Wednesday, 23rd October 2024

BBK 11: ಬಿಗ್ ಬಾಸ್ ಮನೆಯಲ್ಲಿ ಹನುಮಂತನ ಆಟ: ನಕ್ಕು-ನಕ್ಕು ಸುಸ್ತಾದ ಮನೆಮಂದಿ, ಪ್ರೇಕ್ಷಕರು

ಇಷ್ಟು ದಿನ ಹೆಚ್ಚು ಜಗಳಗಳಿಂದಲೇ ಕೂಡಿದ್ದ ಬಿಗ್ ಬಾಸ್ ಕನ್ನಡ (Bigg Boss Kannada) ಮನೆಯಲ್ಲಿ ಈಗ ನಗುವಿನ ಕಲರವ ಶುರುವಾಗಿದೆ. ಇದಕ್ಕೆ ಕಾರಣ ಹನುಮಂತ. ವೈಲ್ಡ್ ಕಾರ್ಡ್ ಮೂಲಕ ಮನೆಯೊಳಗೆ ಎಂಟ್ರಿ ಕೊಟ್ಟ ಸಿಂಗರ್ ಹನುಮಂತ ತಮ್ಮ ಮಾತುಗಳಿಂದಲೇ ಕೇವಲ ಸ್ಪರ್ಧಿಗಳನ್ನು ಮಾತ್ರವಲ್ಲದೆ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಷ್ಟು ನಗಿಸುತ್ತಿದ್ದಾರೆ.

ಹನುಮಂತ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡಿದಾಗ ಈತ ಈ ಕಾರ್ಯಕ್ರಮಕ್ಕೆ ಸೂಕ್ತ ಅಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಬಂದ ಮೂರೇ ದಿನಕ್ಕೆ ಇವರ ನಡುವಳಿಕೆ ಮಾತುಗಾರಿಗೆ ಎಲ್ಲರೂ ಫಿದಾ ಆಗಿದ್ದಾರೆ. ಇವರ ಒಳ್ಳೆಯತನ, ಮುಗ್ಧತೆಗೆ ಮನಸೋತಿದ್ದಾರೆ. ಇದನ್ನ ನೋಡಿದ ಪ್ರೇಕ್ಷಕರು ಎಂಜಾಯ್ ಮಾಡುತ್ತಿದ್ದಾರೆ.

ಸಿಂಗರ್ ಹನುಮಂತನ ಆಗಮನದಿಂದ ಇಡೀ ಮನೆಯಲ್ಲಿ ನಗುವಿನ ಹೊನಲು ಹರೆಯುತ್ತಿದೆ. ಹಂಸ ಹಾಗೂ ಐಶ್ವರ್ಯ ಅಂತೂ ಹನುಮಂತನ ಜೊತೆಗೆ ಕುಣಿದು ಕುಪ್ಪಳಿಸಿದ್ದಾರೆ. ಮನೆಯ ಇತರ ಸದಸ್ಯರು ನಕ್ಕು ನಲಿಯುತ್ತಿದ್ದಾರೆ. ಧನರಾಜ್ ಜೊತೆಗೆ ಹನಮಂತ ತುಂಬಾನೆ ಕ್ಲೋಸ್ ಆಗಿದ್ದಾರೆ. ಇವರಿಬ್ಬರ ಕಾಂಬಿನೇಷನ್ ಸಖತ್ ಆಗಿ ಕಾಣುತ್ತಿದೆ.

ಬಿಗ್ ಬಾಸ್ ಹನುಮಂತ ಅವರಿಗೆ ಕನ್ಫೆಷನ್​ರೂಂಗೆ ಬರಲು ಹೇಳಿದ್ದರು. ಒಳಗೆ ಹೋದ ಅವರಿಗೆ ಬಿಗ್ ಬಾಸ್​ ಐಸ್​ಕ್ರೀಂ ಬಾಕ್ಸ್​ನ ಕೀ ಕೊಟ್ಟರು. ಅಲ್ಲದೆ ಒಂದು ಷರತ್ತನ್ನು ಕೂಡ ಹಾಕಿದರು. ‘ಮನೆಯವರ ಬಳಿ ಎಂಟರ್​ಟೇನ್​ಮೆಂಟ್ ಮಾಡುವಂತೆ ನೀವು ಕೇಳಬಹುದು. ಅದರಿಂದ ನಿಮಗೆ ಖುಷಿ ಆದರೆ ಐಸ್​​ಕ್ರೀಂ ತೆಗೆದುಕೊಡಬಹುದು’ ಎಂದು ಬಿಗ್ ಬಾಸ್ ಹೇಳಿದರು.

ಅದರಂತೆ ಹನುಮಂತ ಅವರು ಎಲ್ಲರ ಬಳಿಯೂ ಮನರಂಜನೆ ನೀಡುವಂತೆ ಕೋರಿದರು. ಕೆಲವರು ಹನುಮಂತ ಅವರ ಆಸೆಯನ್ನು ಈಡೇರಿಸಿದರೆ, ಇನ್ನೂ ಕೆಲವರು ಅವರ ಮಾತಿಗೆ ಬೆಲೆ ಕೊಡಲೇ ಇಲ್ಲ. ಇದೇ ಕಾರಣ ಕೊಟ್ಟರು ಮನರಂಜನೆ ನೀಡದವರಿಗೆ ಐಸ್​ಕ್ರೀಂ ಕೊಡಲ್ಲ ಎಂದು ಹೇಳುವ ಅವಕಾಶ ಹನುಮಂತ್​ಗೆ ಇತ್ತು. ಆದರೆ, ಹನುಮಂತ ಹಾಗೆ ಮಾಡಲೇ ಇಲ್ಲ. ಎಲ್ಲರಿಗೂ ಐಸ್​ಕ್ರೀಂ ಕೊಟ್ಟು ಜನರ ಮನಗೆದ್ದಿದ್ದಾರೆ.

ಇನ್ನು ಹನುಮಂತ ಮತ್ತು ಧನರಾಜ್ ಬಾಂಡಿಂಗ್ ಚೆನ್ನಾಗಿದೆ. ಇಬ್ಬರೂ ಮಜಾ ಮಾಡುತ್ತಿದ್ದಾರೆ. ಆತ್ಮೀಯ ಅನ್ನೋ ಹಾಗೆ ಓಪನ್ ಅಪ್‌ ಆಗಿದ್ದಾರೆ. ಧನರಾಜ್ ಇವರಿಗೆ ಅನೇಕ ಸಲಹೆಗಳನ್ನು ನೀಡುತ್ತಿದ್ದಾರೆ. ತನ್ನ ಮುಗ್ಧತೆಯಿಂದಲೇ ಇವರು ಮನೆ ಮಂದಿಯನ್ನು ನಗಿಸುತ್ತಿದ್ದಾರೆ. ಜಾನಪದ ಹಾಡುಗಳಿಂದ ಕೇಳುಗರ ಕಿವಿಯನ್ನು ತಂಪುಗೊಳಿಸುತ್ತಿದ್ದಾರೆ. ಗ್ರಾಮೀಣ ಸೊಗಡಿನ ಭಾಷೆ ಗಮನ ಸೆಳೆಯುತ್ತಿದೆ. ಉತ್ತರ ಕರ್ನಾಟಕದವರಾದ ಅವರು ಫಿಕ್ಟರ್ ಇಲ್ಲದೇ ಆಡುವ ಕೆಲವು ಮಾತುಗಳು ಕೂಡ ನಗು ಉಕ್ಕಿಸುತ್ತಿವೆ.

BBK 11: ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿ: ಜೋಡಿ ಕ್ಯಾಪ್ಟನ್ ಆಗಿ ಆಯ್ಕೆಯಾದ ತ್ರಿವಿಕ್ರಮ್-ಐಶ್ವರ್ಯ