Thursday, 12th December 2024

‘ಕಾಂತಾರ 2’ ಸಿನಿಮಾ ಶೂಟಿಂಗ್ ನವೆಂಬರ್​ನಲ್ಲಿ ಪ್ರಾರಂಭ

ಬೆಂಗಳೂರು: ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಆಗಸ್ಟ್ ತಿಂಗಳಲ್ಲೇ ಕಾಂತಾರ 2 ಸಿನಿಮಾದ ಶೂಟಿಂಗ್ ಆರಂಭ ಆಗಬೇಕಿತ್ತು. ಆದರೆ, ಈಗ ನವೆಂಬರ್​ನಲ್ಲಿ ಸಿನಿಮಾದ ಚಿತ್ರೀಕರಣ ಪ್ರಾರಂಭಿಸಲು ತಂಡ ನಿರ್ಧರಿಸಿದೆ.

ರಿಷಬ್ ಶೆಟ್ಟಿ ನಟನೆಯ ‘ಕಾಂತಾರ’ ಸಿನಿಮಾ ರಿಲೀಸ್ ಆಗಿ ವರ್ಷ ಕಳೆದಿದೆ. ಸದ್ಯ ರಿಷಬ್ ಅವರು ‘ಕಾಂತಾರ 2’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕೆ ಪ್ರೀಕ್ವೆಲ್ ಸಿದ್ಧವಾಗಲಿದೆ ಎಂದು ರಿಷಬ್ ಅಧಿಕೃತ ವಾಗಿ ಘೋಷಣೆ ಮಾಡಿದ್ದಾರೆ. ಈಗ ‘ಕಾಂತಾರ 2’ ಚಿತ್ರದ ಶೂಟಿಂಗ್ ಬಗ್ಗೆ ಹೊಸ ಅಪ್​ಡೇಟ್ ಸಿಕ್ಕಿದೆ.

ರಿಷಬ್ ಶೆಟ್ಟಿ ಅವರು ನಟನಾಗಿ, ನಿರ್ದೇಶಕನಾಗಿ ಸಿನಿಮಾದಲ್ಲಿ ಗಮನ ಸೆಳೆದರು. ಚಿತ್ರಕ್ಕೆ ಸೀಕ್ವೆಲ್ ಬರಲಿದೆ ಎಂದು ಎಲ್ಲರೂ ಭಾವಿಸಿದ್ದರು. ‘ನೀವು ಈಗ ನೋಡಿದ್ದು ಎರಡನೇ ಭಾಗ. ಮುಂದೆ ಬರೋದು ಭಾಗ ಒಂದು’ ಎಂದು ರಿಷಬ್ ಘೋಷಣೆ ಮಾಡುವ ಮೂಲಕ ಎಲ್ಲರಿಗೂ ಸರ್​ಪ್ರೈಸ್ ನೀಡಿದ್ದರು.

ಸದ್ಯ ರಿಷಬ್ ಅವರು ಸ್ಕ್ರಿಪ್ಟ್ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. 2024ರ ಏಪ್ರಿಲ್-ಮೇ ತಿಂಗಳಲ್ಲಿ ಚಿತ್ರವನ್ನು ರಿಲೀಸ್ ಮಾಡಲು ತಂಡ ನಿರ್ಧರಿಸಿದೆ ಎನ್ನಲಾಗುತ್ತಿದೆ.

ಸೆಪ್ಟೆಂಬರ್ 30ಕ್ಕೆ ‘ಕಾಂತಾರ’ ರಿಲೀಸ್ ಆಗಿ ಒಂದು ವರ್ಷ ಕಳೆಯಲಿದೆ.