Sunday, 15th December 2024

ನಟ ಚಿಯಾನ್ ವಿಕ್ರಂ ಮನೆಗೆ ಹುಸಿ ಬಾಂಬ್ ಕರೆ

ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಟ ಚಿಯಾನ್ ವಿಕ್ರಂ ಮನೆಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ.

ವಿಕ್ರಂ ಅವರಿಗೆ ಸೇರಿದ್ದ ಚೆನ್ನೈನ ಬೆಸೆಂಟ್ ನಗರದ ಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಸೋಮವಾರ ಮಧ್ಯಾಹ್ನ ಪೊಲೀಸ್ ಕಂಟ್ರೋಲ್ ರೂಂ ಗೆ ಕರೆ ಬಂದಿತ್ತು. ಕೂಡಲೇ ಬಾಂಬ್ ನಿಷ್ಕ್ರೀಯ ದಳದೊಂದಿಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಮನೆಯಲ್ಲಿ ತಪಾಸಣೆ ನಡೆಸಿದರು. ಬಳಿಕ ಇದು ಹುಸಿಕರೆ ಎಂದು ತಿಳಿದು ಬಂದಿದೆ.

ವಿಲ್ಲುಪುರಂನ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ ತಮಿಳುನಾಡು ಮುಖ್ಯಮಂತ್ರಿ ಇ.ಕೆ. ಪಳನಿಸ್ವಾಮಿ ಮತ್ತಿತರ ನಟರಿಗೆ ಬಾಂಬ್ ಬೆದರಿಕೆ ಕರೆ ಮಾಡಿದ್ದ. ಇದೇ ವ್ಯಕ್ತಿ ಇದರಲ್ಲಿ ವಿಕ್ರಂ ಅವರಿಗೂ ಕರೆ ಮಾಡಿದ್ದಾನೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿ ದ್ದಾರೆ.