Sunday, 15th December 2024

ಹಿರಿಯ ನಿರ್ಮಾಪಕ, ವಿತರಕ ಕೆಸಿಎನ್ ಚಂದ್ರಶೇಖರ್ ನಿಧನ

ಬೆಂಗಳೂರು: ಸ್ಯಾಂಡಲ್ವುಡ್ ಹಿರಿಯ ನಿರ್ಮಾಪಕ ಹಾಗೂ ವಿತರಕ ಕೆಸಿಎನ್ ಚಂದ್ರಶೇಖರ್( 69) ಅನಾರೋಗ್ಯದಿಂದ ನಿಧನ ರಾಗಿದ್ದಾರೆ.

ಅನಾರೋಗ್ಯದ ಕಾರಣ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ.

ಚಂದ್ರಶೇಖರ್ ಅವರ ಕುಟುಂಬ ಕನ್ನಡದಲ್ಲಿ ಅನೇಕ ಕ್ಲಾಸಿಕ್ ಚಿತ್ರಗಳನ್ನು ನಿರ್ಮಾಣ ಮಾಡಿದೆ. ಚಂದ್ರಶೇಖರ್ ಅವರ ತಂದೆ ಕೆಸಿಎನ್ ಗೌಡರು ಕನ್ನಡ ಚಿತ್ರರಂಗದ ಪ್ರಸಿದ್ಧ ನಿರ್ಮಾಪಕ, ವಿತರಕ, ಪ್ರದರ್ಶಕರಾಗಿದ್ದರು. ‘ಶರಪಂಜರ’, ‘ದಾರಿ ತಪ್ಪಿದ ಮಗ’, ‘ಬಬ್ರುವಾಹನ’, ‘ಹುಲಿಯ ಹಾಲಿನ ಮೇವು’ ಸೇರಿದಂತೆ ಹಲವು ಸಿನಿಮಾಗಳನ್ನು ಅವರ ಸಂಸ್ಥೆಯ ಮೂಲಕ ನೀಡಿದ್ದರು.