Sunday, 15th December 2024

ನಟ ಸೋನು ಸೂದ್‌ ವಿರುದ್ದ ಪ್ರಕರಣ ದಾಖಲು

ಮುಂಬೈ: ಬಾಲಿವುಡ್ ನಟ ಸೋನು ಸೂದ್ ವಿರುದ್ಧ (ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೊರೇಶನ್) ಬಿಎಂಸಿ ಪ್ರಕರಣ ದಾಖಲಿಸಿಕೊಂಡಿದೆ ಎಂದು ಗುರುವಾರ ತಿಳಿದುಬಂದಿದೆ. ಅನುಮತಿ ಪಡೆಯದೆ ಕಟ್ಟಡವನ್ನು ಹೋಟೆಲ್ ಆಗಿ ಮಾರ್ಪಡಿಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.

ಜುಹುವಿನಲ್ಲಿ ಸೋನು ಅವರಿಗೆ ಸೇರಿದ 6 ಮಹಡಿಯ ಕಟ್ಟಡವಿದ್ದು, ಈ ಕಟ್ಟಡವನ್ನು ಹೋಟೆಲ್ ಆಗಿ ಮಾರ್ಪಡಿಸಲಾಗಿತ್ತು.

ಬಿಎಂಸಿ ಅಧಿಕಾರಿಗಳು, ಅನುಮತಿ ಇಲ್ಲದೆಯೇ ಕಟ್ಟಡವನ್ನು ಹೋಟೆಲ್ ಆಗಿ ಮಾರ್ಪಡಿಸಲಾಗಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದೆ.