Thursday, 12th December 2024

ನಟ ದುನಿಯಾ ವಿಜಯ್ ವಿಚ್ಛೇದನ ಅರ್ಜಿ ವಜಾ

ಬೆಂಗಳೂರು: ತನ್ನ ಪತ್ನಿ ವಿರುದ್ಧ ಕ್ರೌರ್ಯ ಆರೋಪ ಹೊರಿಸಿದ್ದ ನಟ ದುನಿಯಾ ವಿಜಯ್, ಕೌಟುಂಬಿಕ ನ್ಯಾಯಾಲಯಕ್ಕೆ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಕ್ರೌರ್ಯ ಆರೋಪ ಸಾಬೀತು ಪಡಿಸದ ಹಿನ್ನಲೆಯಲ್ಲಿ ಕೋರ್ಟ್ ವಜಾಗೊಳಿಸಿದೆ.

ಬೆಂಗಳೂರಿನ ಶಾಂತಿನಗರದಲ್ಲಿರುವ ಕೌಟುಂಬಿಕ ನ್ಯಾಯಾಲಯದಲ್ಲಿ ನಟ ದುನಿಯಾ ವಿಜಯ್ ಅವರು ಕ್ರೌರ್ಯ ಆರೋಪದಲ್ಲಿ ಪತ್ನಿ ನಾಗರತ್ನ ರಿಂದ ವಿಚ್ಛೇಧನ ನೀಡುವಂತೆ ಸಲ್ಲಿಸಿದ್ದಂತ ಅರ್ಜಿಯನ್ನು ವಿಚಾರಣೆ ನಡೆಸಿತು.

ನಟ ದುನಿಯಾ ವಿಜಯ್ ಅವರು ಪತ್ನಿ ನಾಗರತ್ನ ವಿರುದ್ಧ ಮಾಡಿದ್ದ ಕ್ರೌರ್ಯ ಆರೋಪಗಳನ್ನು ಸಾಬೀತುಪಡಿಸುವುದಕ್ಕೆ ನ್ಯಾಯಾಲಯದಲ್ಲಿ ಸಾಧ್ಯವಾಗಲಿಲ್ಲ. ಈ ಹಿನ್ನಲೆಯಲ್ಲಿ ನಟ ದುನಿಯಾ ವಿಜಯ್ ಅವರು ಪತ್ನಿ ನಾಗರತ್ನರಿಂದ ವಿಚ್ಛೇದನ ಕೋರಿ ಸಲ್ಲಿಸಿದ್ದಂತ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.