Friday, 22nd November 2024

ಫ್ಯಾಷನ್​ ಈವೆಂಟ್​ನಲ್ಲಿ ಗಮನ ಸೆಳೆದ ದಿಶಾ ಪಟಾನಿ, ಸಾರಾ ಅಲಿ ಖಾನ್​ ಮತ್ತು ಆದಿತ್ಯ ರಾಯ್​ ಕಪೂರ್

ಮುಂಬೈ: ಇಂಡಿಯಾ ಕೌಚರ್​ ವೀಕ್​ 2023 ಫ್ಯಾಷನ್​ ಈವೆಂಟ್​ನಲ್ಲಿ ಬಾಲಿವುಡ್​ ನಟರಾದ ದಿಶಾ ಪಟಾನಿ, ಸಾರಾ ಅಲಿ ಖಾನ್​ ಮತ್ತು ಆದಿತ್ಯ ರಾಯ್​ ಕಪೂರ್​ ಭಾಗವಹಿಸಿ ಗಮನ ಸೆಳೆದರು.

ಇಂಡಿಯಾ ಕೌಚರ್​ ವೀಕ್​ 2023 ಫ್ಯಾಷನ್​ ಈವೆಂಟ್ ನವದೆಹಲಿಯಲ್ಲಿ ನಡೆಯುತ್ತಿದೆ. ಫ್ಯಾಷನ್ ಡಿಸೈನ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಹ್ಯುಂಡೈ ಮೋಟಾರ್ ಇಂಡಿಯಾ ಜಂಟಿಯಾಗಿ ಆಯೋಜಿಸಿರುವ ಈ ಮೆಗಾ ಈವೆಂಟ್ ಆಗಸ್ಟ್ 2ರವರೆಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಬಾಲಿವುಡ್​ ನಟರಾದ ದಿಶಾ ಪಟಾನಿ, ಸಾರಾ ಅಲಿ ಖಾನ್​ ಮತ್ತು ಆದಿತ್ಯ ರಾಯ್​ ಕಪೂರ್​ ಭಾಗವಹಿಸಿ ಗಮನ ಸೆಳೆದರು. ಟ್ರೆಡಿಷನಲ್​ ಮತ್ತು ಮಾರ್ಡನ್​ ಡ್ರೆಸ್​ನೊಂದಿಗೆ ನೋಡುಗರನ್ನು ಆಕರ್ಷಿಸಿದರು.

ಮೂವರು ಫ್ಯಾಷನ್​ ಡಿಸೈನರ್​ಗಳಾದ ಡಾಲಿ ಜೆ, ಶಾಂತನು ಮತ್ತು ನಿಖಿಲ್‌ ಅವರಿಗಾಗಿ ರ‍್ಯಾಂಪ್​ ವಾಕ್ ಮಾಡಿದರು. ಫಿಟ್ನೆಸ್​ ಐಕಾನ್​ ದಿಶಾ ಪಟಾನಿ ಸಿಲ್ವರ್​ ಬಣ್ಣದ ಸ್ಟೈಲಿಶ್​ ಡ್ರೆಸ್​ನಲ್ಲಿ ಅಂದವಾಗಿ ಕಂಡರು. ಸಾರಾ ಅಲಿ ಖಾನ್​ ಮತ್ತು ಆದಿತ್ಯ ರಾಯ್​ ಕಪೂರ್​ ಈವೆಂಟ್​ಗಾಗಿ ಸಾಂಪ್ರದಾಯಿಕ ಉಡುಪು ಧರಿಸಿದ್ದರು. ದಿಶಾ ಪಟಾನಿ ವೇದಿಕೆಯಲ್ಲಿ ನಡೆದು ಬರುತ್ತಿದ್ದಂತೆ, ಅಭಿಮಾನಿಗಳ ಹೃದಯ ಬಡಿತ ಹೆಚ್ಚಿಸಿತು. ಸಾರಾ ಮತ್ತು ಆದಿತ್ಯ ಜೋಡಿ ಪ್ರೇಕ್ಷಕರನ್ನು ಸೆಳೆಯಿತು.

ಮಲಾಂಗ್​ ತಾರೆ ದಿಶಾ ಪಟಾನಿ ಮಿನುಗುವ ಬೆಳ್ಳಿಯ ದಿರಿಸಿನಲ್ಲಿ ರ‍್ಯಾಂಪ್ ವಾಕ್ ಮಾಡಿದರು. ಕನಿಷ್ಠ ಮೇಕಪ್​ ಮತ್ತು ಬೆಳ್ಳಿಯ ಕಿವಿಯೋಲೆಯೊಂದಿಗೆ ತಮ್ಮ ನೋಟವನ್ನು ಪೂರ್ಣಗೊಳಿಸಿದರು. ಡಾಲಿ ಜೆ ಅವರ ಕಾರಣದಿಂದಾಗಿ ನಟಿ ದೇವತೆಯಂತೆ ಕಂಗೊಳಿಸಿದರು. ಸುಂದರವಾದ ಈವೆಂಟ್​ ಅಂದವನ್ನು ದಿಶಾ ಮತ್ತಷ್ಟು ಹೆಚ್ಚಿಸಿದರು.

ಸಾರಾ ಅಲಿ ಖಾನ್​ ಕ್ರೀಮ್ – ಹ್ಯೂಡ್ ಲೆಹೆಂಗಾವನ್ನು ಆರಿಸಿಕೊಂಡರು. ಅದ್ಭುತವಾದ ಮಿನುಗುವ ಬಸ್ಟಿಯರ್ ಕುಪ್ಪಸದೊಂದಿಗೆ ಕಾಣಿಸಿಕೊಂಡರು. ಅದಕ್ಕೆ ತಕ್ಕಂತೆ ಮೇಕಪ್​, ಆಭರಣಗಳನ್ನು ಧರಿಸಿ ತಮ್ಮ ನೋಟ ಪೂರ್ಣಗೊಳಿಸಿದರು. ಆದಿತ್ಯ ರಾಯ್​ ಕಪೂರ್​ ಬಿಳಿ ಸೆಲ್ವಾರ್​ ಧರಿಸಿದ್ದರು. ಶಾಂತನು ಮತ್ತು ನಿಖಿಲ್‌ ಅವರನ್ನು ಪ್ರತಿನಿಧಿಸಿ ಈ ಸ್ಟಾರ್​ ನಟರು ರ‍್ಯಾಂಪ್​ ವಾಕ್ ಮಾಡಿದರು.