Thursday, 12th December 2024

ಡಬ್ಬಿಂಗ್ ಕಲಾವಿದ ಅರುಣ್ ಅಲೆಕ್ಸಾಂಡರ್ ನಿಧನ

ಚೆನ್ನೈ : ನಟ, ಡಬ್ಬಿಂಗ್ ಕಲಾವಿದ ಅರುಣ್ ಅಲೆಕ್ಸಾಂಡರ್(48) ಹೃದಯಾಘಾತದಿಂದ ನಿಧನರಾದರು.

ತಮಿಳು ಚಿತ್ರರಂಗದಲ್ಲಿ ಡಬ್ಬಿಂಗ್ ಕಲಾವಿದನೆಂದೇ ಗುರ್ತಿಸಿಕೊಂಡಿದ್ದಂತ ಅರುಣ್ ಅಲೆಕ್ಸಾಂಡರ್(48) ಹೃದಯಾಘಾತ ಗೊಂಡು ಚೆನ್ನೈನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಅಲೆಕ್ಸಾಂಡರ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿ ದ್ದಾರೆ.

ವಾಯ್ಸ್ ಆರ್ಟಿಸ್ಟ್ ಆಗಿ ಮಾತ್ರವಲ್ಲದೆ, ‘ಕೊಳಮಾವು ಕೋಕಿಲಾ’, ‘ಕೈತಿ’, ‘ಬಿಗ್ ಬಿ’ ಮುಂತಾದ ಚಿತ್ರಗಳಲ್ಲಿಯೂ ಸಹ ಅಭಿನಯಿಸಿದ್ದರು. ಅರುಣ್ ಅಲೆಕ್ಸಾಂಡರ್ ಅವರ ಕೊನೆಯ ಚಿತ್ರ ನಿರ್ದೇಶಕ ಲೋಕೇಶ್ ಕನಗನಮಾಜ್ ಅವರ ಮಾಸ್ಟರ್. ಅರುಣ್ ಅಲೆಕ್ಸಾಂಡರ್ ಅವರ ಸಾವು ಇಡೀ ತಮಿಳು ಚಿತ್ರರಂಗವನ್ನೇ ಬೆಚ್ಚಿಬೀಳಿಸಿದೆ.

ಹಾಲಿವುಡ್ ಚಿತ್ರಗಳಿಗೆ ಹೆಸರುವಾಸಿಯಾಗಿದ್ದರು. ತಮಿಳಿನಲ್ಲಿ ಅನೇಕ ಹಾಲಿವುಡ್ ನಟರಿಗೆ ಧ್ವನಿ ನೀಡಿದ್ದಾರೆ. ಕೈತಿ ಚಿತ್ರದಲ್ಲಿ ಖಳನಾಯಕನ ಪಾತ್ರ ಮಾಡಿದ ಅರುಣ್ ಅಲೆಕ್ಸಾಂಡರ್ ಪಾತ್ರಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ವಿಜಯ್ ಅವರ ಬಿಗ್ಗಿಲ್ ಚಿತ್ರದಲ್ಲಿ ಮಂತ್ರಿಯ ಪಾತ್ರ ನಿರ್ವಹಿಸಿದ್ದರು. ತಮ್ಮ ಅತ್ಯುತ್ತಮ ನಟನೆಯಿಂದ ಅವರು ಅನೇಕ ಅಭಿಮಾನಿಗಳ ಜನಪ್ರಿಯ ನಟರೆಂದೇ ಗುರ್ತಿಸಿಕೊಂಡಿದ್ದರು. ಅವರ ಕೊನೆಯ ಚಿತ್ರ ವೇಲು ಲೋಕೇಶ ಕನಗನಹೊಸ್ ಆಗಿದೆ.