Thursday, 12th December 2024

ಹಿರಿಯ ನಟ ದೊಡ್ಡಣ್ಣ ಜಯದೇವ ಆಸ್ಪತ್ರೆಗೆ ದಾಖಲು

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಅವರು ಅನಾರೋಗ್ಯದಿಂದ ಗುರುವಾರ ಆಸ್ಪತ್ರೆ ಸೇರಿದ್ದಾರೆ. ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಅವರ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಯದೇವ ಆಸ್ಪತ್ರೆಯ ಎಂಡಿ ಡಾ.ಮಂಜುನಾಥ್, ‘ದೊಡ್ಡಣ್ಣ ಅವರ ಹೃದಯಬಡಿತದಲ್ಲಿ ಏರುಪೇರಾಗುತ್ತಿತ್ತು. ಹೃದಯಬಡಿತ 70 ರಿಂದ 80ರ ಬದಲಾಗಿ 20-30ಕ್ಕೆ ಇಳಿದು ಬಿಡುತ್ತಿತ್ತು. ಹೀಗಾಗಿ ಹೃದಯಕ್ಕೆ ಪೇಸ್ ಮೇಕರ್ ಅಳವಡಿಸಿದ್ದೇವೆ. ಚಿಕಿತ್ಸೆಗೆ ಸ್ಪಂದಿಸಿ, ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.

ಮೂರು ದಿನ ದೊಡ್ಡಣ್ಣ ಅವರಿಗೆ ಚಿಕಿತ್ಸೆ ಮುಂದುವರೆಯಲಿದ್ದು, ಭಾನುವಾರ ಅವರನ್ನು ಡಿಸ್ಚಾರ್ಜ್ ಮಾಡಲಾಗುವುದು ಎಂದು ವೈದ್ಯರು​ ತಿಳಿಸಿದ್ದಾರೆ.