Sunday, 15th December 2024

Jalandhar Movie: ಪ್ರಮೋದ್‌ ಶೆಟ್ಟಿ ಅಭಿನಯದ ವಿಭಿನ್ನ ಕಥಾಹಂದರದ ʼಜಲಂಧರʼ ಚಿತ್ರ ಬಿಡುಗಡೆಗೆ ಸಿದ್ಧ

Jalandhar Movie

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗ ವಿಶ್ವ ಮಟ್ಟದ ಚಿತ್ರಗಳನ್ನು ನೀಡುತ್ತಿದೆ. ಅತ್ತ್ಯುತ್ತಮ ಕಂಟೆಂಟ್ ಇರುವ ವಿಭಿನ್ನ ಸಿನಿಮಾಗಳು ತೆರೆಗೆ ಬರುತ್ತಿವೆ. ಅಂತಹ ಸಾಲಿಗೆ ಸೇರುವ ಚಿತ್ರವೇ ʼಜಲಂಧರʼ (Jalandhar Movie). ಉತ್ತಮ ಕಥಾಹಂದರದ ಜತೆಗೆ ಮನಮೋಹಕ ಸಂಗೀತವಿರುವ ʼಜಲಂಧರʼ ಚಲನಚಿತ್ರದ ಆಡಿಯೋ ಹಕ್ಕನ್ನು ಸ್ಯಾಂಡಲ್ ವುಡ್‌ನ ಟಾಪ್ ಆಡಿಯೋ ಸಂಸ್ಥೆ ಜಂಕಾರ್ ಆಡಿಯೋ ಪಡೆದುಕೊಂಡಿದೆ.

ಇತ್ತೀಚೆಗಷ್ಟೇ ತೆರೆಕಂಡು ಯಶಸ್ವಿಯಾದ ‘ಲಾಫಿಂಗ್ ಬುದ್ಧʼ ಚಿತ್ರದ ನಾಯಕ ಹಾಗೂ ಸ್ಯಾಂಡಲ್‌ವುಡ್ ಜತೆಗೆ ಪರಭಾಷೆಯಲ್ಲಿಯೂ ಮಿಂಚುತ್ತಿರುವ ಪ್ರಮೋದ್ ಶೆಟ್ಟಿ ನಾಯಕನಾಗಿ ನಟಿಸಿರುವ ಈ ಚಿತ್ರವನ್ನು ಸ್ಟೆಪ್ ಅಪ್ ಪಿಕ್ಚರ್ಸ್ ಲಾಂಛನದಲ್ಲಿ ಮದನ್ ಎಸ್. ನಿರ್ಮಿಸುತ್ತಿದ್ದಾರೆ. ಹೂಡಿ ಚಂದ್ರಮೋಹನ್, ಸಿ.ಎಲ್.ರಮೇಶ್ ರಾಮಚಂದ್ರ , ಪದ್ಮನಾಭನ್ ಮಂಗುದೊಡ್ಡಿ ಸಹ ನಿರ್ಮಾಪಕರಾಗಿದ್ದಾರೆ.

ಹಲವು ಚಿತ್ರಗಳಲ್ಲಿ ಕ್ರಿಯೇಟಿವ್ ಹೆಡ್ ಹಾಗೂ ಸಹ ನಿರ್ದೇಶಕರಾಗಿ ಕೆಲಸ ಮಾಡಿ ಅನುಭವವಿರುವ ವಿಷ್ಣು ವಿ. ಪ್ರಸನ್ನ ಚಿತ್ರಕಥೆ ಬರೆದು ʼಜಲಂಧರʼ ಸಿನಿಮಾದ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಚಿತ್ರಕಥೆಯಲ್ಲಿ ಶ್ಯಾಮ್ ಸುಂದರ್ ಮತ್ತು ಅಕ್ಷಯ್ ಕುಮಾರ್ ಸಹಾಯ ಮಾಡಿದ್ದಾರೆ. ಕೇರಳ ಮೂಲದ ಸರಿನ್ ರವೀಂದ್ರನ್ ಮತ್ತು ವಿದ್ಯಾ ಶಂಕರ್ ಪಿ.ಎಸ್. ಛಾಯಾಗ್ರಹಣ ಹಾಗೂ ಯುವ ಸಂಗೀತ ನಿರ್ದೇಶಕ ಜಿ. ಜತಿನ್ ದರ್ಶನ್ ಮ್ಯೂಸಿಕ್‌ ಈ ಚಿತ್ರಕ್ಕಿದ್ದು ಅನುಭವಿ ಫಿಲಂ ಎಡಿಟರ್ ವೆಂಕಿ ಯುಡಿವಿ ಕತ್ತರಿ ಪ್ರಯೋಗ ಮಾಡಿದ್ದಾರೆ .

ಪ್ರಮೋದ್ ಶೆಟ್ಟಿ ನಾಯಕನಾಗಿ ನಟಿಸಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ರಂಗಭೂಮಿಯ ಹಿನ್ನೆಲೆ ಇರುವ ಸ್ಟೆಪ್ ಅಫ್ ಲೋಕಿ ಅಭಿನಯಿಸಿದ್ದಾರೆ. ಲೋಕಿ ಅವರೇ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಜತೆಗೆ ʼಟಗರು; ಚಿತ್ರದಲ್ಲಿ ಕಾನ್ ಸ್ಟೇಬಲ್ ಪಾತ್ರದ ಮೂಲಕ ಜನಪ್ರಿಯರಾಗಿದ್ದ ಸರೋಜಾ ಖ್ಯಾತಿಯ ನಟಿ ಋಷಿಕಾ ರಾಜ್, ʼಅಧ್ಯಕ್ಷʼ ಖ್ಯಾತಿಯ ನಟಿ ಆರೋಹಿತಾ ಗೌಡ , ಬಲ ರಾಜ್ ವಾಡಿ, ರಘು ರಾಮನಕೊಪ್ಪ, ನವೀನ್ ಸಾಗರ್, ಪ್ರತಾಪ್ ನನಸು, ಆದಿ ಕೇಶವರೆಡ್ಡಿ, ಭೀಷ್ಮಾ ರಾಮಯ್ಯ , ವಿಜಯರಾಜ್ , ಪ್ರಸಾದ್ ಮತ್ತು ಅಂಬು ʼಜಲಂಧರ್ʼ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Swarajya 1942 Movie: ಬಾಲಕನೊಬ್ಬನ ಸ್ವಾತಂತ್ರ್ಯ ಹೋರಾಟದ ಕಥೆ ಹೇಳುವ ‘ಸ್ವರಾಜ್ಯ 1942’; ಮೈನವಿರೇಳಿಸುವ ಟ್ರೈಲರ್‌ ರಿಲೀಸ್‌