ಬಿಗ್ ಬಾಸ್ (Bigg Boss Kannada 11) ಮನೆಯಲ್ಲಿ ಕ್ಯಾಪ್ಟನ್ ಹನುಮಂತ ಹವಾ ಜೋರಾಗಿದೆ. ಬಂದ ಮೊದಲ ವಾರಕ್ಕಿಂತ ಈಗ ಕ್ಯಾಪ್ಟನ್ ಆದ ಬಳಿಕ ಗೇಮ್ ಅನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವ ಇವರು ಯಾವುದರಲ್ಲೂ ರಾಜಿ ಮಾಡದೆ ತಮ್ಮದೇ ನೇರ ನಿಲುವು ತೆಗೆದುಕೊಳ್ಳುತ್ತಿದ್ದಾರೆ. ನಾಮಿನೇಟ್ ಮಾಡಬೇಕು ಎಂದು ಬಂದಾಗ ತನ್ನ ಕುಚಿಕು ಸ್ನೇಹತ ಧನರಾಜ್ ಆಚಾರ್ ಅವರನ್ನೇ ಬಿಟ್ಟಿಲ್ಲ. ಇದೀಗ ಕ್ಯಾಪ್ಟನ್ಸಿ ಟಾಸ್ಕ್ ವಿಚಾರದಲ್ಲಿ ಹನುಮಂತ ಅವರು ಮೂವರಿಗೆ ಶಾಕ್ ನೀಡಿದ್ದಾರೆ.
ಬಿಗ್ ಬಾಸ್ ಮನೆ ಮಂದಿಗೆ ಗ್ರೂಪ್ ಟಾಸ್ಕ್ ನೀಡಲಾಗಿದೆ. ಇದಕ್ಕೆ ಮೂರು ಜನರಿರುವಂತಹ ನಾಲ್ಕು ಗುಂಪುಗಳನ್ನು ರಚಿಸಲಾಗಿದೆ. ಶಿಶಿರ್ ಟೀಂನಲ್ಲಿ ಧನರಾಜ್, ಐಶ್ವರ್ಯಾ ಇದ್ದರೆ, ಗೌತಮಿ ಟೀಂನಲ್ಲಿ ತ್ರಿವಿಕ್ರಮ್ ಅನುಷಾ ಇದ್ದಾರೆ. ಹಾಘೆಯೆ ಚೈತ್ರಾ ಟೀಂನಲ್ಲಿ ಮೋಕ್ಷಿತಾ, ಧರ್ಮ, ಮಂಜಣ್ಣ ಟೀಂನಲ್ಲಿ ಭವ್ಯಾ, ಸುರೇಶ್ ಇದ್ದಾರೆ.
ಕಾಲಕಾಲಕ್ಕೆ ಇವರುಗಳ ಮಧ್ಯೆ ಟಾಸ್ಕ್ ನೀಡಲಾಗುತ್ತದೆ. ಜೊತೆಗೆ ಗೆದ್ದ ತಂಡಕ್ಕೆ ವಿಶೇಷ ಪವರ್ ಕೂಡ ನೀಡಲಾಗುತ್ತದೆ. ಅದರಂತೆ ಬಿಗ್ ಬಾಸ್ ನಿಲ್ಲೇ ನಿಲ್ಲೇ ಕಾವೇರಿ ಎನ್ನುವ ಟಾಸ್ಕ್ ನೀಡಿದ್ದಾರೆ. ಈ ಗೇಮ್ನಲ್ಲಿ ತಂಡದ ಕೆಲ ಸದಸ್ಯರು ಡ್ರಮ್ ನಲ್ಲಿರುವ ನೀರು ಹೊರ ಹರಿಯದಂತೆ ಕಾಪಾಡಿಕೊಳ್ಳಬೇಕು. ಈ ಟಾಸ್ಕ್ನಲ್ಲಿ ಉಗ್ರಂ ಮಂಜು ಅವರು ತಂಡ ಗೆದ್ದು ಬೀಗಿದೆ. ಇವರು ಕ್ಯಾಪ್ಟನ್ಸಿ ಕಾರ್ಡ್ ಪಡೆದುಕೊಂಡಿದ್ದಾರೆ. ಈ ಮೂಲಕ ಮಂಜು, ಭವ್ಯಾ, ಸುರೇಶ್ ಅವರು ನೇರವಾಗಿ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಭಾಗಿಯಾಗಲಿದ್ದಾರೆ.
ಇದಾ ಬಳಿಕ ಕ್ಯಾಪ್ಟನ್ ಹನುಮಂತ ಅವರಿಗೆ ಬಿಗ್ ಬಾಸ್, ಸೋತ ಮೂರು ತಂಡಗಳಿಂದ ಒಬ್ಬೊಬ್ಬರನ್ನು ಕ್ಯಾಪ್ಟನ್ಸಿ ಓಟದಿಂದ ಹೊರಗೆ ಇಡಬೇಕು ಮತ್ತು ಆ ಮೂವರನ್ನು ಯಾಕೆ ಹೊರಗೆ ಇಡುತ್ತಿದ್ದೀರಿ ಎಂಬುದಕ್ಕೆ ಸೂಕ್ತ ಕಾರಣ ನೀಡಬೇಕು ಎಂದು ಹೇಳಿದ್ದಾರೆ. ಇದಕ್ಕೆ ಹನುಮಂತ ಅವರು, ಐಶ್ವರ್ಯಾ, ಗೌತಮಿ ಜಾಧವ್ ಮತ್ತು ಚೈತ್ರಾ ಕುಂದಾಪುರ ಅವರನ್ನು ಕ್ಯಾಪ್ಟನ್ಸಿ ಓಟದಿಂದ ಹೊರಗಿಟ್ಟಿದ್ದಾರೆ. ಈ ಮೂವರು ಕೂಡ ನಿಲ್ಲೇ ನಿಲ್ಲೇ ಕಾವೇರಿ ಟಾಸ್ಕ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲಿಲ್ಲ ಎಂಬ ಕಾರಣ ನೀಡಿದ್ದಾರೆ.
BBK 11: ನೀನು ನನ್ನನ್ನು ಒದ್ದಿದ್ದೀಯಾ, ಆ ಪಾಪ ಸುಮ್ನೆ ಬಿಡಲ್ಲ: ಗೋಲ್ಡ್ ಸುರೇಶ್ಗೆ ಶಾಪ ಹಾಕಿದ ಅನುಷಾ ರೈ