ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಶುರುವಾದ ದಿನದಿಂದ ಪ್ರೇಕ್ಷಕರು ಮನೆಯೊಳಗೆ ಬರೀ ಜಗಳಗಳನ್ನೇ ಕಂಡಿದ್ದಾರೆ. ಪ್ರತಿದಿನ ಒಂದಲ್ಲ ಒಂದು ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು. ಜಗದೀಶ್ ಅವರು ಜಗಳಕ್ಕೆ ನಿಂತರೆ ಇಡೀ ಮನೆಯೇ ರಣರಂಗವಾಗುತ್ತಿತ್ತು. ಆದರೆ, ಕಳೆದ ವಾರ ಇವರು ಮನೆಯಿಂದ ಹೊರಬಿದ್ದರು. ಇದರ ಬೆನ್ನಲ್ಲೇ ದೊಡ್ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಹನುಮಂತ ಆಗಮನವಾಯಿತು. ಇದೀಗ ಮನೆ ನಗೆಯ ಅಲೆಯಲ್ಲಿ ತೇಲುತ್ತಿದೆ.
ಇಷ್ಟು ದಿನ ಜಗಳಗಳಿಂದ ಕೂಡಿದ್ದ ಮನೆಯಲ್ಲಿ ಈಗ ಹಾಡು, ನಗು ಶುರುವಾಗಿದೆ. ಇದಕ್ಕೆ ಕಾರಣ ಹನುಮಂತ. ತನ್ನ ಮುಗ್ಧತೆಯಿಂದಲೇ ಇವರು ಮನೆ ಮಂದಿಯನ್ನು ನಗಿಸುತ್ತಿದ್ದಾರೆ. ಜಾನಪದ ಹಾಡುಗಳಿಂದ ಕೇಳುಗರ ಕಿವಿಯನ್ನು ತಂಪುಗೊಳಿಸುತ್ತಿದ್ದಾರೆ. ಗ್ರಾಮೀಣ ಸೊಗಡಿನ ಭಾಷೆ ಗಮನ ಸೆಳೆಯುತ್ತಿದೆ. ಉತ್ತರ ಕರ್ನಾಟಕದವರಾದ ಅವರು ಫಿಕ್ಟರ್ ಇಲ್ಲದೇ ಆಡುವ ಕೆಲವು ಮಾತುಗಳು ಕೂಡ ನಗು ಉಕ್ಕಿಸುತ್ತಿವೆ.
ಸ್ವಿಮಿಂಗ್ ಪೂಲ್ನಲ್ಲಿಯೇ ಸ್ನಾನ ಮಾಡುತ್ತೇನೆ ಎಂದು ಹನುಮಂತ ನೀರಿಗೆ ಇಳಿಯಲು ಹೊರಡಿದ್ದನ್ನು ಕಂಡು ಮನೆಮಂದಿ ನಕ್ಕು ನಕ್ಕು ಸುಸ್ತಾದರು. ವೆಸ್ಟರ್ನ್ ಟಾಯ್ಲೆಟ್ ಹೇಗೆ ಬಳಸಬೇಕು ಎಂಬುದನ್ನು ಅವರಿಗೆ ಧನರಾಜ್ ಹೇಳಿಕೊಡುವುದು ಕೂಡ ಹಾಸ್ಯಮಯವಾಗಿತ್ತು. ವೆಸ್ಟರ್ನ್ ಟಾಯ್ಲೆಟ್ ಹೇಗೆ ಬಳಸಬೇಕು? ಹೇಗೆ ಫ್ಲಶ್ ಮಾಡಬೇಕು ಎಂಬುದು ಹನುಮಂತನಿಗೆ ತಿಳಿದಿಲ್ಲ. ಹಾಗಾಗಿ ಅವರಿಗೆ ಧನರಾಜ್ ಪಾಠ ಮಾಡಿದ್ದಾರೆ. ಮಧ್ಯರಾತ್ರಿ ಎಲ್ಲರೂ ಮಲಗಿದ ನಂತರ ಈ ಪ್ರಸಂಗ ನಡೆದಿದೆ.
ಧನರಾಜ್ ಅವರು ವೆಸ್ಟರ್ನ್ ಟಾಯ್ಲೆಟ್ನಲ್ಲಿ ಫ್ಲಶ್ ಎಲ್ಲ ಮಾಡೋಕೆ ಗೊತ್ತಾ ಎಂದು ಹನುಮಂತು ಅವರಿಗೆ ಕೇಳುತ್ತಾರೆ. ಅದೆ ಹಿಂಗೆ ಒತ್ತಿದೆ ಎಂದು ಹನುಮಂತು ಅವರು ಸನ್ನೆ ಮಾಡಿ ತೋರಿಸುತ್ತಾರೆ. ಆಗ ಧನರಾಜ್ ಇದು ಫ್ಲಶ್, ನೀರು ಬರೋದು, ಇದರ ಮೇಲೆ ಕೂರೋದು ಎನ್ನುತ್ತಾರೆ ಧನರಾಜ್. ಹನುಮಂತು ಅವರು ಇಲ್ಲಿ ಹೇಗೆ ಕುಳಿತಕೊಳ್ಳೋದು ಎಂದು ಕೇಳುತ್ತಾರೆ. ನಾನು ಹತ್ತಿ ಕೂರ್ತೀನಿ ಎನ್ನುತ್ತಾರೆ. ನಾನು ಕೂಡಾ ಹತ್ತಿ ಕೂತ್ಕೊಳುದು ಅಂತಾರೆ ಧನರಾಜ್. ಡೋರ್ ಲಾಕ್ ಮಾಡಿದ್ರೆ ಆಯ್ತು, ಮತ್ತೆ ನಮ್ಮಿಷ್ಟ ಎಂದು ಧನರಾಜ್ ಹೇಳುತ್ತಾರೆ.
ಈ ಸೀನ್ ನೋಡಿ ಜನರಂತು ಫುಲ್ ನಕ್ಕಿದ್ದಾರೆ. ಮನೆಮಂದಿ ಕೂಡ ಹನುಮಂತ ಆಗಮನದಿಂದ ಖುಷಿಯಾಗಿದ್ದಾರೆ. ಕೇವಲ ನಗಿಸುವುದು ಮಾತ್ರವಲ್ಲದೆ ಹನಮಂತ ಅವರು ಧನರಾಜ್ಗೆ ಹಾಡು ಕೂಡ ಹೇಳಿಕೊಟ್ಟಿದ್ದಾರೆ. ಇವರಿಬ್ಬರ ಜುಗಲ್ ಬಂದಿ ನೋಡುಗರಿಗೆ ಸಖತ್ ಖುಷಿ ನೀಡುತ್ತಿದೆ.
BBK 11: ‘ಮೆಟ್ಟು ತಗೊಂಡು ಹೊಡಿತೀನಿ’: ಸುದೀಪ್ ಮಾತಿಗೆ ಸ್ವಲ್ಪವೂ ಬೆಲೆ ಕೊಡದ ಚೈತ್ರಾ ಕುಂದಾಪುರ