Sunday, 8th September 2024

ಜೇಮ್ಸ್ ಬಾಂಡ್ ಖ್ಯಾತಿಯ ನಟಿ ಡಯಾನಾ ರಿಗ್ ನಿಧನ

ಲಂಡನ್: ಹಾಲಿವುಡ್  ‘ದ ಅವೆಂಜರ್ಸ್’, ಗೇಮ್ ಆಫ್ ಥ್ರೋನ್ಸ್, ಜೇಮ್ಸ್ ಬಾಂಡ್ ಖ್ಯಾತಿ ಹಿರಿಯ ನಟಿ, ಬ್ರಿಟಿಷ್ ಪ್ರಶಸ್ತಿ ವಿಜೇತ ಡಯಾನಾ ರಿಗ್ (82) ಗುರುವಾರ ವಿಧಿವಶರಾದರು. 

ಸಿನಿಮಾರಂಗದಲ್ಲಿನ ದೀರ್ಘ ಕಾಲದ ನಟನೆಗಾಗಿ ರಿಗ್ ಅವರು ಪ್ರತಿಷ್ಠಿತ ಎಮ್ಮಿ, ಟೋನಿ ಹಾಗೂ ಬಾಫ್ಟಾ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು. ಕಳೆದ ಆರು ತಿಂಗಳಿನಿಂದ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯು ತ್ತಿದ್ದ ಡಯಾನಾ ರಿಗ್ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.

ನನ್ನ ತಾಯಿ ವೃತ್ತಿ ಬಗ್ಗೆ ನಮಗೆ ಅಪಾರ ಗೌರವವಿದೆ. ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದು, ಅದು ಪದಗಳಿಗೂ ಮೀರಿದ್ದಾಗಿದೆ” ಎಂದು ರಿಗ್ ಮಗಳು ನಟಿ ರಾಚೆಲ್ ಸ್ಟಿರ್ಲಿಂಗ್ ತಿಳಿಸಿದ್ದಾರೆ. ಉತ್ತರ ಇಂಗ್ಲೆಂಡ್ ನಲ್ಲಿ ಜನಿಸಿದ್ದ ಡಯಾನಾ ಶಾಲೆಗೆ ಹೋಗುವ ಮುನ್ನ ಕುಟುಂಬದ ಜತೆ ಭಾರತಕ್ಕೆ ಬಂದು ವಾಸ್ತವ್ಯ ಹೂಡಿ ದ್ದರು.

ಟೆಲಿವಿಷನ್ ಸ್ಪೈ(ಗುಪ್ತಚರ) ಸರಣಿಯಾದ ದ ಅವೆಂಜರ್ಸ್ ನಲ್ಲಿ ಡಯಾನಾ ನಟಿಸುವ ಮೂಲಕ ಮನೆ ಮಾತಾಗಿದ್ದರು. ತನ್ನ ವಿಭಿನ್ನ ಶೈಲಿಯ ನಟನೆಯ ಮೂಲಕ ಜಾಗತಿಕ ಮಟ್ಟದಲ್ಲಿ ಡಯಾನಾ ಗುರುತಿಸಿ ಕೊಳ್ಳುವಂತಾಗಿತ್ತು.

1969ರಲ್ಲಿ ಜೇಮ್ಸ್ ಬಾಂಡ್ ಸರಣಿಯ “ಆನ್ ಹರ್ ಮೆಜೆಸ್ಟಿ ಸೀಕ್ರೆಟ್ ಸರ್ವಿಸ್ ಸಿನಿಮಾದಲ್ಲಿ ಬಾಂಡ್ ಪತ್ನಿ (ಟ್ರೇಸಿ)ಯಾಗಿ ಅಭಿನಯಿಸಿದ್ದರು. ಬಾಂಡ್ ಸಿನಿಮಾದಲ್ಲಿನ ಡಯಾನಾ ನಟನೆಯನ್ನು ನಿರ್ಮಾಪಕ ಮೈಕಲ್ ಜಿ ವಿಲ್ಸನ್ ಶ್ಲಾಘಿಸಿದ್ದರು.

Leave a Reply

Your email address will not be published. Required fields are marked *

error: Content is protected !!