Sunday, 15th December 2024

37ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಸಮಂತಾ

ಹೈದರಾಬಾದ್: ಬಹುಭಾಷಾ ನಟಿ ಸಮಂತಾ ಅವರಿಂದು 37ನೇ ಹುಟ್ಟುಹಬ್ಬದ ಸಂಭ್ರಮ ಆಚರಿಸಿದರು.

ಅನಾರೋಗ್ಯದಿಂದ ಸಿನಿಮಾರಂಗದಿಂದ ಬ್ರೇಕ್‌ ಪಡೆದಿರುವ ಸಮಂತಾ, ಪ್ರವಾಸ ಮಾಡುತ್ತಾ ಜಾಲಿ ಮೂಡ್‌ ನಲ್ಲಿದ್ದಾರೆ. ಹುಟ್ಟುಹಬ್ಬಕ್ಕೆ ಅವರು ಕಂಬ್ಯಾಕ್‌ ಮಾಡುತ್ತಿರುವ ಸಿನಿಮಾದ ಟೈಟಲ್‌ ಪೋಸ್ಟರ್‌ ರಿಲೀಸ್‌ ಮಾಡಿದ್ದಾರೆ.

ಇತ್ತೀಚೆಗೆ ತಮ್ಮದೇ ಆದ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದ್ದು ಈ ಬಗ್ಗೆ ಪೋಸ್ಟ್‌ ಹಂಚಿಕೊಂಡಿದ್ದರು. ಇದೀಗ ಸಮಂತಾ ತಮ್ಮ ಹೊಸ ಸಿನಿಮಾವನ್ನು ಅನೌನ್ಸ್‌ ಮಾಡಿದ್ದಾರೆ. ಸಿನಿಮಾಕ್ಕೆ ʼಬಂಗಾರಂʼ ಎನ್ನುವ ಟೈಟಲ್‌ ಇಡಲಾ ಗಿದ್ದು, ತಾಳಿ ಹಾಕಿಕೊಂಡು ಕೈಯಲ್ಲಿ ಗನ್‌ ಹಿಡಿದು ರಕ್ತಸಿಕ್ತ ಅವತಾರದಲ್ಲಿ ಸಮಂತಾ ಕಾಣಿಸಿಕೊಂಡಿದ್ದಾರೆ.

ಮೇಲ್ನೋಟಕ್ಕೆ ಇದೊಂದು ಮಹಿಳಾ ಪ್ರಧಾನ ಸಿನಿಮಾದಂತೆ ಕಾಣುತ್ತಿದ್ದು, ಶೀಘ್ರದಲ್ಲಿ ಸಿನಿಮಾ ಸಟ್ಟೇರಲಿದೆ. ಈ ಸಿನಿಮಾವನ್ನು ಸಮಂತಾ ಅವರ ತ್ರಲಾಲಾ ಮೂವಿಂಗ್‌ ಪಿಕ್ಚರ್ಸ್‌ ಸಂಸ್ಥೆಯೇ ನಿರ್ಮಾಣ ಮಾಡಲಿದೆ.

ಸದ್ಯ ರಾಜ್ & ಡಿಕೆ ಮತ್ತು ಸೀತಾ ಆರ್ ಮೆನನ್ ಅವರ ʼಸಿಟಾಡೆಲ್‌ ಇಂಡಿಯಾ: ಹನಿ ಬನ್ನಿʼ ವೆಬ್‌ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.