ಬೆಂಗಳೂರು: ವಿಚಾರಣೆ ವೇಳೆ ಐಎಸ್‍ಡಿ ಕೇಳಿದ 40 ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ ಎಂದು ತಿಳಿಸಿದ ಕಿರುತೆರೆ ನಟಿ ಗೀತಾ ಭಟ್ ಅವರು, ನಾನು ಡ್ರಗ್ ಪೆಡ್ಲರ್ ಅಲ್ಲ ಎಂದು ಹೇಳಿದರು.
ಮಾಧ್ಯಮವನ್ನುದ್ದೇಶಿಸಿ ಮಾತನಾಡಿ. ನನಗೆ ಬಂದ ಫೋನ್ ಕರೆಗಳ ಬಗ್ಗೆ ವಿವರ ಕೇಳಿದ್ದರು. ಅದನ್ನು ಕೊಟ್ಟಿದ್ದೇನೆ. ನಾನು ಯಾವುದೇ ಪಾರ್ಟಿಯಲ್ಲಿ ಭಾಗಿಯಾಗಿಲ್ಲ ಹಾಗೂ ಡ್ರಗ್ ಪೆಡ್ಲರ್ ಅಲ್ಲ ಎಂದು ಸ್ಪಷ್ಟಪಡಿಸಿದರು.
ಸ್ಯಾಂಡಲ್ ವುಡ್ ಡ್ರಗ್ಸ್ ನಂಟು ಪ್ರಕರಣದಲ್ಲಿ ಸಿನೆಮಾ ನಟಿಯರು, ಕ್ರೀಡಾಪಟುಗಳು, ನಿರೂಪಕರು ಹಾಗೂ ಕಿರುತೆರೆ ನಟಿ-ನಟಿಯರನ್ನು ಕರೆದು ಪ್ರತ್ಯೇಕವಾಗಿ ವಿಚಾರಣೆ ಮಾಡಲಾಗುತ್ತಿದೆ.