Sunday, 15th December 2024

ನಟ ದುನಿಯಾ ವಿಜಯ್‌’ಗೆ ಮಾತೃವಿಯೋಗ

ಬೆಂಗಳೂರು: ಕರಿಯಾ ಐ ಲವ್‌ ಯೂ, ಕರಿಯಾ ಕರಿಯಾ ಹೀಗೆ ಯೂತ್ ಜನರೇಷನ್‌ ಹಾಡಿನ ಮೂಲಕ ಮನೆಮಾತಾದ ನಟ ದುನಿಯಾ ವಿಜಯ್‌ ಅವರ ತಾಯಿ ನಾರಾಯಣಮ್ಮ(80) ಗುರುವಾರ ನಿಧರಾಗಿದ್ದಾರೆ.

ಕೆಲ ದಿನಗಳ ಹಿಂದೆ ಕೋವಿಡ್‌ ಸೊಂಕಿಗೆ ಈಡಾಗಿದ್ದ ಜಯಮ್ಮ ಅವರನ್ನು ವಿಜಯ್‌ ಜತನದಿಂದ ಕಾಪಾಡಿ, ಕರೋನ ಸೊಂಕಿನಿಂದ ಮುಕ್ತರಾಗಿ ಮಾಡಿ, ಅವರನ್ನು ನೋಡಿಕೊಳ್ಳುತ್ತಿದ್ದರು. ಆದರೆ ಜಯಮ್ಮ ಅವರು ವಯೋ ಸಹಜ ಕಾಯಿಲೆಯಿಂದ ಬಳುತ್ತಿದ್ದರು ಎನ್ನಲಾಗಿತ್ತು.

ನಟ ದುನಿಯಾ ವಿಜಯ್ ಅವರು, ನನ್ನ ತಾಯಿಗೆ ಅನಾರೋಗ್ಯವಿದ್ದರೂ, ಆಸ್ಪತ್ರೆಗೆ ಹೋಗಲು ಒಪ್ಪಿರಲಿಲ್ಲ. ಇದರಿಂದಾಗಿಯೇ ಮನೆಯಲ್ಲಿಯೇ ಆಸ್ಪತ್ರೆಯ ರೀತಿಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದೆ. ಕೊನೆಯವರೆಗೆ ಚೆನ್ನಾಗಿಯೇ ನೋಡಿಕೊಳ್ಳಲಾಗಿತ್ತು.

ಆರೋಗ್ಯ ಏರುಪೇರಾಗಿ, ಮತ್ತಷ್ಟು ಆರೋಗ್ಯ ಹದಗೆಟ್ಟಿತ್ತು. ಈಗಾಗಲೇ ಬ್ರೈನ್ ಸ್ಟ್ರೋಕ್ ಕೂಡ ಆಗಿದ್ದ ನಟ ದುನಿಯಾ ವಿಜಯ್ ಅವರ ತಾಯಿ ಜಯಮ್ಮ, ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.