ಬೆಂಗಳೂರು: 1969ರಲ್ಲಿ ಬಿಡುಗಡೆಗೊಂಡ ‘ಮಿಸ್ ಜೀನ್ ಬ್ರಾಡಿ ದಿ ಪ್ರೈಮ್’ ಸಿನಿಮಾಕ್ಕಾಗಿ ಆಸ್ಕರ್ ಪ್ರಶಸ್ತಿ ಗೆದ್ದ ಮತ್ತು ‘ಹ್ಯಾರಿ ಪಾಟರ್’ ಚಿತ್ರಗಳಲ್ಲಿ ಪ್ರೊಫೆಸರ್ ಮಿನರ್ವಾ ಮೆಕ್ಗೊನಾಗಲ್ ಪಾತ್ರ ವಹಿಸುವ ಮೂಲಕ ಹೊಸ ಅಭಿಮಾನಿಗಳನ್ನು ಗಳಿಸಿದ್ದ ನಟಿ ಮ್ಯಾಗಿ ಸ್ಮಿತ್ (Maggie Smith) ಶುಕ್ರವಾರ ನಿಧನ ಹೊಂದಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.
ಸ್ಮಿತ್ ಅವರ ಪುತ್ರರಾದ ಕ್ರಿಸ್ ಲಾರ್ಕಿನ್ ಮತ್ತು ಟೋಬಿ ಸ್ಟೀಫನ್ಸ್ ಅವರು ಶುಕ್ರವಾರ ಮುಂಜಾನೆ ಲಂಡನ್ ಆಸ್ಪತ್ರೆಯಲ್ಲಿ ಸ್ಮಿತ್ ನಿಧನ ಹೊಂದಿದ್ದಾರೆ ತಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅವರು ಇಬ್ಬರು ಪುತ್ರರು ಮತ್ತು ಐದು ಪ್ರೀತಿಯ ಮೊಮ್ಮಕ್ಕಳನ್ನು ಅಗಲಿದ್ದಾರೆ. ಅವರು ತಮ್ಮ ತಾಯಿ ಮತ್ತು ಅಜ್ಜಿಯನ್ನು ಕಳೆದುಕೊಂಡು ದುಃಖದಲ್ಲಿದ್ದಾರೆ ಎಂದು ಹೇಳಿಕೆ ಪ್ರಕಟಿಸಿದ್ದಾರೆ.
ವನೆಸ್ಸಾ ರೆಡ್ಗ್ರೇವ್ ಮತ್ತು ಜುಡಿ ಡೆಂಚ್ ಅವರಂತೆಯೇ ಮ್ಯಾಗಿ ಸ್ಮಿತ್ ಅವರು ಒಂದು ಪೀಳಿಗೆಯ ಪ್ರಮುಖ ಬ್ರಿಟಿಷ್ ನಟಿ ಎಂದು ಖ್ಯಾತಿ ಪಡೆದುಕೊಂಡಿದ್ದರು.
ಇದನ್ನೂ ಓದಿ: Ronny Movie: ಕಿರಣ್ ರಾಜ್ ಅಭಿನಯದ “ರಾನಿ” ಚಿತ್ರ 3ನೇ ವಾರವೂ ಯಶಸ್ವಿ ಪ್ರದರ್ಶನ
ಜೀನ್ ಬ್ರಾಡಿ ಪಾತರಕ್ಕಾಗಿ ಸ್ಮಿತ್ ಅತ್ಯುತ್ತಮ ನಟಿ ಅಕಾಡೆಮಿ ಪ್ರಶಸ್ತಿ ಮತ್ತು 1969ರಲ್ಲಿ ಬ್ರಿಟಿಷ್ ಅಕಾಡೆಮಿ (ಬಿಎಎಫ್‌ಟಿಎ) ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು. ಸ್ಮಿತ್ 1978ರಲ್ಲಿ “ಕ್ಯಾಲಿಫೋರ್ನಿಯಾ ಸೂಟ್” ಗಾಗಿ ಪೋಷಕ ನಟಿ ಆಸ್ಕರ್ ಪ್ರಶಸ್ತಿ ಗೆದ್ದಿದ್ದರು.