ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IIFA Awards 2025: ಐಫಾ ಪ್ರಶಸ್ತಿ ಘೋಷಣೆ; ಕಾರ್ತಿಕ್ ಆರ್ಯನ್ ಅತ್ಯುತ್ತಮ ನಟ, ನಿತಾಂಶಿ ಗೋಯೆಲ್ ಅತ್ಯುತ್ತಮ ನಟಿ

IIFA Awards 2025: ಬಾಲಿವುಡ್‌ನ ʼಲಾಪತಾ ಲೇಡಿಸ್ʼ ಸಿನಿಮಾ ಐಫಾದಲ್ಲಿ ದಾಖಲೆಯ10 ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ʼಭೂಲ್‌ ಭೂಲೈಯ 3' ಚಿತ್ರಕ್ಕಾಗಿ ಕಾರ್ತಿಕ್ ಆರ್ಯನ್ ಶ್ರೇಷ್ಠ ನಟ ಮತ್ತು ʼಲಾಪತಾ ಲೇಡಿಸ್ʼ ಚಿತ್ರದಲ್ಲಿನ ಅಭಿನಯಕ್ಕಾಗಿ ನಿತಾಂಶಿ ಗೋಯೆಲ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಐಫಾ ಅವಾರ್ಡ್‌: ʼಲಾಪತಾ ಲೇಡಿಸ್ʼ ಚಿತ್ರಕ್ಕೆ 10 ಪ್ರಶಸ್ತಿಯ ಗರಿ

IIFA Awards 2025

Profile Pushpa Kumari Mar 10, 2025 1:58 PM

ಜೈಪುರ: ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿ (IIFA) ವಿತರಣಾ ಸಮಾರಂಭ ಅದ್ಧೂರಿಯಾಗಿ ನಡೆದಿದೆ. ಜೈಪುರದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಬಾಲಿವುಡ್ ಸೆಲೆಬ್ರಿಟಿಗಳು ಲಗ್ಗೆ ಇಟ್ಟಿದ್ದು ಭರ್ಜರಿ ವೇದಿಕೆಯಲ್ಲಿ ಕಂಗೊಳಿಸಿದರು. ಬಾಲಿವುಡ್ ಸಿನೆಮಾಗಳಲ್ಲಿದೆ ವೆಬ್ ಸೀರಿಸ್‌ಗಳಿಗೂ ಪ್ರಶಸ್ತಿ ನೀಡಲಾಗಿದೆ. ʼಲಾಪತಾ ಲೇಡಿಸ್ʼ ಸಿನಿಮಾ ಐಫಾದ 10 ಪ್ರಶಸ್ತಿಯನ್ನು ತನ್ನದಾಗಿಸಿಕೊಂಡು ಮಿಂಚಿದೆ. ಜನಪ್ರಿಯ ಸಿನಿಮಾ ಸೇರಿದಂತೆ ಹಲವು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ʼಲಾಪತಾ ಲೇಡಿಸ್ʼ ಮಹಿಳಾ ಪ್ರಧಾನ ಚಿತ್ರವಾಗಿದ್ದು, ಇದರಲ್ಲಿ ಮಹಿಳೆಯನ್ನು ವಿಭಿನ್ನವಾದ ಆಯಾಮದಲ್ಲಿ ಚಿತ್ರಿಸಲಾಗಿದೆ. ಮಹಿಳೆಯ ಜೀವನದಲ್ಲಿ ಶಿಕ್ಷಣ ಪ್ರಾಮುಖ್ಯತೆ, ಅನಕ್ಷರತೆಯಿಂದ ಉಂಟಾಗುವ ಸಮಸ್ಯೆ, ಹಳೆಕಾಲದ ಜೀವನ ಶೈಲಿಯ ವಿಭಿನ್ನ ಆಯಾಮ ಎಲ್ಲವನ್ನು ಕತೆಯಲ್ಲಿ ಅಚ್ಚುಕಟ್ಟಾಗಿ ಹೆಣೆಯಲಾಗಿದೆ. ʼಲಾಪತಾ ಲೇಡಿಸ್ʼ ಸಿನೆಮಾ ಕಾಣೆಯಾದ ಮಹಿಳೆಯರ ಹುಡುಕಾಟದ ಸುತ್ತ ಸುತ್ತುತ್ತದೆ. ಇದು ಆಸ್ಕರ್‌ಗೆ ಕೂಡ ನಾಮಿನೇಷನ್‌ ಗಳಿಸಿತ್ತು. ಆದರೆ ಕೊನೆ ಕ್ಷಣದಲ್ಲಿ ಹೊರಬಿದ್ದು ನಿರಾಸೆ ಉಂಟು ಮಾಡಿತ್ತು. ಈಗ ಐಫಾ ಪ್ರಶಸ್ತಿ ಅಂಗಳದಲ್ಲಿ ದಾಖಲೆಯ ಸಾಧನೆ ಮಾಡಿದೆ. ʼಭೂಲ್‌ ಭೂಲೈಯ 3' ಚಿತ್ರಕ್ಕಾಗಿ ಕಾರ್ತಿಕ್ ಆರ್ಯನ್ ಶ್ರೇಷ್ಠ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಪ್ರಶಸ್ತಿ ಪಡೆದವರ ಸಂಪೂರ್ಣ ಪಟ್ಟಿ

ಅತ್ಯುತ್ತಮ ಚಿತ್ರ- ʼಲಾಪತಾ ಲೇಡಿಸ್ʼ

ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ಅಭಿನಯ (ನಟ) - ಕಾರ್ತಿಕ್ ಆರ್ಯನ್ (ʼಭೂಲ್‌ ಭೂಲೈಯ 3')

ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ಅಭಿನಯ (ನಟಿ)- ನಿತಾಂಶಿ ಗೋಯೆಲ್ (ʼಲಾಪತಾ ಲೇಡಿಸ್ʼ)

ಅತ್ಯುತ್ತಮ ನಿರ್ದೇಶನ- ಕಿರಣ್ ರಾವ್ (ʼಲಾಪತಾ ಲೇಡಿಸ್ʼ )

ವಿಲನ್‌ ಪಾತ್ರದಲ್ಲಿ ಅತ್ಯುತ್ತಮ ಅಭಿನಯ - (ನಟ) - ರಾಘವ್ ಜುಯಾಲ್ (ʼಕಿಲ್ʼ)

ಪೋಷಕ ಪಾತ್ರದಲ್ಲಿ ಅತ್ಯುತ್ತಮ ಅಭಿನಯ (ನಟ)- ರವಿ ಕಿಶನ್ (ʼಲಾಪತಾ ಲೇಡಿಸ್ʼ)

ಅತ್ಯುತ್ತಮ ಚೊಚ್ಚಲ ನಿರ್ದೇಶನ- ಕುನಾಲ್ ಕೆಮ್ಮು (ಮಡಗಾಂವ್ ಎಕ್ಸ್ಪ್ರೆಸ್)

ಪೋಷಕ ಪಾತ್ರದಲ್ಲಿ ಅತ್ಯುತ್ತಮ ಅಭಿನಯ (ನಟಿ) -ಜಾಂಕಿ ಬೋಡಿವಾಲಾ (ʼಶೈತಾನ್ʼ)

ಜನಪ್ರಿಯ ವಿಭಾಗದಲ್ಲಿ ಅತ್ಯುತ್ತಮ ಕಥೆ (ಮೂಲ)- ಬಿಪ್ಲಬ್ ಗೋಸ್ವಾಮಿ (ʼಲಾಪತಾ ಲೇಡಿಸ್ʼ)

ಅತ್ಯುತ್ತಮ ಕಥೆ (ಅಡಾಪ್ಟೇಶನ್)- ಶ್ರೀರಾಮ್ ರಾಘವನ್ , ಅರ್ಜಿಲ್ ಬಿಸ್ವಾನ್, ಪೂಜಾ ಲಧಾ ಸೂರ್ತಿ, ಅನುಕೃತಿ ಪಾಂಡೆ (ʼಮೆರ್ರಿ ಕಿಸ್ಮಸ್ʼ)

ಬೆಸ್ಟ್‌ ಡೆಬ್ಯು (ನಟ)-ಲಕ್ಷ್ಯ ಲಲ್ವಾನಿ (ʼಕಿಲ್ʼ)

ಬೆಸ್ಟ್‌ ಡೆಬ್ಯು (ನಟಿ)- ಪ್ರತಿಭಾ ರಂತ (ʼಲಾಪತಾ ಲೇಡಿಸ್ʼ)

ಅತ್ಯುತ್ತಮ ಸಂಗೀತ ನಿರ್ದೇಶಕ- ರಾಮ್ ಸಂಪತ್ (ʼಲಾಪತಾ ಲೇಡಿಸ್ʼ)

ಅತ್ಯುತ್ತಮ ಸಾಹಿತ್ಯ- ಪ್ರಶಾಂತ್ ಪಾಂಡೆ (ʼಲಾಪತಾ ಲೇಡಿಸ್ʼ ಸಿನೆಮಾದ ʼಸಜಿನಿʼ ಹಾಡು)

ಅತ್ಯುತ್ತಮ ಗಾಯಕ -ಜುಬಿನ್ ನೌಟಿಯಲ್ (ʼಆರ್ಟಿಕಲ್ 370ʼ ಚಿತ್ರದ ʼದುವಾʼ)

ಅತ್ಯುತ್ತಮ ಗಾಯಕಿ - ಶ್ರೇಯಾ ಘೋಷಾಲ್- (ʼಭೂಲ್‌ ಭೂಲೈಯ 3' ಸಿನೆಮಾದ ʼಅಮಿಜೆ ತೋಮರ್ʼ)

ಅತ್ಯುತ್ತಮ ಧ್ವನಿ ವಿನ್ಯಾಸ- ಸುಭಾಷ್ ಸಾಹೊ, ಬೊಲೊಯ್ ಕುಮಾರ್ ಡೊಲೊಯ್, ರಾಹುಲ್ ಕರ್ಪೆ (ʼಕಿಲ್ʼ)

ಅತ್ಯುತ್ತಮ ಚಿತ್ರಕಥೆ- ಸ್ನೇಹ ದೇಸಾಯಿ (ʼಲಾಪತಾ ಲೇಡಿಸ್ʼ)

ಅತ್ಯುತ್ತಮ ಸಂಭಾಷಣೆ -ಅರ್ಜುನ್ ಧವನ್, ಆದಿತ್ಯಧರ್, ಆದಿತ್ಯ ಸುಹಾಸ್ ಜಂಭಾಲೆ, ಮೋನಲ್ ಥಾಕರ್ (ʼಆರ್ಟಿಕಲ್ 370ʼ)

ಅತ್ಯುತ್ತಮ ಸಂಕಲನ- ಜಬೀನ್ ಮರ್ಚೆಂಟ್ (ʼಲಾಪತಾ ಲೇಡಿಸ್ʼ)

ಅತ್ಯುತ್ತಮ ಛಾಯಾಗ್ರಹಣ -ರಫೆ ಮೊಹಮ್ಮದ್ (ʼಕಿಲ್ʼ)

ಇದನ್ನು ಓದಿ: Bollywood Gossip: ಮಗನ ಮದುವೆಗೇ ಬರ್ಲಿಲ್ವಾ ಬಾಲಿವುಡ್ ನಟ ರಾಜ್ ಬಬ್ಬರ್? ಸೊಸೆ ಏನಂತಾರೆ..?

ಭಾರತೀಯ ಸಿನಿಮಾದಲ್ಲಿ ಅತ್ಯುತ್ತಮ ಸಾಧನೆ - ರಾಕೇಶ್ ರೋಶನ್

ಅತ್ಯುತ್ತಮ ನೃತ್ಯ ಸಂಯೋಜನೆ- ಬಾಸ್ಕೋ ಸೀಸರ್ (ʼಬ್ಯಾಡ್ ನ್ಯೂಸ್‌ʼನ ʼತೌಬಾ ತೌಬಾʼ)

ಅತ್ಯುತ್ತಮ ಸ್ಪೆಷಲ್ ಎಫೆಕ್ಟ್ (ರೆಡ್ ಚಿಲ್ಲಿಸ್) ವಿಎಫ್ ಎಕ್ಸ್ (ʼಭೂಲ್‌ ಭೂಲೈಯ 3')

ಈ ವೇಳೆ ನಿರ್ಮಾಪಕ ರಾಜ್ ಕಪೂರ್ ಅವರಿಗೆ ವಿಶೇಷ ಗೌರವ ಸಲ್ಲಿಸಲಾಯಿತು.