Monday, 16th December 2024

BBK 11: ರಜತ್​ರ ಮೈ-ಚಳಿ ಬಿಡಿಸಿದ ಪಾಸಿಟಿವ್ ಗೌತಮಿ: ಇಬ್ಬರ ಮಧ್ಯೆ ದೊಡ್ಡ ಗಲಾಟೆ

Gauthami and Rajath

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಹನ್ನೆರಡನೇ ವಾರಕ್ಕೆ ಕಾಲಿಟ್ಟಿದೆ. ಸುಮಾರು 80 ದಿನಗಳು ಮುಕ್ತಾಯಗೊಂಡಿದ್ದು ಅಸಲಿ ಆಟ ಈಗ ಶುರುವಾಗಿದೆ. ಶಿಶಿರ್ ಶಾಸ್ತ್ರೀ ಶಾಕಿಂಗ್ ಎಲಿಮಿನೇಷನ್ ಸದ್ಯ ಮನೆಯನ್ನು ಆವರಿಸಿದೆ. ಫೈನಲ್ ಸ್ಪರ್ಧಿ ಎಂದು ಅಂದುಕೊಂಡಿದ್ದ ಶಿಶಿರ್ ಇಷ್ಟು ಬೇಗ ಆಟ ಮುಗಿಸಿದ್ದು ಅಚ್ಚರಿ ಮೂಡಿಸಿದೆ. ಇದರ ನಡುವೆ ಮನೆಮಂದಿಗೆ ನೂತನ ಟಾಸ್ಕ್ ನೀಡಲಾಗುತ್ತಿದೆ. ಜೊತೆಗೆ ಜಗಳಗಳೂ ಜೋರಾಗಿವೆ.

ಇಂದು ಬಿಗ್ ಬಾಸ್ ಸ್ಪರ್ಧಿಗಳಿಗೆ ಮನೆಯನ್ನೂ ಸಂಪೂರ್ಣವಾಗಿ ಕ್ಲೀನ್ ಮಾಡುವ ಟಾಸ್ಕ್ ಕೊಟ್ಟಿದ್ದಾರೆ. ಇದರ ಮಧ್ಯೆ ಗೌತಮಿ ಜಾಧವ್ ಹಾಗೂ ರಜತ್ ಕಿಶನ್ ನಡುವೆ ಮಾತಿನ ಯುದ್ಧ ನಡೆದಿದೆ. ಇಬ್ಬರೂ ಸರಿಯಾಗಿ ಕಿತ್ತಾಡಿಕೊಂಡಿದ್ದಾರೆ. ಪ್ರೊಮೋದಲ್ಲಿ ಇಡೀ ಬಿಗ್​ ಬಾಸ್​​ ಮನೆಯಲ್ಲಿ ಕಸ ತುಂಬಿಕೊಂಡಿರುವುದು ಕಾಣಬಹುದು. 60 ನಿಮಿಷಗೊಳಗಾಗಿ ಸ್ಪರ್ಧಿಗಳು ಮನೆಯನ್ನು ಸ್ವಚ್ಛಗೊಳಿಸಬೇಕು ಎಂದು ಬಿಗ್​ ಬಾಸ್​​ ಸೂಚಿಸಿದ್ದಾರೆ.

ಸ್ಪರ್ಧಿಗಳೆಲ್ಲ ಮನೆ ಕ್ಲೀನ್ ಮಾಡುವ ಕೆಲಸ ಶುರು ಹಚ್ಚಿಕೊಂಡಿದ್ದಾರೆ. ಆದರೆ, ರಜತ್ ಮಾತ್ರ​ ಒಂದು ಬದಿ ಆರಾಮವಾಗಿ ಕುಳಿತುಕೊಂಡಿದ್ದಾರೆ. ಒಬ್ಬರೇ ಸುಮ್ನೆ ಕುಳಿತಿರುವುದನ್ನು ನೋಡಲು ಆಗುತ್ತಿಲ್ಲ ಎಂಬ ಮಾತು ಮನೆಯ ಇತರ ಸ್ಪರ್ಧಿಗಳ ಕಡೆಯಿಂದ ಬಂದಿದೆ. ಅತ್ತ ಗೌತಮಿ ಅವರು ಇದರಿಂದ ಕೋಪಿಸಿಕೊಂಡ, ಡೈಲಾಗ್ ಹೊಡಿ, ಕೂತ್ಕೊ.. ಒಂದಷ್ಟು ಹಣ್ಣು ತಿನ್ನು ಎಂದಿದ್ದಾರೆ.

ಗೌತಮಿಯ ಈ ಮಾತಿಗೆ ಟ್ರಿಗರ್ ಆದ ರಜತ್, ಇದು ನಿನ್ನ ಮನೆ ಅಂದ್ಕೊಂಡಿದ್ಯಾ? ಎಂದು ಡೈಲಾಗ್ ಹೊಡೆದಿದ್ದಾರೆ. ಡ್ರಾಮಾ ಮಾಡ್ಕೊಂಡೇ 12 ವಾರ ಬಂದುಬಿಟ್ಟೆ ಎಂದು ಗೌತಮಿಗೆ ಟಾಂಗ್ ಕೊಟ್ಟಿದ್ದಾರೆ. ನಿಮ್ಮಂತೋನಿಗೆ ಹೆದ್ರೋದೆ ಇಲ್ಲ ನಾನು ಎಂದು ಗೌತಮಿ ಹೇಳಿದ್ದಾರೆ.

ಗೌತಮಿ ಬಳಿ ಪಿಲ್ಲೋ ಎಸೆದ ರಜತ್​, ಡ್ರಾಮಾ ಮಾಡ್ಕೊಂಡೇ ಬಂದ್ಬುಟ್ಟೆ 12 ವಾರಗಳಿಂದ, ಒಂದ್​ ಬಕೆಟ್​​ ಇನ್ನೊಂದ್​ ಬಕೆಟ್​​​ ಇಡ್ಕೊಂಡಿರೋದನ್ನು ಫಸ್ಟ್​ ಟೈಮ್​​ ನೋಡಿದ್ದು, ನೀನ್​ ದಬಾಕಿರೋದನ್ನು 12 ವಾರಗಳಿಂದ ನೋಡಿದ್ದೀನಿ, ಸಪೋರ್ಟ್​ ಬೇಕು ಅಂತಾ ಯಾರದ್ದೋ ಕಾಲ್ ಹಿಡಿದುಕೊಂಡು ಹೋಗೋದಲ್ಲ, ತಾಕತ್ತಿದ್ರೆ ಇಂಡ್ಯುವಿಶುವಲ್ ಆಗಿ ಅಡು ಎಂದು ಏಕವಚನದಲ್ಲೇ ಮಾತನಾಡಿದ್ದಾರೆ. ಗೌತಮಿ ಮತ್ತು ರಜತ್ ಜಗಳ ಆಗುವ ಸಮಯದಲ್ಲಿ ಯಾರು ಏನೂ ಮಾತು ಆಡಿಲ್ಲ. ಇಬ್ಬರೇ ಮಾತಿನ ಯುದ್ಧ ನಡೆಸಿದ್ದಾರೆ.

BBK 11: ಬಿಗ್ ಬಾಸ್​ನಲ್ಲಿ ಬಿಗ್ ಟ್ವಿಸ್ಟ್: ಒಂದೇ ದಿನ ಮನೆಯಿಂದ ಹೊರಬಂದ ಇಬ್ಬರು ಸ್ಪರ್ಧಿಗಳು