Sunday, 15th December 2024

ಖ್ಯಾತ ನಿರ್ದೇಶಕ ಶಾಹುರಾಜ್ ಶಿಂಧೆ ನಿಧನ

ಬೆಂಗಳೂರು: ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಕೊನೆಯುಸಿರೆಳಿದಿದ್ದಾರೆ.

ಚಾಲೆಂಜಿಗ್ ಸ್ಟಾರ್ ದರ್ಶನ್ ಅವರ ಸ್ನೇಹನಾ ಪ್ರೀತಿನಾ.. ಚಿತ್ರ ನಿರ್ದೇಶಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಂತಹ ಶಾಹುರಾಜ್ ಶಿಂಧೆ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ದರ್ಶನ್ ಅವರ ಜೊತೆ ಸ್ನೇಹಿನಾ ಪ್ರೀತಿನ ಸಿನಿಮಾ ಬಳಿಕ ಅರ್ಜುನ್ ಎಂಬ ಸಿನಿಮಾವನ್ನು ನಿರ್ದೇಶಿಸಿದ್ದ ಶಾಹುರಾಜ್ ಅವರು ತದನಂತರ ಚಿತ್ರರಂಗದಿಂದ ದೂರ ಉಳಿದು ಬಿಟ್ಟಿದ್ದರು.

ಒಂಬತ್ತು ವರುಷಗಳ ಕಾಲ ಚಿತ್ರರಂಗಕ್ಕೆ ಮರಳಿದ್ದ ಶಾಹುರಾಜ್ ಅವರು ನಟಿ ಆಶಿಕಾರಂಗನಾಥ್ ಅವರ ರಂಗಮಂದಿರ ಚಿತ್ರ ವನ್ನು ನಿರ್ದೇಶಿಸಿದ್ದರು. ಈ ಸಿನಿಮಾ ಅವರ ಕನಸಿನ ಕೂಸಾಗಿದ್ದು, ಚಿತ್ರದ ಚಿತ್ರೀಕರಣವೆಲ್ಲ ಮುಗಿದು ಬಿಡುಗಡೆಗೆ ಸಿದ್ದವಾ ಗಿತ್ತು. ಆದರೆ ಸಿನಿಮಾ ಬಿಡುಗಡೆ ಮುನ್ನವೇ ಶಾಹುರಾಜ್ ಇಹಲೋಕ ತ್ಯಜಿಸಿದರು.

ಶಾಹುರಾಜ್ ಶಿಂಧೆ ಅವರ ನಿಧನದ ಸುದ್ದಿ ಕೇಳಿ ಕನ್ನಡ ಚಲನಚಿತ್ರರಂಗದ ಅನೇಕ‌ ಕಲಾವಿದರು, ತಂತ್ರಜ್ಞರು ,ಸ್ನೇಹಿತರು ಕಂಬನಿ‌ ಮಿಡಿದಿದ್ದು ಶಾಹುರಾಜ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿ ಸಂತಾಪ ಸೂಚಿಸಿದ್ದಾರೆ. ಸಂಗೀತ ನಿರ್ದೇಶಕ ಅಜನೀಶ್ ಲೋಕನಾರಥ್ ಅವರು ಶಾಹುರಾಜ್ ಶಿಂಧೆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ನೋವು ವ್ಯಕ್ತಪಡಿಸಿದ್ದಾರೆ.