Friday, 15th November 2024

BBK 11: ತನ್ನ ಜೋಡಿ ಸ್ಪರ್ಧಿಗೇ ಕಳಪೆ ನೀಡಿದ ಮೋಕ್ಷಿತಾ: ಸಿಡಿದೆದ್ದ ಧನರಾಜ್ ಆಚಾರ್

Dhanraj Achar and Mokshitha Pai (1)

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಈ ವಾರ ಜೋಡಿ ಟಾಸ್ಕ್ ನೀಡಲಾಗಿತ್ತು. ಅಂದರೆ ಇಬ್ಬರು ಸ್ಪರ್ಧಿಗಳು ಸದಾ ಜೊತೆಗಿದ್ದುಕೊಂಡೇ ಬಳ್ಳಿ ಕಟ್ಟಿಕೊಂಡು ಮನೆಯಲ್ಲಿ ಇರಬೇಕು ಹಾಗೂ ಟಾಸ್ಕ್ ಮಾಡಬೇಕು. ಸ್ವತಃ ಬಿಗ್ ಬಾಸ್ ಅವರೇ ಮನೆಯ ಸದ್ಯರನ್ನು ಜೋಡಿಯಾಗಿ ಆಯ್ಕೆ ಮಾಡಿದ್ದರು. ಮನೆಯೊಳಗೆ ಯಾರ ಯಾರ ಮಧ್ಯೆ ಮನಸ್ತಾಪ ಆಗಿತ್ತು, ಯಾರು ಸರಿಯಾಗಿ ಕನೆಟ್ಕ್ ಆಗಿಲ್ಲವೊ ಅವರನ್ನು ಜೋಡಿಯಾಗಿ ಮಾಡಿದ್ದರು. ಇದರಲ್ಲಿ ಧನರಾಜ್ ಆಚಾರ್ ಮತ್ತು ಮೋಕ್ಷಿತಾ ಪೈ ಜೋಡಿ ಕೂಡ ಒಂದು.

ಮೋಕ್ಷಿತಾ ಮತ್ತು ಧನರಾಜ್​ ಒಂದು ಜೋಡಿಯಾಗಿ ಇಡೀ ವಾರ ಆಟ ಆಡಿದ್ದರು. ಆದರೆ ಈಗ ಇವರ ನಡುವೆ ಬಿರುಕು ಮೂಡಿದಂತೆ ತೋರುತ್ತಿದೆ. ಬಹಳ ನಾಜೂಕು ನಡೆಯಿಂದ ಗುರುತಿಸಿಕೊಂಡಿದ್ದ ಧನರಾಜ್​ ಆಚಾರ್​​ ಅವರು ಕೆರಳಿ ಕೆಂಡವಾಗಿದ್ದಾರೆ. ಇದಕ್ಕೆ ಕಾರಣ ಈ ವಾರದ ಕಳಪೆ ಪಟ್ಟ. ಮನೆಯವರಲ್ಲಿ ಹೆಚ್ಚಿನವರು ಧನರಾಜ್‌ ಅವರನ್ನೇ ಕಳಪೆ ಎಂದು ಹೇಳಿದ್ದಾರೆ. ಮೋಕ್ಷಿತಾ ಕೂಡ ಇವರನ್ನೇ ಆಯ್ಕೆ ಮಾಡಿದ್ದಾರೆ.

ಕಳಪೆಯನ್ನು ನಾನು ಧನರಾಜ್​ ಅವರಿಗೆ ಕೊಡುತ್ತೇನೆ. ಟಾಸ್ಕ್ ವಿಚಾರ ಬಂದಾಗ ಸ್ಮಾರ್ಟ್​ ಆಗಿ ನೀವು ಯೋಚನೆ ಮಾಡುತ್ತಿರಲಿಲ್ಲ. ಪಾರ್ಟ್‌‌ನರ್ ಆಗಿ ಎಷ್ಟು ಸಪೋರ್ಟ್‌ ಆಗಿದ್ರಿ ಎಂದು ಮೋಕ್ಷಿತಾ ತಮ್ಮ ಕಾರಣ ಕೊಟ್ಟಿದ್ದಾರೆ. ಇದಕ್ಕೆ ಧನ್ಯವಾದಗಳು ಎಂದು ಧನರಾಜ್​ ಕೈಮುಗಿದು ಪ್ರತಿಕ್ರಿಯಿಸಿದ್ದಾರೆ. ನನ್ನ ಪಾರ್ಟ್ನರ್​ ನನಗೆ ಕಳಪೆ ಕೊಟ್ಟಿದ್ದಾರೆ ಎಂದು ಧನು ಹೇಳುತ್ತಿದ್ದಂತೆ ಮೋಕ್ಷಿತಾ ವಾದಕ್ಕಿಳಿದಿದ್ದಾರೆ.

ಪಾರ್ಟ್ನರ್​ ಆಗಿ ನೀವು ಎಷ್ಟು ಸಪೋರ್ಟಿವ್​ ಆಗಿದ್ರಿ? ಎಂದು ಮೋಕ್ಷಿತಾ ಪ್ರಶ್ನಿಸಿದ್ದಾರೆ. ಕಿಚನ್ ಡಿಪಾರ್ಟ್​​​ಮೆಂಟ್​​ ಇದ್ದಾಗ್ಲೇ ಗೊತ್ತಾಯ್ತು…. ಅಂತಾ ಧನರಾಜ್​ ತಿಳಿಸಿದ್ದಾರೆ. ಅದಕ್ಕೆ ಮೋಕ್ಷಿತಾ, ಕಿಚನ್ ಡಿಪಾರ್ಟ್​​​ಮೆಂಟ್ ಬಗ್ಗೆ ಮಾತಾಡ್ಬೇಡಿ ನೀವು ಎನ್ನುತ್ತಿದ್ದಂತೆ, ನಾನು ಮಾತನಾಡುವಾಗ ನೀವ್ಯಾಕೆ ಮಾತನಾಡುತ್ತಿದ್ದೀರಾ ಎಂದು ಧನರಾಜ್​ ಪ್ರಶ್ನಿಸಿದ್ದಾರೆ. ಹೀಗೆ ಇಬ್ಬರ ಮಧ್ಯೆ ಜಗಳ ಆಗಿದೆ. ಕೊನೆಯಲ್ಲಿ ಧನರಾಜ್​ ಅಹಂಕಾರ ಇದೆ ನಿಮಗೆ ಅಂತ ಮೋಕ್ಷಿತಾಗೆ ಹೇಳಿ ಕಳಪೆ ಪಟ್ಟವನ್ನು ಮೋಕ್ಷಿತಾ ಅವರಿಗೆ ಕಟ್ಟಿದ್ದಾರೆ.

ಅತಿ ಹೆಚ್ಚು ಕಳಪೆ ಮತ ಪಡೆದುಕೊಂಡ ಧನರಾಜ್ ಆಚಾರ್ ಈ ವಾರ ಜೈಲಿಗೆ ಹೋಗಿದ್ದಾರೆ. ಅವರಿಗೆ ಅಸಲಿ ಆಟ ತೋರಿಸ್ತೀನಿ ಎಂದು ಧನರಾಜ್​ ಹೇಳಿದ್ದಾರೆ. ಈ ಎಲ್ಲ ಘಟನೆ ಆದ ಬಳಿಕ ಅಹಂಕಾರದ ಬಗ್ಗೆ ಮಾತನಾಡುತ್ತಾ, ಮೋಕ್ಷಿತಾ ಅವರು ಉಗ್ರಂ ಮಂಜು-ಗೌತಮಿ ಜೊತೆ ಕಣ್ಣೀರಿಟ್ಟಿದ್ದಾರೆ.

BBK 11: ಬಿಗ್ ಬಾಸ್ ಮನೆಯಲ್ಲಿ ಮನೋರಂಜನ ಕಾರ್ಯಕ್ರಮ: ಸ್ಪರ್ಧಿಗಳಿಂದ ಸಖತ್ ಡ್ಯಾನ್ಸ್