ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಎಂಟನೇ ವಾರಕ್ಕೆ ಇಬ್ಬರು ಹೊಸ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಶೋಭಾ ಶೆಟ್ಟಿ ಹಾಗೂ ರಜತ್ ದೊಡ್ಮನೆಗೆ ಕಾಲಿಟ್ಟಿದ್ದಾರೆ. ಶೋಭಾ ಮೊದಲ ದಿನದಿಂದಲೇ ಮನೆಯವರ ಮೇಲೆ ಸವಾರಿ ಮಾಡುತ್ತಿದ್ದಾರೆ. ಇದೀಗ ರಜತ್ ಸರದಿ. ಟಾಸ್ಕ್ ಮಧ್ಯೆ ರಜತ್ ಹಾಗೂ ಇತರೆ ಸದಸ್ಯರ ನಡುವೆ ದೊಡ್ಡ ಜಗಳ ನಡೆದಿದೆ. ಒಂದು ಹಂತದಲ್ಲಿ ಗೋಲ್ಡ್ ಸುರೇಶ್ ಅವರಿಗೆ ಅವಾಚ್ಯ ಪದಗಳನ್ನು ಬಳಸಿದ್ದಾರೆ.
ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದಾರೆ. ಕೊಳವೆ ಮೂಲಕ ಬರುವ ಚೆಂಡನ್ನು ಪಡೆದುಕೊಂಡು ತಮ್ಮ ತಂಡಕ್ಕೆ ಮೀಸಲಿರುವ ಚೌಕಟ್ಟಿನ ಒಳಗೆ ಚೆಂಡನ್ನು ಇಡಬೇಕು. ಈ ವೇಳೆ ಸುರೇಶ್ ಹಾಗೂ ರಜತ್ ನಡುವೆ ಜಗಳ ತಾರಕ್ಕೇರಿದೆ. ಅಶ್ಲೀಲ ಪದಗಳನ್ನು ಬಳಸಿ ಕೂಗಾಡಿದ್ದಾರೆ. ಮಾತ್ರವಲ್ಲ ಸುರೇಶ್ ಅವರು ಬಿಗ್ ಬಾಸ್ ಮನೆಯ ಕದ ತಟ್ಟಿ ನಾನು ಆಟ ಆಡೊಲ್ಲ. ಮನೆಯಿಂದ ಹೊರಗೆ ಕಳುಹಿಸಿ ಎಂದು ಕಿರುಚಾಡಿದ್ದಾರೆ.
ಗೋಲ್ಡ್ ಸುರೇಶ್ ವಿರುದ್ಧ ರಜತ್ ಕಿಶನ್ ನಾಲಿಗೆ ಹರಿಬಿಟ್ಟಿದ್ದಾರೆ. ಗುಗ್ಗು ನನ್ ಮಗನ್ ಥರಾ ಮಾತಾಡ್ತಿದ್ದೀಯಾ, ಅಮಿಕ್ಕೊಂಡಿರು, ಸಡೆ ಮಾತುಗಳೆಲ್ಲಾ ಬೇಡ.. ತಿಳ್ಕೋ.. ಅಂತ ಗೋಲ್ಡ್ ಸುರೇಶ್ ಮೇಲೆ ರಜತ್ ಕೂಗಾಡಿದ್ದಾರೆ. ರಜತ್ ಮಾತುಗಳನ್ನ ಕೇಳಿ ಬೇಸೆತ್ತ ಗೋಲ್ಡ್ ಸುರೇಶ್, ತಮ್ಮ ಮೇಲೆ ಬಳಕೆ ಆಗಿರುವ ಪದಗಳು ಆಕ್ಷೇಪಾರ್ಹವಾಗಿವೆ. ನನಗೆ ಬೇಸರ ಆಗಿದೆ. ಬಿಗ್ಬಾಸ್ ಅವರು ನನಗೆ ಮಗನೆ, ಗಿಗನೆ ಎಂದೆಲ್ಲ ಹೇಳ್ತಾರೆ. ಇವನು ನನ್ನ ಅಪ್ಪ ಅಲ್ಲ. ಬಿಗ್ ಬಾಸ್ ನಾನು ಆಡಲ್ಲ. ಬಿಗ್ ಬಾಸ್ ಬಾಗಿಲು ಓಪನ್ ಮಾಡಿ ಎಂದು ಡೋರ್ ತಟ್ಟಿದ್ದಾರೆ.
ಮನೆಯ ಕ್ಯಾಪ್ಟನ್ ಆಗಿರುವ ಭವ್ಯಾ ಗೌಡ ಅವರು ಸುರೇಶ್ ಅವರನ್ನು ಸಮಾಧಾನ ಮಾಡಲು ಪ್ರಯತ್ನ ಮಾಡಿದ್ದಾರೆ. ತ್ರಿವಕ್ರಮ್ ಕೂಡ ತುಂಬಾ ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ಆ ಕ್ಷಣದ ಕೋಪಕ್ಕೆ ಗೋಲ್ಡ್ ಸುರೇಶ್ ಅವರು ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ.
ಆಕ್ರೋಶಕ್ಕೂ, ಆವೇಶಕ್ಕೂ ಸತ್ವಪರೀಕ್ಷೆ!
— Colors Kannada (@ColorsKannada) November 20, 2024
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa #BBKPromo pic.twitter.com/WCaGtgCPqx
ಬಿಗ್ ಬಾಸ್ನಲ್ಲಿ ಟಾಸ್ಕ್ ನಡೆಯುವಾಗ ಮಾತಿನ ಚಕಮಕಿ ನಡೆಯೋದು ಸಾಮಾನ್ಯ. ಆದರೆ, ಸುರೇಶ್ ಹಾಗೂ ರಜತ್ ಮಧ್ಯೆ ಕಿರಿಕ್ ದೊಡ್ಡದಾಗಿದೆ. ಇದರಿಂದ ಸುರೇಶ್ ಅವರು ಮನೆ ಬಿಟ್ಟು ಹೋಗುವ ನಿರ್ಧಾರಕ್ಕೆ ಬಂದಿದ್ದಾರೆ. ಹಿಂದಿನ ವಾರವಷ್ಟೇ ಸುರೇಶ್ ಅವರು ಕಿಚ್ಚನ ಚಪ್ಪಾಳೆ ಪಡೆದುಕೊಂಡಿದ್ದರು. ಇದರ ಬೆನ್ನಲ್ಲೇ ಈ ನಿರ್ಧಾರ ತೆಗೆದುಕೊಂಡಿರುವುದು ಸಂಚಲನ ಸೃಷ್ಟಿಸಿದೆ.
BBK 11: ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿ: ಒಂದೇ ಬಾತ್ರೂಮ್ನಲ್ಲಿ ಒಟ್ಟಿಗೆ ಸ್ನಾನ ಮಾಡಿದ ಸ್ಪರ್ಧಿಗಳು