ಜಮುನಾ ಅವರಿಗೆ ಪುತ್ರ ವಂಶಿ ಜುಲೂರಿ ಮತ್ತು ಮಗಳು ಶ್ರವಂತಿ ಇದ್ದಾರೆ. ಅವರ ಪತಿ ಜುಲೂರಿ ರಮಣ ರಾವ್ ಪ್ರಾಧ್ಯಾಪಕರಾಗಿದ್ದರು ಮತ್ತು ಅವರು 2014 ರಲ್ಲಿ ನಿಧನರಾಗಿದ್ದರು.
ಜಮುನಾ ಎನ್ಟಿಆರ್, ಎಎನ್‌ಆರ್, ಕೃಷ್ಣ, ಶೋಭನ್ ಬಾಬು ಮತ್ತು ಇತರ ಅನೇಕ ಸ್ಟಾರ್ ನಟರೊಂದಿಗೆ ನಟಿಸಿದ್ದಾರೆ. ಅವರು ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ನೂರಾರು ಪಾತ್ರಗಳನ್ನು ನಿರ್ವಹಿಸಿದ್ದಾರೆ. ರಾಜಕೀಯದಲ್ಲೂ ಭಾಗಿಯಾಗಿದ್ದ ಜಮುನಾ ಅವರು 1980 ರಲ್ಲಿ ಕಾಂಗ್ರೆಸ್ ಸೇರಿದರು.
1989ರಲ್ಲಿ ರಾಜಮಂಡ್ರಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. ಜಮುನಾ ತೆಲುಗು ಆರ್ಟಿಸ್ಟ್ ಅಸೋಸಿಯೇಷನ್ ಸ್ಥಾಪಿಸಿದ್ದಾರೆ ಮತ್ತು ಕಳೆದ 25 ವರ್ಷಗಳಿಂದ ಅದರ ಮೂಲಕ ಸಮಾಜ ಸೇವೆ ಮಾಡುತ್ತಿದ್ದಾರೆ.
Read E-Paper click here