Friday, 22nd November 2024

ಸಾರ್ವಜನಿಕರು, ಪೊಲೀಸ್ ಸಿಬ್ಬಂದಿಗಳಿಗೆ ಧನ್ಯವಾದ ತಿಳಿಸಿದ ಸಚಿವ ಜ್ಞಾನೇಂದ್ರ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನ, ಯಾತ್ರೆ ಮತ್ತು ಅಂತ್ಯಕ್ರಿಯೆ ವೇಳೆ ಶಾಂತಿ ಕಾಪಾಡಿದ ಸಾರ್ವಜನಿಕರು ಮತ್ತು ಶಾಂತಿ ಕಾಪಾಡಲು ಸಹಕರಿಸಿದ ಪೊಲೀಸ್ ಸಿಬ್ಬಂದಿಗಳಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಭಾನುವಾರ ಧನ್ಯವಾದ ತಿಳಿಸಿದ್ದಾರೆ.

ನೆಚ್ಚಿನ ನಟರೂ, ಕನ್ನಡ ಚಿತ್ರರಂಗದ ಮುಕುಟ ಮಣಿಯೂ ಆಗಿದ್ದ ಪುನೀತ್ ರಾಜ ಕುಮಾರ್ ಅವರ ಅಂತಿಮ ದರ್ಶನ ಹಾಗೂ ವಿಧಿ ವಿಧಾನಗಳು, ಅತ್ಯಂತ ಶಾಂತಿಯುತ ವಾಗಿ, ಸಕಲ ಸರಕಾರಿ ಗೌರವಳೊಂದಿಗೆ ನೆರವೇರಿದೆ.

ನೆಚ್ಚಿನ ನಟನ ಅಕಾಲಿಕ ನಿಧನದ ದುಃಖದ ಸಂದರ್ಭದಲ್ಲಿ, ಸಾರ್ವಜನಿಕರು, ಅತ್ಯಂತ, ಶಾಂತಿ ಹಾಗೂ ತಾಳ್ಮೆಯನ್ನು, ಪ್ರದರ್ಶಿಸಿ ಅಗಲಿದ ಚೈತನ್ಯಕ್ಕೆ ಲಕ್ಷಾಂತರ ಜನರು ಗೌರವ ಸಲ್ಲಿಸಿದ್ದಾರೆ. ಅತ್ಯಂತ ಶಿಸ್ತು ಬದ್ಧವಾಗಿ, ಎಷ್ಟೇ ಕಷ್ಟ ಗಳಿದ್ದರೂ, ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿ, ನಿಭಾ ಯಿಸಿದ, ನಮ್ಮ ಪೊಲೀಸ್, ಬಿಬಿಎಂಪಿ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಹಾಗೂ ಇತರರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಬರೆದಿದ್ದಾರೆ.

ಅಂತ್ಯಸಂಸ್ಕಾರದ ವೇಳೆ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ, ಭದ್ರತೆಗಾಗಿ ಬೆಂಗಳೂರು ನಗರದಲ್ಲಿ 20 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಜೊತೆಗೆ 1,500 ಪೊಲೀಸರನ್ನು ಬೇರೆ ಜಿಲ್ಲೆಗಳಿಂದ ಕರೆಸಿ ನಿಯೋಜಿಸಲಾಗಿತ್ತು ಎಂದು ಗೃಹ ಸಚಿವರು ತಿಳಿಸಿದ್ದಾರೆ.

ಶಾಂತಿಯುತ ಅಂತಿಮ ಯಾತ್ರೆಗೆ ಸಹಕಾರ ನೀಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿ ಎಲ್ಲರಿಗೂ ಶಿವರಾಜ್ ಕುಮಾರ್ ಅವರು ಧನ್ಯವಾದ ಸಲ್ಲಿಸಿದ್ದಾರೆ.