Tuesday, 27th February 2024

ಜಾರ್ಖಂಡ್ ನಟಿ ರಿಯಾ ಕುಮಾರಿ ಗುಂಡಿಟ್ಟು ಹತ್ಯೆ

ಕೋಲ್ಕತ್ತಾ: ದರೋಡೆಕೋರ ತಂಡ ರಾಂಚಿ ಹೈವೇಯಲ್ಲಿ ಜಾರ್ಖಂಡ್ನ ನಟಿ ರಿಯಾ ಕುಮಾರಿ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ನಟಿ ರಿಯಾ ಕುಮಾರಿ (30 ವರ್ಷ) ಎನ್ನುವರನ್ನು ರಾಂಚಿ–ಕೋಲ್ಕತ್ತ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಗಿದ್ದು, ಬುಧವಾರ ಹೌರಾ ಜಿಲ್ಲೆಯ ಮಹೀಶ್ರೇಖಾ ಸೇತುವೆ ಬಳಿ ಈ ಘಟನೆ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ರಿಯಾ ಕುಮಾರಿ ಅವರು ತಮ್ಮ ಮೂರು ವರ್ಷದ ಮಗಳು ಹಾಗೂ ಗಂಡ ಪ್ರಕಾಶ್ ಕುಮಾರ್ ಅವರೊಡನೆ ರಾಂಚಿಯಿಂದ ಕೋಲ್ಕತ್ತಕ್ಕೆ ಕಾರಿನಲ್ಲಿ ತೆರಳುತ್ತಿದ್ದರು.
ಮಹೀಶ್ರೇಖಾ ಸೇತುವೆ ಬಳಿ ಮೂತ್ರ ವಿಸರ್ಜನೆಗೆಂದು ಕಾರು ನಿಲ್ಲಿಸಿದಾಗ ಮೂವರು ದುಷ್ಕರ್ಮಿಗಳು ನಮ್ಮ ಬಳಿ ಬಂದು ದರೋಡೆ ಮಾಡುವ ಉದ್ದೇಶದಿಂದ ಹಲ್ಲೆಗೆ ಯತ್ನಿಸಿ ದರು. ಈ ವೇಳೆ ವಿರೋಧಿಸಲು ಹೋದ ರಿಯಾ ಕುಮಾರಿಗೆ ದುಷ್ಕರ್ಮಿಗಳು ಸನಿಹದಿಂದ ಗುಂಡು ಹಾರಿಸಿದರು.
ತೀವ್ರ ರಕ್ತಸ್ರಾವವಾಗಿ ರಿಯಾ ಆಸ್ಪತ್ರೆಗೆ ತೆಗದುಕೊಂಡು ಹೋಗುವ ಮಾರ್ಗದಲ್ಲಿ ಮೃತಪಟ್ಟಳು’ ಎಂದು ರಿಯಾರ ಗಂಡ ಪ್ರಕಾಶ್ ಕುಮಾರ್ ಹೇಳಿಕೆ ನೀಡಿದ್ದಾರೆ. ಆದರೆ, ಈ ಬಗ್ಗೆ ಪ್ರಕಾಶ್ ಅವರ ಮೇಲೂ ಹೌರಾ ಪೊಲೀಸರಿಗೆ ಅನುಮಾನ ಮೂಡಿದ್ದು, ಪ್ರಕಾಶ್ ಕುಮಾರ್ ಹೇಳಿಕೆಗಳು ಅನುಮಾನಾಸ್ಪದವಾಗಿವೆ ಎಂದಿದ್ದಾರೆ.
ರಿಯಾ ಕುಮಾರಿ ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದರು.

Read E-Paper click here

error: Content is protected !!