Thursday, 12th December 2024

ಮಲಬಾರ್‌ ಗೋಲ್ಡ್‌’ಗೆ ನಟ ಜೂನಿಯರ್‌ ಎನ್‌ಟಿಆರ್‌ ಬ್ರ್ಯಾಂಡ್‌ ರಾಯಭಾರಿ

ಬೆಂಗಳೂರು: ಜಾಗತಿಕವಾಗಿ 6ನೇ ಅತಿದೊಡ್ಡ ಆಭರಣ ರಿಟೇಲರ್‌ ಸಂಸ್ಥೆ ಮಲಬಾರ್‌ ಗೋಲ್ಡ್‌ ಆಯಂಡ್‌ ಡೈಮಂಡ್ಸ್‌ಗೆ ನಟ ಜೂನಿಯರ್‌ ಎನ್‌ಟಿಆರ್‌ ಬ್ರ್ಯಾಂಡ್‌ ರಾಯಭಾರಿಯಾಗಿ ನೇಮಕ ಗೊಂಡಿದ್ದಾರೆ.

ಜೂನಿಯರ್‌ ನಂದಮೂರಿ ತಾರಕ ರಾಮರಾವ್‌ ಅವರು ಮಲಬಾರ್‌ ಗೋಲ್ಡ್‌ ಆಯಂಡ್‌ ಡೈಮಂಡ್ಸ್‌ನ ಮುಂದಿನ ಎಲ್ಲ ಗ್ರಾಹಕ ಪ್ರಚಾರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರ ಮಧುರ ಹಾಗೂ ಸ್ಥಿರ ವ್ಯಕ್ತಿತ್ವದೊಂದಿಗೆ ಗ್ರೂಪ್‌ನ ಮೌಲ್ಯಗಳಾದ ವಿಶ್ವಾಸ, ಪಾರದರ್ಶಕತೆ ಹಾಗೂ ಉತ್ಕೃಷ್ಟತೆ ಪ್ರತಿಫ‌ಲಿಸಲಿದೆ ಮಲಬಾರ್‌ ಗ್ರೂಪ್‌ನ ಚೇರ್ಮನ್‌ ಎಂ.ಪಿ. ಅಹಮ್ಮದ್‌ ಸಂತಸ ವ್ಯಕ್ತಪಡಿಸಿದರು.

ಜೂ|ಎನ್‌ಟಿಆರ್‌ ಮಾತನಾಡಿ, ಮಲಬಾರ್‌ ಗೋಲ್ಡ್‌ –ಡೈಮಂಡ್ಸ್‌ನೊಂದಿಗೆ ಮತ್ತೂಮ್ಮೆ ಸಹಯೋಗ ಏರ್ಪಡಿಸಿಕೊಳ್ಳುತ್ತಿರುವುದಕ್ಕೆ ಸಂತೋಷ ವಾಗುತ್ತಿದೆ. ಇದು ಕೇವಲ ಅತ್ಯಂತ ವಿಶ್ವಸನೀಯ ಆಭರಣ ಬ್ರ್ಯಾಂಡ್‌ಗಳ ಪೈಕಿ ಒಂದಾಗಿರುವುದು ಮಾತ್ರವಲ್ಲದೆ, ಭಾರತೀಯ ವಿನ್ಯಾಸ, ಕಲೆ ಮತ್ತು ಸಂಸ್ಕೃತಿಯನ್ನು ಜಾಗತಿಕ ರಂಗದಲ್ಲಿ ಸಕ್ರಿಯವಾಗಿರಿಸುತ್ತಲೇ ಇರುವಂತಹ ಸಂಸ್ಥೆ. ಇವರ ಗ್ರಾಹಕ ಕೇಂದ್ರಿತ ಭರವಸೆಗಳು ಮತ್ತು ಇಎಸ್‌ಜಿ ಉಪಕ್ರಮಗಳು ಅವರನ್ನು ಉದ್ಯಮದಲ್ಲಿ ನಾಯಕತ್ವ ಸ್ಥಾನದಲ್ಲಿರಿಸಿದೆ.

ನಾನು ನಂಬುವ ಹಾಗೂ ಬ್ರ್ಯಾಂಡ್‌ ಹೊಂದಿರುವ ಮೌಲ್ಯಗಳ ನಡುವೆ ಅಪಾರ ಸಾಮ್ಯತೆ ಇರುವುದು ಕಂಡುಬರುತ್ತಿದೆ ಎಂದು ತಿಳಿಸಿದರು.