Sunday, 15th December 2024

ಟಾಲಿವುಡ್​ನಲ್ಲೂ ರಾಬರ್ಟ್‌ ಬಿಡುಗಡೆಗೆ ಗ್ರೀನ್​ ಸಿಗ್ನಲ್​

ಬೆಂಗಳೂರು: ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ ಸಿನಿಮಾ ‘ರಾಬರ್ಟ್​’ ರಿಲೀಸ್​ಗೆ ಟಾಲಿವುಡ್​ ಕ್ಯಾತೆಗೆ ನಟ ದರ್ಶನ್​ ಫುಲ್​ ಗರಂ ಆಗಿದ್ದರು. ಇದೀಗ ಈ ಸಮಸ್ಯೆ ಇತ್ಯರ್ಥವಾಗಿದೆ.

ಮಾರ್ಚ್​ 11ರಂದು ರಾಬರ್ಟ್​ ಸಿನಿಮಾ ರಿಲೀಸ್​ಗೆ ನಿರ್ಮಾಪಕರು ಡೇಟ್​ ಫಿಕ್ಸ್​ ಮಾಡಿದ್ದು, ಅದೇ ದಿನ ಟಾಲಿವುಡ್​ನಲ್ಲೂ ರಿಲೀಸ್​ ಮಾಡಲು ಗ್ರೀನ್​ ಸಿಗ್ನಲ್​ ಸಿಕ್ಕಿದೆ.

ಸೌತ್ ಇಂಡಿಯನ್ ಫಿಲ್ಮ್ ಚೇಂಬರ್ ಸೊಸೈಟಿಯಲ್ಲಿ ನಡೆದ ಸಭೆ ಯಶಸ್ವಿಯಾಗಿದ್ದು, ನೂರು ಚಿತ್ರಮಂದಿರದಲ್ಲಿ ರಾಬರ್ಟ್ ರಿಲೀಸ್​ಗೆ ಒಪ್ಪಿಗೆ ಸಿಕ್ಕಿದೆ.