Sunday, 15th December 2024

ಕಲ್ಯಾಣ್ ಜ್ಯುವೆಲರ್ಸ್ ಬ್ರ್ಯಾಂಡ್ ಅಂಬಾಸಿಡರ್ ಶಿವರಾಜ್ ಕುಮಾರ್’ರಿಂದ ಶೋ ರೂಂ ಉದ್ಘಾಟನೆ

ಹೊಸದಾಗಿ ತೆರೆಯಲಾದ ಶೋರೂಮ್ ಐಷಾರಾಮಿ ಶಾಪಿಂಗ್ ಅನುಭವ ಒದಗಿಸುವ ಗುರಿ ಹೊಂದಿದೆ

ಬೆಂಗಳೂರು: ಭಾರತದ ಅತ್ಯಂತ ವಿಶ್ವಾಸಾರ್ಹ ಮತ್ತು ಪ್ರಮುಖ ಆಭರಣ ಬ್ರ್ಯಾಂಡ್ಗಳಲ್ಲಿ ಒಂದಾದ ಕಲ್ಯಾಣ್ ಜ್ಯುವೆಲರ್ಸ್, ಇಂದು ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ತನ್ನ ಹೊಸ ಶೋರೂಮ್ ಪ್ರಾರಂಭಿಸಿದೆ.

ಶೋರೂಮ್ ಅನ್ನು ನಾಯಕ ನಟ ಹಾಗೂ ಕಲ್ಯಾಣ್ ಜ್ಯುವೆಲರ್ಸ್ ಪ್ರಚಾರ ರಾಯ ಭಾರಿ ಶಿವರಾಜ್ ಕುಮಾರ್ ಉದ್ಘಾಟಿಸಿದರು. ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕಶ್ರೀ ಟಿ ಎಸ್ ಕಲ್ಯಾಣರಾಮನ್ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ರಾಜೇಶ್ ಕಲ್ಯಾಣರಾಮನ್ ಮತ್ತು ರಮೇಶ್ ಕಲ್ಯಾಣರಾಮನ್ ಜೊತೆಗಿದ್ದರು. ಬೆಂಗಳೂರು ನಗರದಲ್ಲಿ ಇದು ಕಂಪನಿಯ 8 ನೇ ಮಳಿಗೆಯಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಕಲ್ಯಾಣ್ ಜ್ಯುವೆಲರ್ಸ್ನ ಪ್ರಚಾರ ರಾಯಭಾರಿ, ಶಿವರಾಜ್ ಕುಮಾರ್, “ಕರ್ನಾಟಕದಲ್ಲಿ ಅವರ ಮೊದಲ ಶೋರೂಮ್ನಿಂದ ನಾನು ಕಲ್ಯಾಣ್ ಜ್ಯುವೆಲರ್ಸ್ ಕುಟುಂಬದ ಭಾಗವಾಗಿದ್ದೇನೆ ಮತ್ತು ಈಗ ಅವರು ರಾಜ್ಯದಲ್ಲಿ 17 ಮಳಿಗೆಗಳನ್ನು ಹೊಂದಿದ್ದು, ಅವುಗಳಲ್ಲಿ 8 ಬೆಂಗಳೂರಿನಲ್ಲಿವೆ.

ಈ ಬ್ರ್ಯಾಂಡ್ನೊಂದಿಗಿನ ನನ್ನ ಒಡನಾಟದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ, ಮತ್ತು ಕಲ್ಯಾಣ್ ಜ್ಯುವೆಲರ್ಸ್ ತನ್ನ ರೆಕ್ಕೆಗಳನ್ನು ಹಲವು ಪ್ರದೇಶಗಳಿಗೆ ಹರಡಲು ಸಾಧ್ಯವಾ ಯಿತು ಎಂದು ಹೇಳಲು ನಾನು ಸಂತೋಷ ಪಡುತ್ತೇನೆ. ಏಕೆಂದರೆ ನೀವು ಅವರನ್ನು ಮುಕ್ತವಾಗಿ ಸ್ವೀಕರಿಸಿದ್ದೀರಿ. ಈ ಬ್ರಾಂಡ್ನ ಪೋಷಕರು ಈ ಹೊಸ ಕೊಡುಗೆಯನ್ನು ಮೆಚ್ಚುತ್ತಾರೆ ಎಂದು ನನಗೆ ವಿಶ್ವಾಸವಿದೆ” ಎಂದು ಹೇಳಿದರು.

ಹೊಸ ಶೋರೂಂ ಕುರಿತು ಮಾತನಾಡಿದ ಕಲ್ಯಾಣ್ ಜ್ಯುವೆಲರ್ಸ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಟಿ ಎಸ್ ಕಲ್ಯಾಣ ರಾಮನ್, “ಒಂದು ಕಂಪನಿಯಾಗಿ ನಾವು ದೊಡ್ಡ ಮೈಲಿಗಲ್ಲುಗಳನ್ನು ಸಾಧಿಸಿದ್ದೇವೆ ಮತ್ತು ಗ್ರಾಹಕರ ಶಾಪಿಂಗ್ ಅನುಭವವನ್ನು ಹೆಚ್ಚಿಸಲು ಸಮಗ್ರ ಪರಿಸರ ವ್ಯವಸ್ಥೆಯನ್ನು ರಚಿಸುವತ್ತ ಪ್ರಮುಖ ದಾಪುಗಾಲು ಇಟ್ಟಿದ್ದೇವೆ. ಬೆಂಗಳೂರಿನಲ್ಲಿ ಮತ್ತೊಂದು ಶೋರೂಮ್ ಅನ್ನು ಪ್ರಾರಂಭಿ ಸಲು ನಾವು ಸಂತೋಷಪಡುತ್ತೇವೆ. ಈ ಸಂದರ್ಭದಲ್ಲಿ, ನಮ್ಮ ಬೆಳವಣಿಗೆಯ ಪಯಣದ ಭಾಗವಾಗಿದ್ದಕ್ಕಾಗಿ ನಮ್ಮ ಪ್ರಚಾರ ರಾಯಭಾರಿ ಶಿವರಾಜ್ ಕುಮಾರ್ ಅವರಿಗೆ ನಾವು ಕೃತಜ್ಞತೆಯನ್ನು ಸಲ್ಲಿಸಲು ಬಯಸು ತ್ತೇವೆ.

ಮುಂದಿನ ದಿನಗಳಲ್ಲಿ ಕಂಪನಿಯ ಪ್ರಮುಖ ಮೌಲ್ಯಗಳಾದ ನಂಬಿಕೆ ಮತ್ತು ಪಾರದರ್ಶಕತೆಗೆ ನಿಷ್ಠರಾಗಿ ನಮ್ಮ ಗ್ರಾಹಕರಿಗೆ ಉತ್ತಮ ವಾದದ್ದನ್ನು ನೀಡುವ ನಿಟ್ಟಿನಲ್ಲಿ ಕೆಲಸ ಮಾಡುವುದನ್ನು ಮುಂದುವರಿಸುವು ದಾಗಿ ನಾವು ಭರವಸೆ ನೀಡುತ್ತೇವೆ” ಎಂದು ವಿವರಿಸಿದರು.

ಬೆಂಗಳೂರಿನ ಕಮ್ಮನಹಳ್ಳಿಯ ಹೊಸ ಶೋರೂಮ್ ಜಾಗತಿಕವಾಗಿ ಕಂಪನಿಯ 153ನೇ ಹಾಗೂ ಭಾರತದಲ್ಲಿ 123ನೇ ಶೋರೂಂ ಆಗಿರುತ್ತದೆ.

ಭವ್ಯ ಉದ್ಘಾಟನೆ ಸಂಭ್ರಮದ ಹಿನ್ನೆಲೆಯಲ್ಲಿ ಕಲ್ಯಾಣ್ ಜ್ಯುವೆಲರ್ಸ್ ವಜ್ರ, ಕತ್ತರಿಸದ ಮತ್ತು ಅಮೂಲ್ಯವಾದ ಹರಳು ಆಭರಣಗಳ ಮೇಲೆ ಶೇಕಡ 20 ರವರೆಗಿನ ರಿಯಾಯಿತಿಯ ವ್ಯಾಪಕ- ಜನಪ್ರಿಯ ಕೊಡುಗೆಯನ್ನು ಮರು ಪರಿಚಯಿಸಿದೆ. ಚಿನ್ನಾಭರಣಗಳನ್ನು ಖರೀದಿಸುವ ಗ್ರಾಹಕರಿಗೆ – ಅವರು 1 ಗ್ರಾಂ ಚಿನ್ನವನ್ನು ಖರೀದಿಸಿ ಮತ್ತು 1 ಗ್ರಾಂ ಬೆಳ್ಳಿಯ ಉಚಿತ ಕೊಡುಗೆಯಿಂದ ಪ್ರಯೋಜನ ಪಡೆಯಬಹುದಾದ ಆಫರ್ ಕೂಡಾ ಇದೆ. ಈ ರಿಯಾಯಿತಿಗಳನ್ನು ತಿಂಗಳ ಅಂತ್ಯದವರೆಗೆ ಗ್ರಾಹಕರು ಪಡೆಯಬಹುದು.

ಕಲ್ಯಾಣ್ ಜ್ಯುವೆಲರ್ಸ್ನಲ್ಲಿ ಚಿಲ್ಲರೆಯಾಗಿ ಮಾರಾಟವಾಗುವ ಎಲ್ಲ ಆಭರಣಗಳು ಬಿಐಎಸ್ ಹಾಲ್ಮಾರ್ಕ್ ಹೊಂದಿರುತ್ತವೆ ಮತ್ತು ಬಹು ಶುದ್ಧತೆಯ ಪರೀಕ್ಷೆಗಳ ಮೂಲಕ ಹಾದು ಹೋಗುತ್ತವೆ. ಕಲ್ಯಾಣ್ ಜ್ಯುವೆಲರ್ಸ್ 4- ಹಂತದ ಅಶ್ಯೂರೆನ್ಸ್ ಪ್ರಮಾಣಪತ್ರವನ್ನು ಸಹ ಪೋಷಕರು ಸ್ವೀಕರಿಸುತ್ತಾರೆ, ಇದು ಶುದ್ಧತೆ, ಆಭರಣಗಳ ಉಚಿತ ಜೀವಿತಾವಧಿ ನಿರ್ವಹಣೆ, ವಿವರವಾದ ಉತ್ಪನ್ನ ಮಾಹಿತಿ ಮತ್ತು ಪಾರದರ್ಶಕ ವಿನಿಮಯ ಮತ್ತು ಮರು ಖರೀದಿ ನೀತಿಗಳನ್ನು ಖಾತರಿಪಡಿಸುತ್ತದೆ. ಈ ಪ್ರಮಾಣೀಕರಣವು ತನ್ನ ನಿಷ್ಠಾವಂತರಿಗೆ ಅತ್ಯುತ್ತಮವಾದದ್ದನ್ನು ನೀಡುವ ಬ್ರ್ಯಾಂಡ್ನ ಬದ್ಧತೆಯ ಭಾಗವಾಗಿದೆ.

ಶೋರೂಮ್ ಕಲ್ಯಾಣ್ನ ಜನಪ್ರಿಯ ಸ್ವಗೃಹದ ಬ್ರಾಂಡ್ಗಳಾದ ತೇಜಸ್ವಿ (ಪೋಲ್ಕಿ ಆಭರಣಗಳು), ಮುದ್ರಾ (ಕರಕುಶಲ ಪುರಾತನ ಆಭರಣಗಳು), ನಿಮಾಹ್ (ಟೆಂಪಲ್ ಜ್ಯುವೆಲ್ಲರಿ) ಮತ್ತು ಗ್ಲೋ (ನೃತ್ಯ ವಜ್ರಗಳು) ಗಳ ಸಂಗ್ರಹವನ್ನು ಹೊಂದಿದೆ. ಶೋರೂಮ್ನಲ್ಲಿರುವ ಇತರ ವಿಭಾಗಗಳಲ್ಲಿ ಜಿಯಾ (ಸಾಲಿಟೇರ್ ತರಹದ ವಜ್ರದ ಆಭರಣಗಳು), ಅನೋಖಿ (ಕತ್ತರಿಸದ ವಜ್ರಗಳು), ಅಪೂರ್ವ (ವಿಶೇಷ ಸಂದರ್ಭಗಳಲ್ಲಿ ವಜ್ರಗಳು), ಅಂತರಾ (ವಿವಾಹದ ವಜ್ರಗಳು), ಹೇರಾ (ದೈನಂದಿನ ಉಡುಗೆ ವಜ್ರಗಳು) ಮತ್ತು ರಂಗ್ (ಅಮೂಲ್ಯ ಕಲ್ಲುಗಳ ಆಭರಣಗಳು) ಸೇರಿವೆ.

ಕಲ್ಯಾಣ್ ಜ್ಯುವೆಲರ್ಸ್ ಬ್ರ್ಯಾಂಡ್ನ ಉದ್ಯೋಗಿಗಳು ಮತ್ತು ಗ್ರಾಹಕರಿಗೆ ಸುರಕ್ಷಿತ ಚಿಲ್ಲರೆ ವಾತಾವರಣವನ್ನು ಖಚಿತಪಡಿಸಿಕೊಳ್ಳಲು ವ್ಯಾಪಕವಾದ ಕ್ರಮಗಳನ್ನು ಹೊರ ತಂದಿದೆ. ಕಲ್ಯಾಣ್ ಜ್ಯುವೆಲರ್ಸ್ನ ‘ವಿ ಕೇರ್’ ಕೋವಿಡ್- 19 ಮಾರ್ಗಸೂಚಿಗಳ ಭಾಗವಾಗಿ, ಕಂಪನಿ ಯು ತನ್ನ ಎಲ್ಲ ಶೋರೂಂಗಳಲ್ಲಿ ಅತ್ಯುನ್ನತ ಮಟ್ಟದ ಸುರಕ್ಷತೆ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಸ್ಥಾಪಿಸಿದೆ. ಸುರಕ್ಷತಾ ಪ್ರೋಟೋ ಕಾಲ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ಕಂಪನಿಯು ‘ಸುರಕ್ಷತಾ ಮಾಪನ ಅಧಿಕಾರಿ’ ಯನ್ನು ಸಹ ನೇಮಿಸಿದೆ.

ಬ್ರ್ಯಾಂಡ್, ಅದರ ಸಂಗ್ರಹಣೆಗಳು ಮತ್ತು ಕೊಡುಗೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, https://www.kalyanjewellers.net/ ಗೆ ಭೇಟಿ ನೀಡಿ

* ಷರತ್ತು ಮತ್ತು ನಿಬಂಧನೆಗಳು ಅನ್ವಯ

ಕಲ್ಯಾಣ್ ಜ್ಯುವೆಲರ್ಸ್ ಬಗ್ಗೆ: ಕೇರಳ ರಾಜ್ಯದ ತ್ರಿಶೂರ್ನಲ್ಲಿ ಪ್ರಧಾನ ಕಛೇರಿ ಹೊಂದಿರುವ ಕಲ್ಯಾಣ್ ಜ್ಯುವೆಲ್ಲರ್ಸ್ ಮಧ್ಯಪ್ರಾಚ್ಯ ದಲ್ಲಿ ಅಸ್ತಿತ್ವವನ್ನು ಹೊಂದಿರುವ ಭಾರತದ ಅತಿದೊಡ್ಡ ಆಭರಣ ಚಿಲ್ಲರೆ ವ್ಯಾಪಾರಿಗಳಲ್ಲಿ ಒಂದಾಗಿದೆ. ಕಂಪನಿಯು ಸುಮಾರು ಮೂರು ದಶಕಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ದೀರ್ಘಕಾಲದ ಅಸ್ತಿತ್ವವನ್ನು ಹೊಂದಿದೆ ಮತ್ತು ಗುಣಮಟ್ಟ, ಪಾರದರ್ಶಕತೆ, ಬೆಲೆ ಮತ್ತು ನಾವೀನ್ಯತೆಗಳಲ್ಲಿ ಉದ್ಯಮದ ಮಾನದಂಡಗಳನ್ನು ಹೊಂದಿಸಿದೆ.

ಕಲ್ಯಾಣ್ ಗ್ರಾಹಕರ ವಿಭಿನ್ನ ಅಗತ್ಯಗಳನ್ನು ಪೂರೈಸುವ ಚಿನ್ನ, ವಜ್ರಗಳು ಮತ್ತು ಅಮೂಲ್ಯ ಕಲ್ಲುಗಳಲ್ಲಿ ಸಾಂಪ್ರದಾಯಿಕ ಮತ್ತು ಸಮಕಾಲೀನ ಆಭರಣ ವಿನ್ಯಾಸಗಳನ್ನು ಒದಗಿಸುತ್ತದೆ. ಕಲ್ಯಾಣ್ ಜ್ಯುವೆಲರ್ಸ್ ಭಾರತ ಮತ್ತು ಮಧ್ಯಪ್ರಾಚ್ಯದಾದ್ಯಂತ 152 ಶೋ ರೂಮ್ಗಳನ್ನು ಹೊಂದಿದೆ.