Thursday, 21st November 2024

Gaangeaya movie: ‘ಗಾಂಗೇಯ’ ಚಿತ್ರದ ಹಾಡುಗಳು ರಿಲೀಸ್‌; ಭರದಿಂದ ಸಾಗಿದ ಶೂಟಿಂಗ್‌

Gaangeaya movie

ಬೆಂಗಳೂರು: ಕನ್ನಡ ಸೇರಿ ಐದು ಭಾಷೆಗಳಲ್ಲಿ ಏಕಕಾಲಕ್ಕೆ ‘ಗಾಂಗೇಯ’ (Gaangeaya movie) ಸಿನಿಮಾ ತಯಾರಾಗುತ್ತಿದ್ದು, ಚಿತ್ರೀಕರಣ ಭರದಿಂದ ಸಾಗಿದೆ. ಇತ್ತೀಚಿಗೆ ನಡೆದ ಸಮಾರಂಭದಲ್ಲಿ ಸಿನೆಮಾದ ಹಾಡುಗಳನ್ನು ಬಿಡುಗಡೆ ಮಾಡಲಾಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಮಾಜಿ ಅಧ್ಯಕ್ಷರಾದ ಭಾ.ಮ.ಹರೀಶ್, ನರಸಿಂಹಲು ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಅವರ ದೊಡ್ಡಪ್ಪ ಚೆಲುವಮೂರ್ತಿ ಮುಂತಾದ ಗಣ್ಯರು ಕನ್ನಡ ಅವತರಣಿಕೆಯ ಹಾಡುಗಳನ್ನು ಬಿಡುಗಡೆ ಮಾಡಿ ಶುಭಕೋರಿದರು.

ಕಾರ್ಯಕ್ರಮದಲ್ಲಿ ನಿರ್ದೇಶಕ ಎಂ.ರಾಮಚಂದ್ರ ಶ್ರೀನಿವಾಸಕುಮಾರ್ ಮಾತನಾಡಿ, ಪ್ರಸಕ್ತ ದಿನಗಳಲ್ಲಿ ಸಮಾಜದಲ್ಲಿ ಜಾತಿ, ಧರ್ಮಗಳ ಸಂಘರ್ಷ ಹೆಚ್ಚುತ್ತಿದೆ. ಸರ್ವ ಜಾತಿ, ಧರ್ಮಗಳ ಸಮನ್ವಯತೆ ಸಾರುವ ಉದ್ದೇಶದಿಂದ ‘ಗಾಂಗೇಯ’ ಸಿನೆಮಾ ಮಾಡಲಾಗಿದೆ ಎಂದು ಮಾತು ಆರಂಭಿಸಿದಗ್ರಾಮೀಣ ಪ್ರದೇಶದ ಯುವಕರು ಕೆಲಸ ಮಾಡಲು ನಗರಕ್ಕೆ ಬಂದಾಗ ಸಂಭವಿಸುವ ಘಟನೆಗಳೇ ಸಿನೆಮಾದ ಕಥಾವಸ್ತು. ಗಾಂಗೇಯ ಎಂದರೆ ಸುಬ್ರಹ್ಮಣ್ಯ ದೇವರ ಹೆಸರು, ಭೀಷ್ಮನ ಹೆಸರು ಸಹ ಅದೇ. ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಕರ್ನಾಟಕ, ಆಂಧ್ರ, ಕೇರಳದಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಏಕಕಾಲಕ್ಕೆ ಎಲ್ಲಾ ಭಾಷೆಗಳಲ್ಲೂ ಬಿಡುಗಡೆ ಮಾಡುವ ಯೋಜನೆಯಿದೆ ಎಂದರು.

ನಿರ್ದೇಶಕ, ನಿರ್ಮಾಪಕ ರಾಮಚಂದ್ರ ಶ್ರೀನಿವಾಸ ಕುಮಾರ್ ಮಾತನಾಡಿ, ಯುವಕಲಾವಿದರು ಹಾಗೂ ತಂತ್ರಜ್ಞರಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಸಂಸ್ಥೆ ಹುಟ್ಟುಹಾಕಲಾಗಿದೆ. ನಮ್ಮ ವಿಜಯ ಗೌತಮಿ ಆರ್ಟ್ ಮೂವೀಸ್ ಸಂಸ್ಥೆ ವತಿಯಿಂದ ವರ್ಷಕ್ಕೆ 10 ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದರು.

ನಟ ಗಗನ್ ಮಾತನಾಡಿ, ಈ ಹಿಂದೆ ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿದ್ದೆ, ಗಾಂಗೇಯ ನನ್ನ ಮೊದಲ ಕನ್ನಡ ಸಿನಿಮಾ. ಸಮಾಜಕ್ಕೆ ಸಂದೇಶ ನೀಡುವನಿಟ್ಟಿನಲ್ಲಿ ನಿರ್ದೇಶಕರು ಸಿನೆಮಾ ಕಥೆ ಬರೆದಿದ್ದಾರೆ .ಅವರು ನೀಡಿರುವ ಪಾತ್ರಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪಾತ್ರಕ್ಕೆ ತಯಾರಿ ಮಾಡಿಕೊಂಡು ನಟಿಸುತ್ತಿದ್ದೇನೆ ಎಂದರು .

ತೆಲುಗು ಸಿನಿಮಾ ರಂಗದಲ್ಲಿ ಈಗಾಗಲೇ 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಗಗನ್ ‘ಗಾಂಗೇಯ’ ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ರಣಧೀರ್, ತೇಜಾಂಕ್, ಸುಮನ್ ಪ್ರಮುಖ ತಾರಾಗಣದಲ್ಲಿದ್ದಾರೆ. ವಿಜಯಶೇಖರ್ ರೆಡ್ಡಿ, ರಾಮಚಂದ್ರ ಶ್ರೀನಿವಾಸಕುಮಾರ್ ನಿರ್ಮಾಣ ಮಾಡಿದ್ದಾರೆ. ಖ್ಯಾತ ನಟ ಸುಮನ್ ಸೇರಿದಂತೆ ಇನ್ನಿತರ ತಾರಾಗಣವಿದೆ. ರ‍್ಯಾಪ್ ರಾಕ್ ಶಕೀಲ್ ಸಂಗೀತ,‌ ಅದುಸುಮಿಲಿ ವಿಜಯ್ ಕುಮಾರ್ ಛಾಯಾಗ್ರಹಣ, ಕೋಟಗಿ ವೆಂಕಟೇಶ ರಾವ್ ಸಂಕಲನ ಸಿನಿಮಾಕ್ಕಿದೆ.