Thursday, 12th December 2024

ಜನ್ಮದಿನದ ಸಂಭ್ರಮದಲ್ಲಿ ನಟಿ ಗಿರಿಜಾ ಲೋಕೇಶ್

ಬೆಂಗಳೂರು: ಹಿರಿಯ ನಟಿ ಗಿರಿಜಾ ಲೋಕೇಶ್ ಇಂದು ತಮ್ಮ ಜನ್ಮದಿನದ ಸಂಭ್ರಮದಲ್ಲಿದ್ದಾರೆ.

ಕನ್ನಡ ಚಿತ್ರರಂಗದ ಹಿರಿಯ ನಟಿ ಗಿರಿಜಾ ಲೋಕೇಶ್ 200ಕ್ಕೂ ಅಧಿಕ ಚಿತ್ರ ಗಳಲ್ಲಿ ಅಭಿನಯಿಸಿ ಸೈ ಅನಿಸಿಕೊಂಡಿದ್ದಾರೆ. ಗಿರಿಜಾ ಲೋಕೇಶ್ ಅವರ ಪುತ್ರ ಸೃಜನ್ ಲೋಕೇಶ್ ಸಾಮಾಜಿಕ ಜಾಲತಾಣದಲ್ಲಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

ನನ್ನ ಪ್ರೀತಿಯ ಅಮ್ಮನಿಗೆ ಹುಟ್ಟುಹಬ್ಬದ ಶುಭಾಶಯಗಳು. ನಮ್ಮ ಕುಟುಂಬದ ನಗುವಿನ ಕಾರಣ ನೀನು. ಸದಾ ನಗುತಿರು, ಸದಾ ಖುಷಿಯಿಂದಿರು ಎಂದು ಬರೆದುಕೊಳ್ಳುವ ಮೂಲಕ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.