Sunday, 15th December 2024

ನಟ ಧನುಷ್, ಡಿಎಂಡಿಕೆ ಮುಖ್ಯಸ್ಥ ವಿಜಯಕಾಂತ್ ಮನೆಗಳಿಗೆ ಹುಸಿ ಬಾಂಬ್ ಕರೆ

ಚೆನ್ನೈ: ತಮಿಳು ನಟ ಧನುಷ್ ಮತ್ತು ಡಿಎಂಡಿಕೆ ಮುಖ್ಯಸ್ಥ ವಿಜಯಕಾಂತ್ ಅವರ ಮನೆಗಳಲ್ಲಿ ಬಾಂಬ್‌ಗಳನ್ನು ಇರಿಸಲಾಗಿದೆ ಎಂದು ಎರಡು ಹುಸಿ ಬಾಂಬ್ ಕರೆಗಳು ಬಂದಿವೆ.

ಅನಾಮಧೇಯ ವ್ಯಕ್ತಿಗಳಿಂದ ಕರೆಗಳನ್ನು ಸ್ವೀಕರಿಸಿದ ನಂತರ ಪೊಲೀಸರು ಧನುಷ್ ಹಾಗೂ ವಿಜಯಕಾಂತ್ ಅವರುಗಳ ಮನೆ ಗಳಿಗೆ ಬಾಂಬ್ ಪತ್ತೆ ದಳಗಳನ್ನು ಕಳಿಸಿ ಪರಿಶೀಲಿಸಿದ್ದಾರೆ. ಆದರೆ ಅವೆರಡೂ ಕರೆಗಳು ಹಿಸಿ ಬಾಂಬ್ ಕರೆಗಳೆಂದು ತಿಳಿದು ಬಂದಿದೆ. ಸಧ್ಯ ಈ ಕುರಿತಂತೆ ಹೆಚ್ಚಿನ ವಿಚಾರಣೆ ನಡೆಯುತ್ತಿದೆ.

ಕೆಲವು ತಿಂಗಳುಗಳ ಹಿಂದೆ ನಟ ಸೂರ್ಯ ಅವರ ಕಚೇರಿಯಲ್ಲಿ ಬಾಂಬ್ ಇರಿಸಿದ್ದಾಗಿ ಇಂತಹುದೇ ಹುಸಿ ಕರೆ ಬಂದಿತ್ತು. ಈ ಬಾರಿ ಎರಡೂ ಕರೆಗಳನ್ನು ಒಬ್ಬನೇ ವ್ಯಕ್ತಿ ಮಾಡಿರುವುದಾಗಿ ತಿಳಿದುಬಂದಿದೆ.