ಬೆಂಗಳೂರು: ಸ್ಯಾಂಡಲ್ವುಡ್ನ ಹೆಸರಾಂತ ನಟ ಡಾರ್ಲಿಂಗ್ ಕೃಷ್ಣ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿ ದ್ದಾರೆ. ಇವರು 38ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಜೊತೆಗೆ ಸಿನಿ ರಂಗದಲ್ಲಿ ಹತ್ತು ವರ್ಷ ಪೂರೈಸಿದ್ದಾರೆ.
ಕೃಷ್ಣ ನಟನಾಗಿ ಸ್ಯಾಂಡಲ್ವುಡ್ಗೆ ಕಾಲಿರಿಸಿ ದಶಕವಾಗಿದೆ. ಈ ಶುಭ ಸಂದರ್ಭದಲ್ಲಿ ಪತ್ನಿ ಮಿಲನಾ ನಾಗರಾಜ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು, ಸ್ನೇಹಿತರು, ಕುಟುಂಬಸ್ಥರು, ಅಭಿಮಾನಿಗಳು ನಟನಿಗೆ ಬರ್ತ್ಡೇ ಶುಭಾಶಯದ ಜೊತೆಗೆ ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ.
ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಕೃಷ್ಣ ನಂತರದಲ್ಲಿ ‘ಮದರಂಗಿ’ ಸಿನಿಮಾ ಮೂಲಕ ನಾಯಕನಾಗಿ ಚಲನಚಿತ್ರ ಗಳಲ್ಲಿ ನಟಿಸಲು ಪ್ರಾರಂಭಿಸಿದರು.
2013 ರಲ್ಲಿ ಬಿಡುಗಡೆಯಾದ ಈ ಚಿತ್ರ ಒಬ್ಬ ಅದ್ಭುತ ನಟನನ್ನು ಸ್ಯಾಂಡಲ್ವುಡ್ಗೆ ಪರಿಚಯಿಸಿತು. ಆದರೆ ಅವರಿಗೆ ಹಿಟ್ ತಂದು ಕೊಟ್ಟಿದ್ದು ಮಾತ್ರ ‘ಲವ್ ಮಾಕ್ಟೇಲ್’. ಈ ಸಿನಿಮಾವನ್ನು ಜನರು ಕೊಂಚ ಹೆಚ್ಚೇ ಮೆಚ್ಚಿ ಕೊಂಡಿದ್ದರು. ಅದರ ನಂತರ ಬಂದ ‘ಲವ್ ಮಾಕ್ಟೇಲ್ 2’ ಕೂಡ ಪ್ರೇಕ್ಷಕರನ್ನು ವಿಶೇಷವಾಗಿ ಆಕರ್ಷಿಸಿತು.
ಕೃಷ್ಣನ ಮುಂದಿನ ಸಿನಿಮಾ ‘ಶುಗರ್ ಫ್ಯಾಕ್ಟರಿ’ ಚಿತ್ರತಂಡ ಹೊಸ ಪೋಸ್ಟರ್ ರಿಲೀಸ್ ಮಾಡಿ ನಟನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
ಪೋಸ್ಟರ್ ಕಲರ್ಫುಲ್ ಆಗಿದ್ದು, ಕೃಷ್ಣನ ಲುಕ್ ಕೂಡ ಸೂಪರ್ ಆಗಿದೆ. ಸಿನಿಮಾಗೆ ದೀಪಕ್ ಅರಸ್ ನಿರ್ದೇಶನದ ಜೊತೆಗೆ ಕಥೆಯನ್ನು ಕೂಡ ಬರೆದಿದ್ದಾರೆ. ಅದ್ವಿತಿ ಶೆಟ್ಟಿ, ಸೊನಾಲ್ ಮೊಂಥೆರೋ ಮತ್ತು ಶಿಲ್ಪಾ ಶೆಟ್ಟಿ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣಗೆ ನಾಯಕಿಯಾಗಿದ್ದಾರೆ. ಇನ್ನೂ ಕೃಷ್ಣ ಅವರ ಬಹುನಿರೀಕ್ಷಿತ ‘ಕೌಸಲ್ಯಾ ಸುಪ್ರಜಾ ರಾಮ’ ಚಿತ್ರದ ಟೈಟಲ್ ಟ್ರ್ಯಾಕ್ ಕೂಡ ಬಿಡುಗಡೆಯಾಗಲಿದೆ.