ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ನಂಟು ಪ್ರಕರಣ ಸಂಬಂಧ ಸಂಬಂಧ ಮತ್ತೊಮ್ಮೆ ವಿಚಾರಣೆ ಎದುರಿಸಲು ನಟ ದಿಗಂತ್ ಬುಧವಾರ ಚಾಮರಾಜಪೇಟೆಯ ಸಿಸಿಬಿ ಕಚೇರಿಗೆ ಆಗಮಿಸಿದರು.
ಕಳೆದ ಸೆ.17ರಂದು ದಂಪತಿ ಐಂದ್ರಿತಾ ರೇ ಮತ್ತು ದಿಗಂತ್ ಇಬ್ಬರೂ ಸಿಸಿಬಿ ವಿಚಾರಣೆ ಎದುರಿಸಿದ್ದರು. ಮತ್ತೊಂದು ಸುತ್ತಿನ ವಿಚಾರಣೆಗಾಗಿ ಬುಧವಾರ ಆಗಮಿಸುವಂತೆ ದಿಗಂತ್ಗೆ ಮಾತ್ರ ಸಿಸಿಬಿ ನೋಟಿಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ 25 ನಿಮಿಷ ತಡವಾಗಿ ರಹಸ್ಯ ಸ್ಥಳದಿಂದ ಬಂದ ದಿಗಂತ್, ಸಿಸಿಬಿ ಕಚೇರಿಗೆ ಹೋದರು.
ಈ ಬಾರಿ ದಿಗಂತ್ ಒಬ್ಬರನ್ನು ಮಾತ್ರ ವಿಚಾರಣೆಗೆ ಅಧಿಕಾರಿಗಳು ಕರೆದಿದ್ದಾರೆ. ಸದ್ಯ ದಿಂಗತ್ರನ್ನು ಎಸಿಪಿ ಗೌತಮ್, ಇನ್ಸ್ಪೆಕ್ಟರ್ಗಳಾದ ಪುನೀತ್ ಹಾಗೂ ಮಲ್ಲೇಶ್ ಬೊಳತ್ತಿನ್ ವಿಚಾರಣೆ ನಡೆಸಲಿದ್ದಾರೆ.