲಮ್ಮ ಅವರನ್ನು ಪರಿಚಯಿಸಿದ್ದರು.