Thursday, 12th December 2024

BBK 11: ಕಾಮಿಡಿ ಪೀಸ್ ಎಂದಿದ್ದಕ್ಕೆ ಜಗದೀಶ್ ಮೇಲೆ ರೊಚ್ಚಿಗೆದ್ದ ಧನರಾಜ್ ಆಚಾರ್: ಇಂದಿನ ಎಪಿಸೋಡ್​ನಲ್ಲಿ ಏನಿರಲಿದೆ?

Dhanraj Achar vs Jaagadish

ಶೋ ಆರಂಭವಾದ ಮೊದಲ ಎರಡು ದಿನ ಬಿಸಿ ಬಿಸಿ ಆಗಿದ್ದ ಬಿಗ್ ಬಾಸ್ ಕನ್ನಡ (Bigg Boss Kannada) ಮನೆ ಇದೀಗ ಮೂರನೇ ದಿನದ ಹೊತ್ತಿಗೆ ಕೊಂಚ ತಣ್ಣಗಾದಂತೆ ಕಾಣುತ್ತಿದೆ. ಸದಸ್ಯರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ. ಮನೆಯಲ್ಲಿ ಸಣ್ಣದಾಗಿ ಗುಂಪುಗಾರಿಕೆ ಕೂಡ ಶುರುವಾಗಿದೆ. ಜೊತೆಗೆ ನಗುವಿನ ಹೂವು ಮನೆಯೊಳಗೆ ಅರಳುತ್ತಿದೆ. ಕಳೆದ ಎರಡು ದಿನಗಳಿಂದ ಸೈಲೆಂಟ್ ಆಗಿದ್ದ ಸೋಷಿಯಲ್ ಮೀಡಿಯಾ ಸ್ಟಾರ್ ಧನರಾಜ್ ಆಚಾರ್ (Dhanaraj Achar) ಕೂಡ ಇದೀಗ ಫುಲ್ ಆ್ಯಕ್ಟಿವ್ ಆದಂತೆ ಕಾಣುತ್ತಿದೆ.

ಕಲರ್ಸ್ ಕನ್ನಡ ಇಂದಿನ (ಬುಧವಾರ) ಎಪಿಸೋಡ್ ಪ್ರೊಮೋ ಬಿಡುಗಡೆ ಮಾಡಿದ್ದು ಇದರಲ್ಲಿ ಮನೆಯ ಸದಸ್ಯರಿಗೆ ಟಾಸ್ಕ್ ನೀಡಲಾಗಿದೆ. ಟಾಸ್ಕ್ ವೇಳೆ ಧವನರಾಜ್ ಆಚಾರ್ ಅವರು ಲಾಯರ್ ಜಗದೀಶ್ ಮೇಲೆ ರೊಚ್ಚಿಗೆದ್ದಿದ್ದಾರೆ. ಇದನ್ನು ಕಂಡು ಮನೆ ಮಂದಿ ನಗುವಿನ ಅಲೆಯಲ್ಲಿ ತೇಲಾಡಿದ್ದಾರೆ.

ಬಿಗ್ ಬಾಸ್​ನಲ್ಲಿ ಮೊದಲ ವಾರ ಮನೆಯಿಂದ ಹೊರಹೋಗಲು 10 ಮಂದಿ ನಾಮಿನೇಟ್ ಆಗಿದ್ದಾರೆ. ಸ್ವರ್ಗದಲ್ಲಿರುವ ಜಗದೀಶ್, ಯಮುನ, ಉಗ್ರಂ ಮಂಜು, ಗೌತಮಿ, ಹಂಸ, ಭವ್ಯ, ನರಕದಲ್ಲಿರುವ ಶಿಶಿರ್, ಮೋಕ್ಷಿತಾ, ಮಾನಸ, ಚೈತ್ರಾ ಕುಂದಾಪುರ ನಾಮಿನೇಟ್ ಆಗಿದ್ದಾರೆ. ಇದೀಗ ಮೂರನೇ ದಿನ ಬಿಗ್ ಬಾಸ್ ಈ ನಾಮಿನೇಷನ್‌ನಿಂದ ಬಚಾವ್ ಆಗಲು ಒಂದು ಟಾಸ್ಕ್ ಕೊಟ್ಟಿದ್ದಾರೆ. ಈ ಟಾಸ್ಕ್ ಪಿಕ್ಚರ್ ಟಾಸ್ಕ್ ಆಗಿದೆ.

ನಾಮಿನೇಟ್ ಆಗಿರದ ಧನರಾಜ್ ಆಚಾರ್ಯ ಅವರು ಪಿಕ್ಚರ್ ಟಾಸ್ಕ್​ನ ರೆಫ್ರಿ ಆಗಿದ್ದಾರೆ. ಆಟದ ಮಧ್ಯೆ ಲಾಯರ್ ಜಗದೀಶ್ ಹಾಗೂ ಧನರಾಜ್ ನಡುವೆ ಜಗಳ ಆಗಿದೆ. ‘ನೀವು ರೆಫ್ರಿ ಆಗಲು ಫಿಟ್ ಇಲ್ಲ, ಕಾಮಿಡಿ ಪೀಸ್ ತರ ಆಡ್ತಾನೆ’ ಎಂದು ಜಗದೀಶ್ ಅವರು ಹೇಳಿದ್ದಾರೆ. ಇದರಿಂದ ರೊಚ್ಚಿಗೆದ್ದ ಧನರಾಜ್ ‘ಏಯ್, ಸುಮ್ನೆ ಕೋತ್ಕೊತಿಯಾ, ಇವನು ಯಾರು ಹೇಳೋಕೆ’ ಎಂದು ಸಿಟ್ಟಾಗಿದ್ದಾರೆ. ಈ ಜಗಳ ಒಂದು ರೀತಿ ಕಾಮಿಡಿ ತರವೇ ಇದೆ.

ಜಗದೀಶ್ ಸೀರಿಯೆಸ್ ಆಗಿದ್ದರೂ ಧನರಾಜ್ ಆಚಾರ್ ಮಾತುಗಳ ಮೂಲಕ ಎಲ್ಲರಿಗೂ ನಗು ತರಿಸಿದ್ದಾರೆ. ಬಳಿಕ ಜಗದೀಶ್ ಕೂಡ ಇದನ್ನ ನೋಡಿ ನೆಗಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಮೂರನೇ ದಿನ ನಾಮಿನೇಷನ್ ಟಾಸ್ಕ್ ಭರ್ಜರಿ ಮಜಾ ಇರುವಂತಿದೆ. ಜೊತೆಗೆ ಧನರಾಜ್ ಆಚಾರ್ ತಮ್ಮ ಕಾಮಿಡಿ ಕಲರವವನ್ನು ಶುರುಮಾಡಿಕೊಂಡಿದ್ದಾರೆ.

BBK 11: ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರ ಮನೆಯಿಂದ ಹೊರ ಹೋಗಲು 10 ಮಂದಿ ನಾಮಿನೇಟ್: ಯಾರೆಲ್ಲ?