Thursday, 12th December 2024

ಶಾರೂಖ್ ಖಾನ್ ಕ್ಷಮೆ ಕೇಳುವಂತೆ ಖಾಸಗಿ ಚಾನೆಲ್’ಗೆ ಒತ್ತಾಯ ?

ನವದೆಹಲಿ/ಮುಂಬೈ: ಈ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಾರಣವಿಷ್ಟೇ, ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಹೆಸರನ್ನು ಖಾಸಗಿ ನ್ಯೂಸ್ ವಾಹಿನಿಯೊಂದು ಡ್ರಗ್ ಕೇಸ್  ಪ್ರಕರಣದಲ್ಲಿ ಪ್ರಸಾರ ಮಾಡಿದೆ. ನಟ ಸುಶಾಂತ್ ಸಿಂಗ್ ರಾಜಪೂತ್ ಹತ್ಯೆ ಪ್ರಕರಣದಲ್ಲಿ ಬಾಲಿವುಡ್ ಡ್ರಗ್ಸ್ ನಂಟಿನ ಜಾಡು
ಹಿಡಿದು ತನಿಖೆ ಮಾಡುತ್ತಿರುವ ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋ ಸೆಲೆಬ್ರಿಟಿಗಳಿಗೆ ಸಮನ್ಸ್ ಜಾರಿ ಮಾಡಿದೆ. ಅದರಲ್ಲಿ ಶಾರೂಖ್ ಖಾನ್ ಹೆಸರು ಕೂಡ ಪ್ರಸಾರವಾಗಿದೆ.

ಇದನ್ನು ಖಂಡಿಸಿ, ನಟನ ಅಭಿಮಾನಿಗಳು ಕ್ಷಮೆ ಕೇಳುವಂತೆ ಖಾಸಗಿ ಚ್ಯಾನೆಲ್’ಗೆ ಮುಗಿ ಬಿದ್ದಿವೆ. ನಟಿ ದೀಪಿಕಾ ಪಡುಕೋಣೆಯ ಸಹ ನಟರನ್ನು ‘ಎ’, ‘ಆರ್’, ‘ಎಸ್’ ಎಂಬ ಇನಿಶಿಯಲ್’ನಿಂದ ಗುರುತಿಸಲಾಗಿದ್ದು, ‘ಎಸ್‍’ ಎಂದರೆ, ಶಾರೂಖ್, ‘ಆರ್’ ಎಂದರೆ ರಣಬೀರ್ ಕಪೂರ್ ಹಾಗೂ ‘ಎ’ ಎಂದರೆ ಅರ್ಜುನ್ ರಾಂಪಾಲ್ ಎಂದು ಸುದ್ದಿ ಪ್ರಸಾರ ಮಾಡಿ, ಯಡವಟ್ಟು ಮಾಡಿಕೊಂಡಿದೆ.