Saturday, 14th December 2024

ವರ್ಷಾಂತ್ಯದಲ್ಲಿ ರಾಹುಲ್‌-ಅಥಿಯಾ ಮದುವೆ…

ಮುಂಬೈ: ನವೆಂಬರ್ 30ಕ್ಕಿಂತ ಮೊದಲು, ರಾಹುಲ್ʼಗೆ ಮದುವೆಗೆ ಸಮಯವಿಲ್ಲ. ಬಳಿಕ ಅಥಿಯಾ ಶೆಟ್ಟಿಯೊಂದಿಗೆ ಹೊಸ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ.

ಬಾಲಿವುಡ್ ನಟ ಸುನಿಲ್ ಶೆಟ್ಟಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಾಹುಲ್‌, ಅಥಿಯಾ ಅಫೇರ್ ಮತ್ತು ಮದುವೆಗೆ ಕುರಿತು ಓಡಾಡುತ್ತಿದ್ದ ಊಹಾಪೋಹಗಳಿಗೆ ಕ್ಲ್ಯಾರಿಟಿ ಕೊಟ್ಟಿದ್ದಾರೆ.

ಬಾಲಿವುಡ್‌ನಲ್ಲಿ ‘ಅಣ್ಣಾ’ ಎಂದೇ ಜನಪ್ರಿಯರಾಗಿರುವ ಸುನಿಲ್ ಶೆಟ್ಟಿ, ಈಗ ಏಷ್ಯಾ ಕಪ್ ಇದೆ. ವರ್ಲ್ಡ್ ಕಪ್‌, ಇದಾದ್ಮೇಲೆ ಆಸ್ಟ್ರೇಲಿಯಾ ಪ್ರವಾಸ, ಅದರ ನಂತರ ದಕ್ಷಿಣ ಆಫ್ರಿಕಾದೊಂದಿಗೆ ಸರಣಿ ಇದೆ ಮತ್ತು ನಂತರ ಟಿ20 ವಿಶ್ವಕಪ್ ನಡೆಯಲಿದೆ. ಒಂದು ದಿನದ ವಿಶ್ರಾಂತಿ ಮೇಲೆ ನೀವು ಮದುವೆಯಾಗಲು ಸಾಧ್ಯವಿಲ್ಲ ಅಲ್ವಾ’ ಎಂದಿದ್ದಾರೆ.

ಸೆಪ್ಟೆಂಬರ್ 11ರಂದು ಏಷ್ಯಾ ಕಪ್ ಮುಗಿದ ಬಳಿಕ ಭಾರತ ತಂಡವು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಬ್ಯಾಕ್-ಟು-ಬ್ಯಾಕ್ ಸರಣಿಗಳನ್ನ ಆಡಲಿದೆ. ನಂತರ, ತಂಡವು ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲಿದೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಈ ಮೆಗಾ ಕಾರ್ಯಕ್ರಮದ ನಂತ್ರ ಭಾರತ ತಂಡವು ನ್ಯೂಜಿಲೆಂಡ್ ಪ್ರವಾಸಕ್ಕೆ ತೆರಳಲಿದೆ. ಈ ಎಲ್ಲಾ ಪಂದ್ಯಗಳಲ್ಲಿ, ಕೆಎಲ್ ರಾಹುಲ್ ಟೀಮ್ ಇಂಡಿಯಾದ ಪ್ರಮುಖ ಭಾಗವಾಗಲಿದ್ದಾರೆ.