ಮುಂಬಯಿ: ಹಿಂದಿ ಬಿಗ್ ಬಾಸ್ ಓಟಿಟಿ ಸೀಸನ್ -3 ಆರಂಭಕ್ಕೆ ಕೆಲ ದಿನಗಳಷ್ಟೇ ಬಾಕಿಯಿದೆ. ಕಾರ್ಯಕ್ರಮದ ಪ್ರೋಮೊ ಗಮನ ಸೆಳೆದಿದೆ.
ಹಿಂದಿ ಬಿಗ್ ಬಾಸ್ ಎರಡು ಸೀಸನ್ ಯಶಸ್ಸಾದ ಬಳಿಕ ಇದೀಗ ಮೂರನೇ ಸೀಸನ್ ಆರಂಭಗೊಳ್ಳಲು ದಿನಗಣನೆ ಶುರುವಾಗಿದೆ. ಈ ಬಾರಿ ಸಲ್ಮಾನ್ ಖಾನ್ ಬದಲಿಗೆ ಹೊಸ ನಿರೂಪಕರು ಕಾರ್ಯಕ್ರಮವನ್ನು ನಡೆಸಿಕೊಳ್ಳಲಿದ್ದಾರೆ.
ಬಾಲಿವುಡ್ ನಟ ಅನಿಲ್ ಕಪೂರ್ ದೊಡ್ಡನೆಯ ಓಟಿಟಿ ಸೀಸನ್ ನ್ನು ಈ ಬಾರಿ ನಡೆಸಿಕೊಳ್ಳಲಿದ್ದಾರೆ.
ಸಂಭಾವ್ಯ ಸ್ಪರ್ಧಿಗಳ ಲಿಸ್ಟ್..
ರೋಹಿ ಕುಮಾರ್: RCR ಎನ್ನುವ ಸ್ಟೇಜ್ ನೇಮ್ ನಿಂದಲೇ ಫೇಮ್ ಆಗಿರುವ ರೋಹಿ ಕುಮಾರ್ ಚೌಧರಿ ಬಿಗ್ ಬಾಸ್ ಓಟಿಟಿಯಲ್ಲಿ ಭಾಗಿಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಅವರು ʼದಿಲ್ ಹೈ ಹಿಂದೂಸ್ತಾನಿʼ ಎನ್ನುವ ಶೋನಲ್ಲೂ ಮಿಂಚಿದ್ದರು.
ಚೇಷ್ಟಾ ಭಗತ್ , ನಿಖಿಲ್ ಮೆಹ್ತಾ: ಜೋಡಿಗಳಾಗಿ ಟೆಂಪ್ಟೇಶನ್ ಐಲ್ಯಾಂಡ್(ಇಂಡಿಯಾ) ಶೋಗೆ ತೆರಳಿದ್ದ ಚೇಷ್ಟಾ ಹಾಗೂ ನಿಖಿಲ್ ಅವರ ಸಂಬಂಧದಲ್ಲಿ ಬಿರುಕು ಕಂಡು ಕಾರ್ಯಕ್ರಮದಿಂದ ಹೊರನಡೆದಿದ್ದರು.
ಖುಷಿ ಪಂಜಾಬನ್, ವಿವೇಕ್ ಚೌಧರಿ: ಇನ್ನು ಯೂಟ್ಯೂಬ್ ನಲ್ಲಿ ವ್ಲಾಗರ್ ಆಗಿ ಜನಪ್ರಿಯತೆಯನ್ನು ಗಳಿಸಿರುವ ಖುಷಿ ಪಂಜಾಬನ್ ಹಾಗೂ ವಿವೇಕ್ ಚೌಧರಿ ಕೂಡ ಬಿಗ್ ಬಾಸ್ ಓಟಿಟಿಯ ಭಾಗವಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಯೂಟ್ಯೂಬರ್ ದಂಪತಿ ಜತಿನ್ ತಲ್ವಾರ್-ನಿಧಿ ತಲ್ವಾರ್, ಪಂಜಾಬಿ ಗಾಯಕ ನವಜೀತ್ ಸಿಂಗ್, ಗಾಯಕ ಅದ್ನಾನ್ ಶೇಖ್ ಬ್ಯಾಂಕಾಕ್‌ನ ಉದ್ಯಮಿ ಅನುಷ್ಕಾ ಪುರೋಹಿತ್, ಉದ್ಯಮಿ ವಿಕ್ಕಿ ಜೈನ್, ನಟಿ ದಲ್ಜೀತ್ ಕೌರ್, ನಟಿ ಶಫಕ್ ನಾಜ್ ಮತ್ತು ದೆಹಲಿಯ ವೈರಲ್ ವಡಾ ಪಾವ್ ಹುಡುಗಿ ಚಂದ್ರಿಕಾ ಅವರ ಹೆಸರು ಕೂಡ ಬಿಗ್ ಬಾಸ್ ಓಟಿಟಿ ಮನೆಯಲ್ಲಿನ ಸ್ಪರ್ಧಿಗಳಲ್ಲಿ ಕೇಳಿ ಬರುತ್ತಿದೆ.
ಜುಲೈ ತಿಂಗಳಿನಿಂದ ಬಿಗ್ ಬಾಸ್ ಓಟಿಟಿ -3 ಆರಂಭಗೊಳ್ಳಲಿದೆ.
ಬಿಗ್ ಬಾಸ್ ಓಟಿಟಿ ಸೀಸನ್ -1 ರಲ್ಲಿ ದಿವ್ಯಾ ಅಗರ್ವಾಲ್ ವಿಜೇತರಾಗಿದ್ದರು. ನಿಶಾಂತ್ ಭಟ್ ಎರಡನೇ ಸ್ಥಾನ ಪಡೆದಿದ್ದರು. ಎರಡನೇ ಸೀಸನ್ ನಲ್ಲಿ ಯೂಟ್ಯೂಬರ್ ಎಲ್ವಿಶ್ ಯಾದವ್ ವಿಜೇತರಾಗಿದ್ದರು. ಅಭಿಷೇಕ್ ಮಲ್ಹಾನ್ ಮೊದಲ ರನ್ನರ್ ಅಪ್ ಪ್ರಶಸ್ತಿ ಪಡೆದಿದ್ದರು.