Sunday, 15th December 2024

ಜೂನಿಯರ್ ಮೆಹಮೂದ್ ಖ್ಯಾತಿಯ ನಟ ನಯೀಮ್ ಸಯ್ಯದ್ ಇನ್ನಿಲ್ಲ

ಮುಂಬೈ: ಜೂನಿಯರ್ ಮೆಹಮೂದ್ ಎಂದೇ ಖ್ಯಾತ, ಬಾಲಿವುಡ್ ನಟ ನಯೀಮ್ ಸಯ್ಯದ್(67) ಮುಂಬೈನ ಅವರ ನಿವಾಸದಲ್ಲಿ ನಿಧನರಾದರು.

ಹೊಟ್ಟೆಯ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಕಳೆದ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದರು. ಸಾಂತಾಕ್ರೂಜ್ ಸ್ಮಶಾನದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳು ಖಚಿತಪಡಿಸಿವೆ.

ಕಟಿ ಪತಂಗ್, ಮೇರಾ ನಾಮ್ ಜೋಕರ್, ಪರ್ವರೀಶ್ ಮತ್ತು ದೋ ಔರ್ ದೋ ಪಾಂಚ್ ಸೇರಿದಂತೆ ಹಲವಾರು ಹಿಟ್ ಚಿತ್ರಗಳಲ್ಲಿ ಜೂನಿಯರ್ ಮೆಹಮೂದ್ ನಟಿಸಿದ್ದಾರೆ.

ಹಿರಿಯ ನಟ ಜೀತೇಂದ್ರ ಮತ್ತು ಸಚಿನ್ ಪಿಲ್ಗಾಂವ್ಕರ್ ಅವರ ಜೊತೆ ಮೆಹಮೂದ್ ಹಲವು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ಹೊರತಾಗಿ, ಭಾರತ ಮತ್ತು ವಿದೇಶಗಳಲ್ಲಿ ಹಲವಾರು ಸ್ಟೇಜ್ ಶೋಗಳಲ್ಲಿಯೂ ಇಬ್ಬರೂ ಒಟ್ಟಿಗೆ ಭಾಗವಹಿಸಿದ್ದರು.