Thursday, 19th September 2024

Daiji Movie: ರಮೇಶ್ ಅರವಿಂದ್ ನಟನೆಯ ಥ್ರಿಲ್ಲರ್-ಹಾರರ್ ಚಿತ್ರ ‘ದೈಜಿ’ ಪೋಸ್ಟರ್ ರಿಲೀಸ್‌

Daiji Movie

ಬೆಂಗಳೂರು: ನಟ ಡಾ.ರಮೇಶ್ ಅರವಿಂದ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಇವರ ಮುಂಬರುವ ಥ್ರಿಲ್ಲರ್-ಹಾರರ್ ಚಿತ್ರ ‘ದೈಜಿ’ಯ ಹೊಸ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ನಟ ಡಾ. ರಮೇಶ್ ಅರವಿಂದ್ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಲಿರುವ ಈ ಚಿತ್ರವನ್ನು ಆಕಾಶ್ ಶ್ರೀವತ್ಸ ಅವರು ನಿರ್ದೇಶಿಸಲಿದ್ದಾರೆ. ವಿಭಾ ಕಶ್ಯಪ್ ನಿರ್ಮಾಣದ ಬ್ಯಾನರ್ ಅಡಿಯಲ್ಲಿ ರವಿ ಕಶ್ಯಪ್ ಅವರು ಈ ಸಿನಿಮಾವನ್ನು (Sandalwood News) ನಿರ್ಮಿಸಲಿದ್ದಾರೆ.

ಈ ಚಿತ್ರವು ಡಾ. ರಮೇಶ್ ಅರವಿಂದ್ ಅವರ 106ನೇ ಚಿತ್ರವಾಗಿದ್ದು, ಈ ಹಿಂದೆ ಶಿವಾಜಿ ಸುರತ್ಕಲ್ 1 ಮತ್ತು 2 ಸಿನಿಮಾಗಳನ್ನು ನಿರ್ದೇಶಿಸಿದ್ದ ನಿರ್ದೇಶಕ ಆಕಾಶ್ ಶ್ರೀವತ್ಸ ಅವರು ಮೂರನೇ ಬಾರಿಗೆ ನಿರ್ದೇಶನದ ಜವಾಬ್ದಾರಿ ಹೊರಲಿದ್ದಾರೆ. ಡಾ. ರಮೇಶ್ ಅರವಿಂದ್ ನಟನೆಯ ದೈಜಿಯು, ಹಾರರ್-ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರವಾಗಿದ್ದು, ಈ ಚಿತ್ರದಲ್ಲಿ ಡಾ. ರಮೇಶ್ ಅರವಿಂದ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರತಂಡ ಶೀಘ್ರದಲ್ಲೇ ವಿದೇಶದಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸಲಿದೆ ಮತ್ತು ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.

ಈ ಸುದ್ದಿಯನ್ನೂ ಓದಿ | Alovera And Milk Cream: ಹಾಲಿನ ಕೆನೆ ಮತ್ತು ಅಲೋವೆರಾ ಇವೆರಡರಲ್ಲಿ ಯಾವುದು ನಿಮ್ಮ ಚರ್ಮಕ್ಕೆ ಸೂಕ್ತ?

ಡಾ.ರಮೇಶ್ ಅರವಿಂದ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರತಂಡವು ಚಿತ್ರದ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ.