Sunday, 15th December 2024

50ನೇ ವಸಂತಕ್ಕೆ ಕಾಲಿರಿಸಿದ ನಟಿ ಖುಷ್ಬೂ

ತಮಿಳು ಸಿನೆಮಾದಲ್ಲಿ ಹೆಸರುವಾಸಿಯಾದ ನಟಿ, ಕನ್ನಡ ಚಿತ್ರರಂಗದಲ್ಲೂ ತಮ್ಮ ಛಾಫನ್ನು ಮೂಡಿಸಿದವರು. ಇಂದು ೫೦ನೇ ಜನ್ಮದಿನ ಆಚರಿಸಿಕೊಂಡರು.

ಸಾಮಾಜಿಕ ಜಾಲತಾಣದಲ್ಲಿ ನಟಿಗೆ ಸ್ನೇಹಿತರು, ಅಭಿಮಾನಿಗಳು ಮತ್ತು ಕುಟುಂಬಸ್ಥರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಕಳೆದ ಬಾರಿ ಝೀ ಖಾಸಗಿ ವಾಹಿನಿಯ ಸೆಲೆಬ್ರಿಟಿ ಟಾಕ್ ಶೋನಲ್ಲಿ ಕಾಣಿಸಿಕೊಂಡಿದ್ದರು.

ಇನ್ನು ಸೂಪರ್‌ ಸ್ಟಾರ್‌ ರಜನೀಕಾಂತ್ ಅವರ ಅಣ್ಣಾಟ್ಟೆ ಚಿತ್ರದಲ್ಲಿ ಖುಷ್ಬೂ ನಟಿಸುತ್ತಿದ್ದು, ನಯನತಾರಾ, ಮೀನಾ, ಕೀರ್ತಿ ಸುರೇಶ್‌ ಹಾಗೂ ಪ್ರಕಾಶ್ ರಾಜ್ ಸಹ ತಾರಾಗಣದಲ್ಲಿದ್ದಾರೆ.